ಮಿಲ್ಕ್ ಬ್ಯೂಟಿ ತಮನ್ನಾ ನೆಚ್ಚಿನ ಕಾರು ಯಾವುದು? ನಟಿ ಬಳಿ ಇವೆ ಐಷಾರಾಮಿ ವಾಹನ!

First Published | Aug 18, 2023, 6:14 PM IST

ಜೈಲರ್ ಚಿತ್ರದಲ್ಲಿ ನೂ ಕಾವಾಲಯ್ಯ ಹಾಡಿನ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದ ತಮನ್ನಾ ಭಾಟಿಯಾ ಬಳಿ ಹಲವು ಕಾರುಗಳಿವೆ. ಆದರೆ ಈ ಪೈಕಿ ತಮನ್ನಾಗಿ ಇಷ್ಟವಾದ ಕಾರು ಯಾರು ಯಾವುದು? ತಮನ್ನಾ ಬಳಿ ಇರುವ ಐಷಾರಾಮಿ ಕಾರುಗಳು ಯಾವುದು?
 

ಮಿಲ್ಕ್ ಬ್ಯೂಟಿ ತಮನ್ನಾ ಇದೀಗ ಜೈಲರ್ ಚಿತ್ರದ ನು ಕಾವಾಲಯ್ಯ ಹಾಡಿನ ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಈ ಹಾಡಿಗೆ ದೇಶ ವಿದೇಶದಲ್ಲಿ ಅಭಿಮಾನಿಗಳು ಮಾರು ಹೋಗಿದ್ದಾರೆ. ಹಾಡಿಗೆ ಸ್ಟೆಪ್ಸ್ ಹಾಕುತ್ತಿದ್ದಾರೆ.

tamannaah confirms her relatioship with vijay varma nsn

ತಮನ್ನಾ ಮುಂಬೈನ ಜುಹುವಿನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಇದರ ಜೊತೆಗೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರೇಂಜ್ ರೋವರ್ ಹಿಡಿದು, ಬೆಂಜ್ ಸೇರಿದಂತೆ ಹಲವು ಕಾರುಗಳು ತಮನ್ನಾ ಬಳಿ ಇವೆ.

Tap to resize

ತಮನ್ನಾ ಬಳಿ ಇರುವ ಕಾರುಗಳ ಪೈಕಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್ ಕಾರು ನೆಚ್ಚಿನ ಕಾರಾಗಿದೆ. ಈ ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಕಾರು ಇದಾಗಿದ್ದು, ಅತೀ ಹೆಚ್ಚು ಬಾರಿ ತಮನ್ನಾ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
 

ತಮನ್ನಾ ಬಳಿ ಡಿಸ್ಕವರಿ ಸ್ಪೋರ್ಟ್ಸ್ ಜೊತೆಗೆ BMW 230ಐ ಕಾರು ಹೊಂದಿದ್ದಾರೆ.BMW 230ಐ ಕಾರಿನ ಸರಿಸುಮಾರು ಬೆಲೆ 50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ರೋವರ್ ಡಿಸ್ಕವರಿ ಸ್ಪೋರ್ಟ್ಸ್ ಬೆಲೆ 75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 

ಇನ್ನು ತಮನ್ನಾ ಭಾಟಿಯಾ 90 ಲಕ್ಷ ರೂಪಾಯಿ ಬೆಲೆ ಮರ್ಸಿಡೀಸ್ ಬೆಂಜ್ gle ಕಾರಿನ ಒಡತಿಯಾಗಿದ್ದಾರೆ.ಇದರ ಜೊತೆಗೆ ಮಿಸ್ಟುಬಿಶಿ ಪಜೆರೋ ಸ್ಪೋರ್ಸ್ಟ್ SUV ಕಾರು ಹೊಂದಿದ್ದಾರೆ.

ಸರಿಸುಮಾರು ಒಟ್ಟು 2.5 ಕೋಟಿ ರೂಪಾಯಿ ಬೆಲೆ ಕಾರುಗಳು ತಮನ್ನಾ ಬಳಿ ಇವೆ. ಇನ್ನು ಜುಹುವಿನಲ್ಲಿರುವ ಐಷಾರಾಮಿ ಬಂಗಲೆಯನ್ನು 17 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

Tamannaah

ತಮನ್ನ ಭಾರತದ ಗರಿಷ್ಠ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.  ಪ್ರತಿ ಚಿತ್ರಕ್ಕೆ 5 ರಿಂದ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

ತಮನ್ನಾ ಪೋಷಕರು ಹಾಗೂ ಕುಟುಂಬ ಡೈಮಂಡ್ ಉದ್ಯಮದಲ್ಲಿ ತೊಡಗಿಸಿದೆ. ತಮನ್ನಾ ಬಳಿ 2 ಕೋಟಿ ರೂಪಾಯಿ ಬೆಲೆಬಾಳುವ ಡೈಮಂಡ್ ಉಂಗುರವಿದೆ.

Latest Videos

click me!