ಚೀನಾದ ಶಓಮಿ ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡುತ್ತಿದೆ. ಭಾರತದಲ್ಲಿ ಅತೀದೊಡ್ಡ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಶಒಮಿ ಅತ್ಯಾಧುನಿಕ ಎಲಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. Xiaomi SU7 ಕಾರು ಬಿಡುಗಡೆಗೊಂಡ 27 ನಿಮಿಷಕ್ಕೆ 50 ಸಾವಿರ ಕಾರುಗಳು ಬುಕ್ ಆಗಿವೆ.
ಚೀನಾ ಮೂಲದ ಶಒಮಿ ಎಲೆಕ್ಟ್ರಾನಿಕ್ಸ್ ಕಂಪನಿ ಭಾರತ ಸೇರಿದಂತೆ ಹಲವು ದೇಶಗಳ ಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಶಒಮಿ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.
28
ಹಲವು ಪ್ರಯೋಗ, ಪರೀಕ್ಷೆಗಳ ಬಳಿಕ ಶಓಮಿ ಎಸ್‌ಯು7 ಅನ್ನೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಮೂರು ವೇರಿಯೆಂಟ್‌ಗಳಲ್ಲಿ ನೂತನ ಕಾರು ಲಭ್ಯವಿದೆ.
38
ವಿಶೇಷ ಅಂದರೆ ಈ ಕಾರು ಬಿಡುಗಡೆಯಾದ 27 ನಿಮಿಷಕ್ಕೆ ಬರೋಬ್ಬರಿ 50,000 ಕಾರುಗಳು ಬುಕಿಂಗ್ ಆಗಿವೆ. ಪ್ರತಿ ಸೆಕೆಂಡ್‌ನಲ್ಲಿ 5ಕ್ಕೂ ಹೆಚ್ಚು ಕಾರುಗಳು ಬುಕ್ ಆಗುತ್ತಿದೆ. ಜೊತೆಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
48
ಒಂದು ಬಾರಿ ಚಾರ್ಜ್ ಮಾಡಿದರೆ ಈ ಕಾರು ಬರೋಬ್ಬರಿ 800 ಕಿ.ಮೀ ಮೈಲೇಜ್ ನೀಡಲಿದೆ. 15 ನಿಮಿಷ ಚಾರ್ಜ್ ಮಾಡಿದರೆ 350 ಕಿ.ಮೀ ಪ್ರಯಾಣ ಮಾಡಬಹುದು.
58
ಶಓಮಿ ಎಸ್‌ಯು 7 ಎಲೆಕ್ಟ್ರಿಕ್ ಕಾರು 663 hp ಪವರ್ ಹಾಗೂ 838 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಟೆಸ್ಲಾ ರೀತಿಯ ಅತ್ಯಾಧುನಿಕ ಫೀಚರ್ಸ್ ಇದರಲ್ಲಿದೆ.
68
ಮೊದಲ ಹಂತದಲ್ಲಿ ಈ ಕಾರು ಚೀನಾದಲ್ಲಿ ಬಿಡುಗಡೆ ಯಾಗಿದೆ. ಶೀಘ್ರದಲ್ಲೇ ಇತರ ದೇಶಗಳಲ್ಲೂ ಶಒಮಿ SU7 ಎಲೆಕ್ಟ್ರಿಕ್ ಕಾರು ಬಿಡುಗಡೆ ಗೊಳ್ಳಲಿದೆ.
78
ಚೀನಾದಲ್ಲಿ ಈ ಕಾರಿನ ಬೆಲೆ 215,900 ಯುವನ್. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 24.92 ಲಕ್ಷ ರೂಪಾಯಿ. ಈ ಸೆಗ್ಮೆಂಟ್‌ಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಕಾರು ಇದಾಗಿದೆ.
88
ಈ ಕಾರಿನ ಡಿಸೈನ್ ಮಾಡಿರುವುದು ಶಿಒಮಿ ಡಿಸೈನ್ ಎಂಜಿನೀಯರ್ ಕ್ರಿಸ್ ಬ್ಯಾಂಗ್ಲೆ. ಈ ಕ್ರಿಸ್ BMW ಕಾರು ಸಂಸ್ಥೆಯಲ್ಲಿ ಡಿಸೈನ್ ಎಂಜಿನೀಯರ್ ಆಗಿ ಕೆಲಸ ಮಾಡಿದ್ದರು.