ಜೈಲರ್ ಸ್ಟಾರ್ ರಜನಿಕಾಂತ್ ಬಳಿ ಇದೆ ದುಬಾರಿ ಕಾರು, ಆದರೆ ತಲೈವಾಗೆ ಈ ಸಿಂಪಲ್ ಕಾರು ಇಷ್ಟ!

First Published | Aug 18, 2023, 1:04 PM IST

ಜೈಲರ್ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಕೋಟಿ ಕೋಟಿ ಆದಾಯಗಳಿಸುತ್ತಿದ್ದರೂ ಜೀವನ ಅತ್ಯಂತ ಸರಳ. ಇಷ್ಟೇ ಅಲ್ಲ ರಜನಿಕಾಂತ್ ಬಳಿ ಹಲವು ದುಬಾರಿ ಕಾರುಗಳಿವೆ. ಆದರೆ ರಜನಿ ಮಾತ್ರ ಈ ಒಂದೇ ಕಾರನ್ನು ಹೆಚ್ಚಾಗಿ ಬಳಸುತ್ತಾರೆ.
 

ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾ ಮೂಲಕ ದೇಶ ವಿದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿದ್ದಾರೆ. 72ನೇ ವಯಸ್ಸಿನಲ್ಲೂ ರಜನಿಕಾಂತ್ ಚಿರ ಯುವಕನಂತೆ ಕಾಣುವ ರಜನಿಕಾಂತ್ ಅದೇ ಸ್ಟೈಲ್, ಅದೇ ಮ್ಯಾನರಿಸಂ, ಅದೆ ಖದರ್ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಲೇ ಇದ್ದಾರೆ.
 

ತಲೈವಾ ಅಥವಾ ತಲೈವರ್ ಎಂದೇ ಕರೆಯಿಸಿಕೊಳ್ಳುವ ರಜನಿಕಾಂತ್ ಬಳಿ ಕೆಲ ಐಷಾರಾಮಿ ಹಾಗೂ ದುಬಾರಿ ಕಾರುಗಳಿವೆ. ಆದರೆ ರಜನಿಕಾಂತ್ ಮಾತ್ರ ಹೆಚ್ಚಾಗಿ ಟೋಯೋಟಾ ಇನ್ನೋವಾದಲ್ಲೇ ಪ್ರಯಾಣ ಮಾಡುತ್ತಾರೆ.

Tap to resize

ರಜನಿ ಬಳಿ ಇರುವ ಇನ್ನೋವಾ ಕಾರು ಹಳೇ ಮಾಡೆಲ್. ಆದರೆ ಈ ಕಾರನ್ನು ಬದಲಿಸುವ ಆಲೋಚನೆಯನ್ನು ಮಾಡಿಲ್ಲ. ತಮ್ಮ ಹಳೇ ಇನ್ನೋವಾ ಕಾರಿನಲ್ಲೇ ಶೂಟಿಂಗ್ ಸೇರಿದಂತೆ ಯಾವುದೇ ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ.

ರಜನಿಕಾಂತ್ ಯಾವುದೇ ಸಮಾರಂಭ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕವಾಗಿ ಟೋಯೋಟಾ ಇನ್ನೋವಾ ಕಾರಿನಲ್ಲೇ ಕಾಣಿಸಿಕೊಂಡಿದ್ದಾರೆ. 

ರಜನಿಕಾಂತ್ ಬಳಿ ಇನ್ನೋವಾ ಮಾತ್ರವಲ್ಲ, ರೇಂಜ್ ರೋವರ್, ಬೆಂಟ್ಲಿ, ಲ್ಯಾಂಬೋರ್ಗಿನಿ ಉರುಸ್ ಸೇರಿದಂತೆ 10 ದುಬಾರಿ ಕಾರುಗಳಿವೆ. ಇದರಲ್ಲಿ ಬೆಂಟ್ಲಿ ಲಿಮೋಸಿನ್ ಕಸ್ಟಮೇಡ್ ಕಾರು ಹೊಂದಿದ್ದಾರೆ. ಇದು ಅತ್ಯಂತ ದುಬಾರಿ ಕಾರಾಗಿದೆ.
 

ಐಷಾರಾಮಿ ಕಾರುಗಳ ಜೊತೆಗೆ ರಜನಿಕಾಂತ್ ತಾವು ಮೊದಲು ಖರೀದಿಸಿದ ಪ್ರಿಮಿಯರ್ ಪದ್ಮಿನಿ ಕಾರನ್ನು ಇಟ್ಟುಕೊಂಡಿದ್ದಾರೆ. ಈ ಕಾರನ್ನು ಸಂಪೂರ್ಣವಾಗಿ ರಿಪೇರಿ ಮಾಡಿ ತಮ್ಮ ಗ್ಯಾರೇಜ್‌ನಲ್ಲಿ ಪಾರ್ಕ್ ಮಾಡಿದ್ದಾರೆ.

ಇನ್ನು 6 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್  ಕಾರನ್ನು ರಜನಿಕಾಂತ್ ಹೊಂದಿದ್ದಾರೆ. ಆದರೆ ಈ ದುಬಾರಿ ಕಾರುಗಳಲ್ಲಿ ರಜನಿ ಕಾಣಿಸಿಕೊಂಡಿದ್ದೇ ತೀರಾ ವಿರಳ.

Latest Videos

click me!