ಭರ್ಜರಿ ಚುನಾವಣೆ ಪ್ರಚಾರ ನಡುವೆ ದುಬಾರಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಖರೀದಿಸಿದ ಕಂಗನಾ!

First Published | Apr 8, 2024, 12:56 PM IST

ಬಾಲಿವುಡ್ ನಟಿ ಕಂಗನಾ ರಣವಾತ್ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿ ಸೇರಿಕೊಂಡಿರುವ ಕಂಗನಾ ಇದೀಗ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಕಂಗನಾ ದುಬಾರಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಖರೀದಿಸಿದ್ದಾರೆ. ರಾಜಕೀಯಕ್ಕೆ ಸೇರಿಕೊಂಡ ಬೆನ್ನಲ್ಲೇ ಕಂಗನಾ 2ನೇ ಬೆಂಜ್ ಕಾರಿನ ಒಡತಿಯಾಗಿದ್ದಾರೆ.

kangana ranaut

ಲೋಕಸಭಾ ಚುನಾವಣೆಗೆ ಧುಮುಕಿರುವ ಕಂಗನಾ ರಣಾವತ್ ಹಲವು ಕಾರಣಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಕಂಗನಾ ವಿರುದ್ಧ ಕಾಂಗ್ರೆಸ್ ಮಾಡಿದ ಕೀಳು ಕಮೆಂಟ್‌ನಿಂದ ಸುದ್ದಿಯಾಗಿದ್ದರು. ಇದೀಗ ಚುನಾವಣಾ ಪ್ರಚಾರದಲ್ಲಿರುವ ಕಂಗನಾ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
 

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಕಂಗನಾ, ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಸೇರಿ ಚುನಾವಣೆ ಪ್ರಚಾರ ನಡೆಸುತ್ತಿರು ಕಂಗನಾ ಇದೀಗ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಖರೀದಿಸಿದ್ದಾರೆ.
 

Tap to resize

ಕಂಗನಾ ರಣಾವತ್ ಖರೀದಿಸಿದ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ ಕಾರಿನ ಬೆಲೆ 2.4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ಮೇಬ್ಯಾಕ್ ಜಿಎಲ್‌ಎಸ್ ಎಡಿಶನ್ ಕಾರು.
 

ಮುಂಬೈನಲ್ಲಿ ಕಂಗನಾ ರಣವಾತ್ ತಮ್ಮ ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಸಲೂನ್‌ನಿಂದ ಹೊರಬಂದ ಕಂಗನಾ, ತಮ್ಮ ಹೊಸ ಮೆಬ್ಯಾಕ್ ಕಾರಿನ ಮೂಲಕ ತೆರಳಿದ್ದಾರೆ.
 

ಕಂಗನಾ ರಣವಾತ್‌ಗೆ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ ಕಾರು ಹೊಸದಲ್ಲ. ಇದಕ್ಕೂ ಮೊದಲು ಕಂಗನಾ ಮರ್ಸಿಡಿಸ್ ಮೆಬ್ಯಾಕ್ S680 ಕಾರು ಖರೀದಿಸಿದ್ದಾರೆ. ಇದರ ಬೆಲೆ 3.6 ಕೋಟಿ ರೂಪಾಯಿ.
 

kangana ranaut

ಇದೀಗ ಕಂಗನಾ ತಮ್ಮ ಹಳೇ ಬೆಂಜ್ ಮೇಬ್ಯಾಕ್ S680 ಕಾರು ಎಕ್ಸ್‌ಚೇಂಜ್ ಮಾಡಿ ಹೊಸ ಮೆಬ್ಯಾಕ್ ಜಿಎಲ್‌ಎಸ್ ಕಾರು ಖರೀದಿಸಿದ್ದಾರೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
 

ಕಂಗನಾ ರಣವಾತ್ ಬಳಿ ಹಲವು ದುಬಾರಿ ಕಾರುಗಳಿವೆ.  BMW 7 ಸೀರಿಸ್, 730LD, ಮರ್ಸಿಡಿಸ್ ಬೆಂಜ್ GLE 350D SUV, ಆಡಿ ಕ್ಯೂ3 ಲಕ್ಷುರಿ ಕಾರುಗಳನ್ನು ಹೊಂದಿದ್ದಾರೆ. 
 

ಬಿಜೆಪಿ ಸೇರಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿರುವ ಬೆನ್ನಲ್ಲೇ ಕಂಗನಾ ಬೆಂಜ್ ಕಾರು ಖರೀದಿಸಿದ್ದಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ನೀಡಿರುವ ಕಂಗನಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos

click me!