ಟಾಟಾ ಮೋಟಾರ್ಸ್ , ಎಂಜಿ ಮೋಟಾರ್ಸ್, ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳಿಗೆ ಚೀನಾದ ಬಿವೈಡಿ ಶಾಕ್ ನೀಡಿದೆ. ಈಗಾಗಲೇ ಟೆಸ್ಟಿಂಗ್ ಮುಗಿಸಿರುವ ಬಿವೈಡಿ ಅಟ್ಟೋ 2 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುತತ್ತಿದೆ. ಇದರ ಬೆಲೆ, ಫೀಚರ್ ,ವಿಶೇಷತೆ ಏನು?
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಎಂಜಿ ಮೋಟಾರ್ಸ್, ಹ್ಯುಂಡೈ, ಮಾರುತಿ, ಮಹೀಂದ್ರ ಸೇರಿದಂತೆ ಹಲವು ಕಾರುಗಳಿಗೆ ತೀವ್ರ ಸ್ಪರ್ಧೆ ಎದುರಾಗಿದೆ. ಭಾರತದಲ್ಲಿ ಈಗಾಗಲೇ ಬಿವೈಡಿ ಕಾರುಗಳು ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆಕರ್ಷಕ ಲುಕ್, ಗರಿಷ್ಠ ಮೈಲೇಜ್ , ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಬಿವೈಡಿ ಇದೀಗ ಭಾರತದಲ್ಲಲಿ ಅಟ್ಟೋ 2 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.
26
ಯಾವ ಕಾರಿಗೆ ಪ್ರತಿಸ್ಪರ್ಧಿ
ಬಿವೈಡಿ ಆಟ್ಟೋ 2 ಎಲೆಕ್ಟ್ರಿಕ್ ಎಸ್‌ಯುವಿ ಕಾರು. ನೇರವಾಗಿ ಟಾಟಾ ನೆಕ್ಸಾನ್, ಮಹೀಂದ್ರ ಬಿಇ, ಎಂಜಿ ಝೆಡ್ ಎಸ್, ಹ್ಯುಂಡ್ರೆ ಕ್ರೆಟಾ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಭಾರತದಲ್ಲಿ ಬಿವೈಡಿ ಅಟ್ಟೋ 2 ಕಾರು ಭಾರತದ ರಸ್ತೆಗಳಲ್ಲಿ ಟೆಸ್ಟಿಂಗ್ ಮುಗಿಸಿದೆ. ಶೀಘ್ರದಲ್ಲೇ ಬಿವೈಡಿ ಅಟ್ಟೋ 2 ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
36
ಬಿವೈಡಿ ಅಟ್ಟೋ 2 ಕಾರು ಮೈಲೇಜ್
ಬಿವೈಡಿ ಅಟ್ಟೋ 2 ಕಾರು 45.1 kWh ಹಾಗೂ 51.1 kWh ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 310 ಕಿಲೋಮೀಟರ್ ಹಾಗೂ 410 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 7.9 ಸೆಕೆಂಡ್‌ನಲ್ಲಿ 0-100 ಕಿ.ಮಿ ವೇಗ ಪಡೆದುಕೊಳ್ಳಲಿದೆ. ಗರಿಷ್ಠ ವೇಗ 160 ಕಿಲೋಮೀಟರ್.
ಬಿವೈಡಿ ಅಟ್ಟೋ 2 ಕಾರಿನ ಬೆಲೆ 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶೇಷ ಅಂದರೆ ಪ್ಯೂರ್ ಎಲೆಕ್ಟ್ರಿಕ್ ಹಾಗೂ ಡಿಎಂ ಪ್ಲಗ್ ಇನ್ ಹೈಬ್ರಿಡ್ ವರ್ಶನ್ ಮೂಲಕ ಕಾರು ಬಿಡುಗಡೆಯಾಗಲಿದೆ. ಚೀನಾದಲ್ಲಿ ಆಟ್ಟೋ 2 ಯಶಸ್ವಿ ಕಾರಾಗಿದೆ. ಇದೀಗ ಭಾರತದಲ್ಲಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆ ಇದೆ.
56
ಹೊಸ ಆಟ್ಟೋ 2 ಕಾರಿನ ಫೀಚರ್
ಅಟ್ಟೋ 2 ಕಾರಿನ ಇಂಟಿರಿಯರ್ ಬ್ಲಾಕ್ ಥೀಮ್ ಇರಲಿದೆ. 12.8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, ಆ್ಯಂಬಿಯೆಂಟ್ ಲೈಟಿಂಗ್, ಚಾರ್ಚಿಂಗ್ ಪೋರ್ಟ್ಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 8.8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಅಡಾಸ್ ಫೀಚರ್, 360 ಡಿಗ್ರಿ ಕ್ಯಾಮೆರಾ, 50W ವೈಯರ್‌ಲೆಸ್ ಚಾರ್ಜರ್, ಪನರೋಮಿಕ್ ಸನ್‌ರೂಫ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.
66
ಕುತೂಹಲ ಕೆರಳಿಸಿದ ಆಟ್ಟೋ 2
ಅಟ್ಟೋ 2 ಕಾರು ಎಲ್ಇಡಿ ಹೆಡ್‌ಲ್ಯಾಂಪ್ಸ್, ಡ್ಯುಯೆಲ್ ಫಂಕ್ಷನ್ ಎಲ್ಇಡಿ ಡಿಆರ್‌ಎಲ್, 17 ಇಂಚಿನ ಅಲೋಯ್ ವ್ಹೀಲ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಫಾಕ್ಸ್ ಸ್ಕಿಡ್ ಪ್ಲೇಟ್, ಬಾಡಿ ಕ್ಲಾಡಿಂಗ್, ರೆಫ್ಲೆಕ್ಟರ್, ರೂಫ್ ಸ್ಪಾಯ್ಲರ್, ಶಾರ್ಕ್ ಫಿನ್ ಆ್ಯಂಟೆನಾ ಇದರಲ್ಲಿದೆ. ಭಾರತದಲ್ಲಿ ಬಿವೈಡಿ ಅಟ್ಟೋ 3 ಕಾರು ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದೀಗ ಅಟ್ಟೋ 2 ಭಾರಿ ಕುತೂಹಲ ಕೆರಳಿಸಿದೆ.