ಹೊಸ ಆಡಿ ಕ್ಯೂ7 ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಇದು ಅಪ್ಪು ನೆಚ್ಚಿನ ಕಾರು!

First Published | Mar 31, 2024, 3:57 PM IST

ಲ್ಯಾಂಬೋರ್ಗಿನಿ, ಆಡಿ ಕ್ಯೂ7 ಸೇರಿದಂತೆ ಕೆಲ ಕಾರುಗಳು ಅಪ್ಪು ನೆಚ್ಚಿನ ಕಾರಾಗಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ನೆಚ್ಚಿನ ಕಾರಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ. ಹೊಚ್ಚ ಹೊಸ ಆಡಿ ಕ್ಯೂ7 ಕಾರು ದೊಡ್ಮನೆ ಸೇರಿದೆ.
 

ನಟ, ಅಭಿಮಾನಿಗಳ ಪಾಲಿನ ದೇವರು ಪುನೀತ್ ರಾಜ್‌ಕುಮಾರ್‌ಗೆ ಕಾರು ಬೈಕ್ ಮೇಲೆ ಹೆಚ್ಚಿನ ಕ್ರೇಜ್ ಇತ್ತು. ಹೀಗಾಗಿ ಲ್ಯಾಂಬೋರ್ಗಿನಿ ಸೂಪರ್ ಕಾರು ಸೇರಿದಂತೆ ಹಲವು ಐಷಾರಾಮಿ ಕಾರುಗಲು ಅಪ್ಪು ಬಳಿ ಇತ್ತು. ಆದರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಿನ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿಲ್ಲ. 

ಅಪ್ಪು ನಿಧನದ ಬಳಿಕ ಲ್ಯಾಂಬೋರ್ಗಿನಿ ಸೇರಿದಂತೆ ಕೆಲ ಕಾರುಗಳನ್ನು ಆಪ್ತರಿಗೆ ನೀಡಿದ್ದರು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಚ್ಚ ಹೊಸ ಆಡಿ ಕ್ಯೂ7 ಕಾರು ಖರೀದಿಸಿದ್ದಾರೆ.  
 

Tap to resize

ಅಪ್ಪು ನೆಚ್ಚಿನ ಕಾರುಗಳ ಪೈಕಿ ಆಡಿ ಕ್ಯೂ7 ಕೂಡ ಒಂದು ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಆಡಿ ಕ್ಯೂ7 ಕಾರು ಖರೀದಿಸಿದ್ದಾರೆ. ಅಪ್ಪು ಕಾರು ಸಂಗ್ರಹದಲ್ಲಿ ಈಗಾಗಲೇ ಒಂದ ಆಡಿ ಕ್ಯೂ7 ಕಾರಿದೆ.

ಆಡಿ ಬೆಂಗಳೂರು ಸೆಂಟ್ರಲ್ ಡೀಲರ್‌ಶಿಪ್‌ನಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಕಾರು ಖರೀದಿಸಿದ್ದಾರೆ. ಇದರ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ

ಸ್ಟೈಲೀಶ್ ಎಸ್‌ಯುವಿ ಕಾರು ಇದಾಗಿದೆ.  2995 cc ಪೆಟ್ರೋಲ್ ಎಂಜಿನ್, 6 ಸಿಲಿಂಡರ್ ಹೊಂದಿದೆ. 335.25bhp ಪವರ್ ಹಾಗೂ 500Nm ಟಾರ್ಕ್ ಸಾಮರ್ಥ್ಯ ಹೊಂದಿದೆ.

0-100 ಕಿ.ಮೀ ವೇಗವನ್ನು ಕೇವಲ 5.9 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಪುನೀತ್ ರಾಜ್‌ಕುಮಾರ್‌ ಕಾರು, ಬೈಕ್ ಮೇಲೆ ಹೆಚ್ಚಿನ ಒಲವು ಹೊಂದಿದ್ದರು. ಹೀಗಾಗಿ ಲ್ಯಾಂಬೋರ್ಗಿನಿ, ಜಾಗ್ವಾರ್ ಎಕ್ಸ್‌ಎಫ್, ರೇಂಜ್ ರೋವರ್ ವೋಗ್, BMW 730 ಎಲ್‌ಡಿ, ಮಿನಿ ಕೂಪರ್ ಕನ್ವರ್ಟೇಬಲ್, ಆಡಿ ಕ್ಯೂ7, BMW ಎಕ್ಸ್6 ಕಾರು ಹೊಂದಿದ್ದರು.

ಈ ಪೈಕಿ ಲ್ಯಾಂಬೋರ್ಗಿನಿ ಕಾರನ್ನು ಅಪ್ಪು 2019ರಲ್ಲಿ ಪತ್ನಿ ಅಶ್ವಿನಿಗೆ ಉಡುಗೊರೆಯಾಗಿ ನೀಡಿದ್ದರು. ಅಪ್ಪು ನಿಧನದ ಬಳಿಕ ಈ ಕಾರನ್ನು ಅಶ್ವಿನಿ ತಮ್ಮ ಸಹೋದರನಿಗೆ ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

Latest Videos

click me!