ಹೊಸ BMW X1 ಖರೀದಿಸಿದ ನಟ ನಿರ್ದೇಶಕ ತರುಣ್ ಸುಧೀರ್, ತಾಯಿ ಜೊತೆ ಮೊದಲ ರೌಂಡ್!

First Published | Apr 2, 2024, 8:33 PM IST

ಕಾಟೇರ ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ತರುಣ್ ಸುಧೀರ್ ಹೊಚ್ಚ ಹೊಸ BMW X1 ಕಾರು ಖರೀದಿಸಿದ್ದಾರೆ. ತಾಯಿ ಜೊತೆ ತೆರಳಿ ಡೆಲಿವರಿ ಪಡೆದುಕೊಂಡ ತರುಣ್ ಸುಧೀರ್, ಕೇಕ್ ಕತ್ತರಿಸಿ, ತಾಯಿ ಕೂರಿಸಿಕೊಂಡು ಹೊಸ ಕಾರಿನಲ್ಲಿ ಮನಗೆ ತೆರಳಿದ್ದಾರೆ. ತರುಣ್ ಸುಧೀರ್ ಹೊಸ ಕಾರಿನ ಬೆಲೆ ಎಷ್ಟು?
 

ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ದೇಶಕ ಎಂದೇ ಗುರುತಿಸಿಕೊಂಡರುವ ತರುಣ್ ಸುಧೀರ್ ಕಾಟೇರ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಇದರ ಜೊತೆಗೆ ಕೆಲ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
 

ಕಾಟೇರ ಯಶಸ್ಸಿನ ಬಳಿಕ ತರುಣ್ ಸುಧೀರ್ ಇದೀಗ ಹೊಚ್ಚ ಹೊಸ BMW X1 ಕಾರು ಖರೀದಿಸಿದ್ದಾರೆ. ಐಷಾರಾಮಿ, ದುಬಾರಿ ಕಾರು BMW X1 ಕಾರನ್ನ ತಾಯಿ ಮಾಲತಿ ಸುಧೀರ್ ಜೊತೆ ತೆರಳಿ ಡೆಲಿವರಿ ಪಡೆದುಕೊಂಡಿದ್ದಾರೆ.
 

Tap to resize

ಡೀಲರ್‌ಶಿಪ್ ಬಳಿ ತರುಣ್ ಸುಧೀರ್ ಹಾಗೂ ತಾಯಿ ಮಾಲತಿ ಸುಧೀರ್ ಹೊಸ BMW X1 ಕಾರನ್ನು ಅನ್‌ಬಾಕ್ಸ್ ಮಾಡಿದ್ದಾರೆ. ಬಳಿಕ ತಾಯಿ ಜೊತೆ ಕೇಕ್ ಹತ್ತರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.
 

ಕಾರು ಡೆಲಿವರಿ ಪಡೆದ ತರುಣ್ ಸುಧೀರ್, ತಾಯಿ ಕೂರಿಸಿಕೊಂಡು ಮನೆಗೆ ತೆರಳಿದ್ದಾರೆ. ತಾಯಿ ಜೊತೆಯಲ್ಲಿ ಹೊಸ ಕಾರಿನಲ್ಲಿ ತರುಣ್ ಸುಧೀರ್ ಮೊದಲ ರೌಂಡ್ ಹೊಡೆದಿದ್ದಾರೆ.
 

ಹೊಸ ಕಾರು ಖರೀದಿಸಿದ ಬೆನ್ನಲ್ಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ. ಈ ಸಂಭ್ರಮ, ಸಂತೋಷಕ್ಕೆ ನೀವು ಹಾಗೂ ನಿಮ್ಮ ಕುಟುಂಬ ಅರ್ಹರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

 BMW X1 ಐಷಾರಾಮಿ ಕಾರು. ಇದರ ಬೆಲೆ ಬೆಂಗಳೂರಿನಲ್ಲಿ 62.95 ಲಕ್ಷ ರೂಪಾಯಿಂದ ಗರಿಷ್ಠ 66.95 ಲಕ್ಷ ರೂಪಾಯಿ. ದುಬಾರಿ ಕಾರು ಇದೀಗ ತರುಣ್ ಸುಧೀರ್ ಮನೆ ಸೇರಿಕೊಂಡಿದೆ.

 BMW X1 ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಎರಡೂ ಆಯ್ಕೆಯಲ್ಲಿ ಲಭ್ಯವಿದೆ. ಡೀಸೆಲ್ ಎಂಜಿನ್ 1995 cc ಹಾಗೂ ಪೆಟ್ರೋಲ್ ಎಂಜಿನ್ 1499 cc ಹೊಂದಿದೆ. 
 

ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತಾ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ದೂರ ಪ್ರಯಾಣ, ನಗರ ಪ್ರಯಾಣಕ್ಕೂ ಈ ಕಾರು ಅತ್ಯುತ್ತಮವಾಗಿದೆ. 

Latest Videos

click me!