ಲವ್ ಮಾಕ್ಟೇಲ್-3 ಯಶಸ್ಸಿನ ನಂತರ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಮಹೀಂದ್ರಾದ ವಿಶೇಷ ಆವೃತ್ತಿಯ XEV 9e Cineluxe ಕಾರನ್ನು ಖರೀದಿಸಿದ್ದಾರೆ. ಈ ಕಾರು 500+ ಕಿ.ಮೀ ರೇಂಜ್, ಹೋಮ್ ಥಿಯೇಟರ್ ಅನುಭವ ನೀಡುವ ಡಿಸ್ಪ್ಲೇ ಇದರಲ್ಲಿದೆ.
ಲವ್ ಮಾಕ್ಟೇಲ್-3 ಸಿನಿಮಾದ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮಹೀಂದ್ರಾ & ಮಹೀಂದ್ರಾ ಕಂಪನಿಯ ಸ್ಪೆಷಲ್ ಎಡಿಷನ್ ಕಾರು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ XEV 9e Cineluxe ಕಾರ್‌ಅನ್ನು ಅವರು ಮನೆಗೆ ತಂದಿದ್ದಾರೆ. ಇದನ್ನು ಸ್ವತಃ ಮಹೀಂದ್ರಾ ತನ್ನ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದೆ. 29.35 ಲಕ್ಷ ಎಕ್ಸ್‌ಶೋರೂಮ್ ಬೆಲೆ ಹೊಂದಿರುವ ಈ ಕಾರ್‌ಅನ್ನೇ ಡಾರ್ಲಿಂಗ್ ಕೃಷ್ಣ ಆಯ್ಕೆ ಮಾಡಿದ್ದೇಕೆ ಅನ್ನೋದರ ವಿವರ ಇಲ್ಲಿದೆ.
26
ಆಕರ್ಷಕ ಲುಕ್ ಮತ್ತು ಪ್ರೀಮಿಯಂ ಇಂಟೀರಿಯರ್
ಈ ಹೊಸ ಎಡಿಷನ್‌ನಲ್ಲಿ ಗ್ರಾಹಕರಿಗೆ ವಿಶಿಷ್ಟವಾದ 'ಸ್ಯಾಟಿನ್ ಬ್ಲಾಕ್' ಅಥವಾ 'ಸ್ಯಾಟಿನ್ ವೈಟ್' ಎಂಬ ಹೊಚ್ಚಹೊಸ ಎಕ್ಸ್‌ಟೀರಿಯರ್ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಕಾರಿನ ಒಳಗಡೆ ಪ್ರೀಮಿಯಂ ಲುಕ್ ನೀಡಲು 'ಚೆಸ್ಟ್‌ನಟ್ ಬ್ರೌನ್' ಮತ್ತು 'ನಾಕ್ಟರ್ನ್ ಬ್ಲಾಕ್' ಸಂಯೋಜನೆಯ ಸ್ಮೂತ್-ಗ್ರೇನ್ ಲೆದರೆಟ್ ಇಂಟೀರಿಯರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಕಾರಿನ ಕ್ಯಾಬಿನ್ ಅನ್ನು ಒಂದು ಪ್ರೈವೇಟ್ ಲಾಂಜ್‌ನಂತೆ ಕಾಣಿಸುವಂತೆ ಮಾಡಲಾಗಿದೆ.
36
ಹೋಮ್ ಥಿಯೇಟರ್ ಫೀಲ್ ಕೊಡುವ ಸಿನಿಮಾಟಿಕ್ ಎಕ್ಸ್‌ಪೀರಿಯನ್ಸ್
ಕಾರಿನ ಒಳಗೆ ಪ್ರಯಾಣಿಕರಿಗೆ ಅದ್ಭುತ ಸಿನಿಮಾಟಿಕ್ ಅನುಭವ ನೀಡಲು ಇಡೀ ಡ್ಯಾಶ್‌ಬೋರ್ಡ್ ವ್ಯಾಪಿಸಿರುವ 'ಕೋಸ್ಟ್-ಟು-ಕೋಸ್ಟ್' ಟ್ರಿಪಲ್ ಹೆಚ್‌ಡಿ ಡಿಸ್ಪ್ಲೇ ಒದಗಿಸಲಾಗಿದೆ. ಇದರೊಂದಿಗೆ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನ ಹೊಂದಿರುವ 16 ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಸ್ಟುಡಿಯೋ ಗುಣಮಟ್ಟದ ಸೌಂಡ್ ನೀಡುತ್ತದೆ. ಕಾರಿನಲ್ಲಿರುವ ಇನ್ಫಿನಿಟಿ ರೂಫ್ (Infinity Roof) ಮತ್ತು 16 ಮಿಲಿಯನ್‌ಗಿಂತಲೂ ಹೆಚ್ಚು ಬಣ್ಣಗಳ ಆಯ್ಕೆಯಿರುವ ಆಂಬಿಯೆಂಟ್ ಲೈಟಿಂಗ್ ಪ್ರಯಾಣದ ಮೂಡ್ ಅನ್ನೇ ಬದಲಾಯಿಸುತ್ತದೆ.
ಮಹೀಂದ್ರಾ XEV 9e ಸಿನೆಲಕ್ಸ್ ಎಡಿಷನ್ ಅನ್ನು ಅದರ ಟಾಪ್-ಎಂಡ್ 'ಪ್ಯಾಕ್ ಥ್ರೀ' (Pack Three) ವೆರಿಯೆಂಟ್ ಆಧಾರದ ಮೇಲೆ ನಿರ್ಮಿಸಲಾಗಿದೆ. ಇದು ಬಲಿಷ್ಠವಾದ 79 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗಿಂತಲೂ ಹೆಚ್ಚಿನ ರಿಯಲ್-ವರ್ಲ್ಡ್ ರೇಂಜ್ (Real-world range) ನೀಡುತ್ತದೆ. ಇದು ಸುದೀರ್ಘ ಹೈವೇ ಪ್ರಯಾಣವನ್ನು ಅತ್ಯಂತ ನಿರಾಳವಾಗಿಸುತ್ತದೆ.
56
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಫೀಚರ್ಸ್
ಈ ಕಾರಿನಲ್ಲಿ ‘ವಿಷನ್ಎಕ್ಸ್ ಎಆರ್ ಹೆಡ್ಸ್-ಅಪ್ ಡಿಸ್ಪ್ಲೇ’ (AR heads-up display), ಚಾಲಕ ಮತ್ತು ಪ್ರಯಾಣಿಕರ ನಿಗಾ ವಹಿಸುವ ‘ಐಡೆಂಟಿಟಿ ಮಾನಿಟರಿಂಗ್’ (EyeDentity Monitoring), ಆಟೋ ಪಾರ್ಕ್ ಅಸಿಸ್ಟ್ (HandsFree Park), ಸೆಕ್ಯೂರ್360 ಪ್ರೊ ಮತ್ತು ಡಿಜಿಟಲ್ ಕೀ ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದೆ. ಇವೆಲ್ಲವೂ ಸುರಕ್ಷತೆ ಮತ್ತು ಚಾಲನೆಯನ್ನು ಸುಲಭವಾಗಿಸುತ್ತವೆ.
66
ಪ್ರೊಫೈಲ್ ಆಧಾರಿತ ಹೆಚ್‌ವಿಎಸಿ ಮೋಡ್‌ಗಳು
ವಿಶೇಷವಾಗಿ ಈ ಕಾರಿನಲ್ಲಿ ಕ್ಯಾಂಪ್ (Camp), ಕೀಪ್ (Keep) ಮತ್ತು ಸಾಕುಪ್ರಾಣಿಗಳಿಗೆ ಅನುಕೂಲವಾಗುವ 'ಪಾ ಪಾಲ್' (PawPal) ನಂತಹ ಅತ್ಯಾಧುನಿಕ ಹೆಚ್‌ವಿಎಸಿ (HVAC) ಮೋಡ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಕಸ್ಟಮ್ ಡ್ರೈವ್ ಮೋಡ್ಸ್ ಹಾಗೂ ಪರ್ಸನಲೈಸ್ಡ್ ಯೂಸರ್ ಪ್ರೊಫೈಲ್‌ಗಳಿದ್ದು, ಕಾರಿನ ಐಷಾರಾಮಿ ಸೌಕರ್ಯಗಳು ನಿಮ್ಮ ಲೈಫ್‌ಸ್ಟೈಲ್‌ಗೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಮಾರ್ಚ್ 2 ರಿಂದ ಈ ಕಾರ್‌ಗಳ ಬುಕ್ಕಿಂಗ್ ಆರಂಭವಾಗಿದೆ.