ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಲು ಪ್ಲಾನ್ ಮಾಡುತ್ತಿದ್ದೀರಾ? ಸೆಕೆಂಡ್ ಹ್ಯಾಂಡ್ ಕಾರು ಬದಲು ಹೊಸ ಕಾರೇ ಖರೀದಿಸಲು ಸಾಧ್ಯವಿದೆ. ಕೇವಲ 5.30 ಲಕ್ಷ ರೂಪಾಯಿ ಒಳಗಿರುವ , ಅತೀ ಸುಲಭವಾಗಿ ಖರೀದಿಸಬಲ್ಲ 5 ಕಾರುಗಳ ಡಿಟೇಲ್ಸ್ ಇಲ್ಲಿದೆ.
ಟಾಟಾ ಇತ್ತೀಚೆಗೆ ಏರಿಸ್ ಕಾರು ಬಿಡುಗಡೆ ಮಾಡಿದೆ. ಟಾಟಾ ಟಿಗೋರ್ ಕಾರಿಗೆ ಗುಡ್ ಬೈ ಹೇಳಿ ಮತ್ತಷ್ಟು ಆಕರ್ಷಕ ವಿನ್ಯಾಸ ಹಾಗೂ ಪರ್ಫಾಮೆನ್ಸ್ ಏರಿಸ್ ಕಾರು ಬಿಡುಗಡೆಯಾಗಿದೆ. ಏರಿಸ್ ಕಾರಿನ ಬೆಲೆ 5.29 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ವಿಶೇಷ ಅಂದರೆ ಇದು ಸೆಡಾನ್ ಕಾರು, ನೇರವಾಗಿ ಮಾರುತಿ ಸುಜುಕಿ ಡಿಸೈರ್, ಹ್ಯುಂಡೈ ಔರಾ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ದೊಡ್ಡ ಕಾರು ಅತೀ ಕಡಿಮೆ ಬೆಲೆಗೆ ಲಭ್ಯವಿದೆ.
25
ಮಾರುತಿ ಅಲ್ಟೋ ಕೆ10
ಮಾರುತಿ ಸುಜುಕಿ ಅಲ್ಟೋ ಕೆ10 ಕಾರು ಜನಪ್ರಿಯ ಹಣ್ಣ ಹ್ಯಾಚ್‌ಬ್ಯಾಕ್ ಕಾರು. ಅಲ್ಕೋ ಕೆ10 ಕಾರಿನ ಬೆಲೆ 3.70 ಲಕ್ಷ ರೂಪಾಯಿಯಿಂದ 5.45 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). 24.39 km/l ಮೈಲೇಜ್ ನೀಡಲಿದೆ. ಅತೀ ಹೆಚ್ಚು ಮಂದಿ ಸಣ್ಣ ಕಾರು ಖರೀದಿ ವೇಳೆ ಮೊದಲ ಆಯ್ಕೆ ಅಲ್ಟೋ ಕೆ10 ಕಾರಾಗಿದೆ.
35
ಮಾರುತಿ ಸುಜುಕಿ ಸೆಲೆರಿಯೋ ಕಾರು
ಮಾರುತಿ ಸುಜುಕಿ ಸೆಲೆರಿಯೋ ಹ್ಯಾಚ್‌ಬ್ಯಾಕ್ ಕಾರು ಭಾರತದ ಮಧ್ಯಮ ವರ್ಗದ ಕುಟುಂಬದ ಜನಪ್ರಿಯ ಕಾರು. ಕಾರು ಖರೀದಿಸಬೇಕು, ಕುಟುಂಬ ಸಮೇತ ಪ್ರಯಾಣಿಸಲು ಅನೂಕೂಲಕ ಸ್ಥಳವಕಾಶಕ್ಕೆ ಸೆಲೆರಿಯೋ ಉತ್ತಮ ಆಯ್ಕೆಯಾಗಿದೆ. ಸೆಲೆರಿಯೋ ಬೆಲೆ 4.7 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಟಾಟಾ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ವಿನ್ಯಾಸ, ಆಕರ್ಷಕ ಬಣ್ಣ, ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಕಾರಾಗಿದೆ. ಟಾಟಾ ಟಿಯಾಗೋ ಕಾರಿನ ಆರಂಭಿಕ ಬೆಲೆ 4.75 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 1199 cc ಸಿಸಿ ಎಂಜಿನ್ ಹೊಂದಿದೆ. ಸುರಕ್ಷತೆಯಲ್ಲಿ 4 ಸ್ಟಾರ್ ಸೇಫ್ಟಿ ಹೊಂದಿದೆ.
55
ಮಾರುತಿ ಸುಜುಕಿ ಎಕ್ಸ್‌ಪ್ರೆಸ್ಸೋ
ಮಾರುತಿ ಸುಜುಕಿ ಕಡಿಮೆ ಬೆಲೆ ಕಾರುಗಳಲ್ಲಿ ಮುಂಚೂಣಿಯಲ್ಲಿದೆ. ಸಣ್ಣ ಕಾರು ಆದರೆ ಏಸ್‌ಯುವಿ ಫೀಲ್ ನೀಡಲು ಎಕ್ಸ್ ಪ್ರೆಸ್ಸೋ ಕಾರು ಲಭ್ಯವಿದೆ. ಕಾರಿನ ಆರಂಭಿಕ ಬೆಲೆ 3.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ವಿಶೇಷ ಅಂದರೆ ಈ ಕಾರು 24.12 ರಿಂದ 25.3 ಕಿಲೋಮೀಟರ್ ಮೈಲೇಜ್ ನೀಡಲಿದೆ. ನಿರ್ವಹಣೆಯೂ ಸುಲಭವಾಗಿದೆ. ಅತೀ ಕಡಿಮೆ ಡೌನ್‌ಪೇಮೆಂಟ್ ಮೂಲಕ ಈ ಕಾರುಗಳನ್ನು ಖರೀದಿಸಲು ಸಾಧ್ಯವಿದೆ.
ಸೂಚನೆ: ಕಾರುಗಳ ಆನ್‌ರೋಡ್ ಬೆಲೆ ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಧಿಕೃತ ಡೀಲರ್ ಸಂಪರ್ಕಿಸಿ.