ಮರ್ಸಿಡಿಸ್ ಮೆಬ್ಯಾಕ್ GLS ಲಕ್ಷುರಿ ಕಾರು ಖರೀದಿಸಿದ ಬಾಲಿವುಡ್‌ನ ಮೊದಲ ಗಾಯಕ ವಿಶಾಲ್ ಮಿಶ್ರ!

First Published | Apr 11, 2024, 6:24 PM IST

ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ಮಿಶ್ರಾ ಕಾರು ಖರೀದಿಸಿದ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕಾರಣ ಮರ್ಸಿಡಿಸ್ ಮೆಬ್ಯಾಕ್ GLS ಸೂಪರ್ ಲಕ್ಷುರಿ ಕಾರು ಖರೀದಿಸಿದ ಬಾಲಿವುಡ್‌ನ ಮೊದಲ ಗಾಯಕ ಅನ್ನೋ ಹೆಗ್ಗಳಿಕೆಗೆ ವಿಶಾಲ್ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಈ ಕಾರಿನ ಬೆಲೆ ಎಷ್ಟು?
 

ಬಾಲಿವುಡ್ ಸಿಂಗರ್ ವಿಶಾಲ್ ಮಿಶ್ರಾ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಜ್ GLS600 ಎಸ್‌ಯುವಿ ಕಾರು ಖರೀದಿಸಿದ ವಿಶಾಲ್ ಮಿಶ್ರಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
 

ವಿಶೇಷ ಅಂದರೆ ಮರ್ಸಿಡಿಸ್ ಬೆಂಜ್ GLS600 ಸೂಪರ್ ಐಷಾರಾಮಿ ಕಾರು ಹಲವು ಬಾಲಿವುಡ್ ಸೆಲೆಬ್ರೆಟಿಗಳ ಬಳಿ ಇದೆ. ಆದರೆ ಈ ಕಾರು ಮೊದಲ ಬಾಲಿವುಡ್ ಗಾಯಕ ಅನ್ನೋ ಹೆಗ್ಗಳಿಕೆಗೆ ವಿಶಾಲ್ ಮಿಶ್ರ ಪಾತ್ರರಾಗಿದ್ದಾರೆ. 
 

Tap to resize

ವಿಶಾಲ್ ಮಿಶ್ರ ಬ್ಲಾಕ್ ಶೇಕ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಆಕರ್ಷಕ ಲುಕ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ ಈ ಕಾರಿನ ಆರಂಭಿಕ ಬೆಲೆ  2.92 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
 

ತಾಯಿ ಜೊತೆ ತೆರಳಿ ಕಾರು ಖರೀದಿಸಿದ ವಿಶಾಲ್ ಮಿಶ್ರ, ಹೊಸ ಕಾರಿನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಕಾರಿಗೆ ವಿಶಾಲ್ ಮಿಶ್ರಾ ತಾಯಿ ಪೂಜೆ ಸಲ್ಲಿಸಿದ್ದಾರೆ. 
 

ಮರ್ಸಿಡಿಸ್ ಬೆಂಜ್ ಜಿಎಲ್‌ಎಸ್ ವರ್ಶನ್ ಕಾರುಗಳು 6 ಸೀಟರ್ ಸಾಮರ್ಥ್ಯ ಹೊಂದಿದೆ. ಆದರೆ ಮೇಬ್ಯಾಕ್ ವರ್ಶನ್ ಕಾರುಗಳು ಕೇವಲ 4 ಸೀಟು ಸಾಮರ್ಥ್ಯ ಹೊಂದಿದೆ.
 

ಮೇಬ್ಯಾಕ್  GLS600 ಕಾರು 4.0 ಲೀಟರ್ V8 ಎಂಜಿನ್ ಜೊತೆಗೆ 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಹೊಂದಿದೆ. 557 Ps ಪವರ್ ಹಾಗೂ 730 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 
 

ಆ್ಯನಿಮಲ್ ಚಿತ್ರದ ಪೆಹಲೇ ಭಿ ಮೈ ಹಾಡಿನ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ವಿಶಾಲ್ ಮಿಶ್ರಾ ಇದೀಗ ದುಬಾರಿ ಕಾರು ಖರೀದಿಸಿ ಅಭಿಮಾನಿಗಳ ಖುಷಿ ಇಮ್ಮಡಿಗೊಳಿಸಿದ್ದಾರೆ.
 

kangana New Benz car(

ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು  ಬೆಂಜ್ GLS600 ಕಾರಿನ ಮಾಲೀಕರಾಗಿದ್ದರೆ. ಇತ್ತೀಚೆಗಷ್ಟೆ ಬಾಲಿವುಡ್ ನಟಿ ಕಂಗನಾ ರಣವಾತ್ ಇದೇ ಕಾರು ಖರೀದಿಸಿದ್ದರು. 
 

Latest Videos

click me!