ಕೇವಲ 7.73 ಲಕ್ಷ ರೂಗೆ ಹೊಸ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಕಾರು ಲಾಂಚ್!

First Published | Apr 4, 2024, 5:28 PM IST

ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ SUV ಕಾರಿಗೆ ಭಾರತದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಟೊಯೋಟಾ ಕೈಗೆಟುಕವ ದರದಲ್ಲಿ ಅರ್ಬನ್ ಕ್ರೂಸರ್ ಟೈಸರ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ಆರಂಭಿಕ ಬೆಲೆ 7.73 ಲಕ್ಷ ರೂಪಾಯಿ. ಸನ್‌ರೂಫ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.
 

ಹೊಚ್ಚ ಹೊಸ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಕಾರು ಬಿಡುಗಡೆಯಾಗಿದೆ.  ಹೊಚ್ಚ ಹೊಸ ಅರ್ಬನ್ ಕ್ರೂಸರ್ ಟೈಸರ್ 1.0ಲೀ ಟರ್ಬೊ, 1.2ಲೀ ಪೆಟ್ರೋಲ್ ಮತ್ತು ಇ-ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ. 
 

1.0ಲೀ ಟರ್ಬೊ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆಗಳೂ ಇದೆ. ಹೀಗಾಗಿ ಶಕ್ತಿ ಮತ್ತು ಕಾರ್ಯಕ್ಷಮತೆ ಎರಡರ ಕಡೆಗೂ ಆದ್ಯತೆ ನೀಡುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. 1.2ಲೀ ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಇಂಟೆಲಿಜೆಂಟ್ ಗೇರ್ ಶಿಫ್ಟ್ (ಐಜಿಎಸ್) ಜೊತೆಗೆ ಬರುತ್ತದೆ. 1.2ಲೀ ಇ-ಸಿಎನ್‌ಜಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿದೆ.
 

Tap to resize

1.2L ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಕಾರಿನ ಬೆಲೆ 7,73,500 ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 13,03,500 ರೂಪಾಯಿ(ಎಕ್ಸ್ ಶೋ ರೂಂ)
 

ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಟೋಕನ್ ಮೊತ್ತ 11,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು. ಮೇ'2024 ರಿಂದ ವಾಹನ ಡೆಲಿವರಿ ಆರಂಭವಾಗುತ್ತದೆ.

ಅರ್ಬನ್ ಕ್ರೂಸರ್ ಟೈಸರ್ 1.0ಲೀ ಟರ್ಬೊ ಎಂಜಿನ್ ಗರಿಷ್ಠ 100.06 ಪಿಎಸ್ @ 5500 ಆರ್‌ಪಿಎಂ ಶಕ್ತಿಯನ್ನು ಒದಗಿಸುತ್ತಿದ್ದು, ಮ್ಯಾನುಯಲ್‌ನಲ್ಲಿ 21.5* ಕಿಮೀ/ಲೀ ಮತ್ತು ಅಟೋಮ್ಯಾಟಿಕ್ ನಲ್ಲಿ 20.0* ಕಿಮೀ/ಲೀ ನಷ್ಟು ಸೆಗ್ಮೆಂಟ್ ಬೆಸ್ಟ್ ಮೈಲೇಜ್ ನೀಡುತ್ತದೆ. ಜೊತೆಗೆ ಶಕ್ತಿಶಾಲಿ ಡ್ರೈವಿಂಗ್ ಅನುಭವ ನೀಡುತ್ತದೆ.
 

1.2ಲೀ ಪೆಟ್ರೋಲ್ ಎಂಜಿನ್ 89.73 ಪಿಎಸ್ @6000 ಆರ್‌ಪಿಎಂ ನ ಗರಿಷ್ಠ ಶಕ್ತಿಯನ್ನು ನೀಡುತ್ತದೆ. ಮ್ಯಾನುಯಲ್ ನಲ್ಲಿ 21.7* ಮತ್ತು 22.8*(ಎಎಂಟಿ) ಕಿಮೀ/ಲೀ ಇಂಧನ ದಕ್ಷತೆ ಒದಗಿಸುತ್ತದೆ. ಹೊಸ ಅರ್ಬನ್ ಕ್ರೂಸರ್ ಟೈಸರ್ 28.5* ಕಿಮೀ/ಕೆಜಿ ಮೈಲೇಜ್ ನೀಡುತ್ತಿದೆ.. ಇ-ಸಿಎನ್‌ಜಿ ಆಯ್ಕೆಯಲ್ಲಿಯೂ ಲಭ್ಯವಿದೆ.
 

6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್‌ ಆಂಡ್ ರೋಲ್ ಓವರ್ ಮಿಟಿಗೇಷನ್ ಜೊತೆಗೆ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಹೊಂದಿದ್ದು, ಉತ್ತಮ ಸುರಕ್ಷತಾ ಫೀಚರ್ ಗಳಿವೆ. ಆಧುನಿಕ ತಂತ್ರಜ್ಞಾನದ ಫೀಚರ್ ಗಳಾದ ಹೆಡ್-ಅಪ್ ಡಿಸ್ಪ್ಲೇ, 360 ವ್ಯೂ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟ್ ಜೊತೆಗೆ (9") ಎಚ್ ಡಿ ಸ್ಮಾರ್ಟ್‌ಪ್ಲೇ ಕಾಸ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.
 

ಹೊಸ ಉತ್ಪನ್ನಗಳು ಮತ್ತು ಹೊಸ ತಂತ್ರಜ್ಞಾನ ಪರಿಚಯ ಈ ಎರಡು ವಿಚಾರದಲ್ಲೂ ಭಾರತೀಯ ಮಾರುಕಟ್ಟೆಯು ನಮಗೆ ಯಾವಾಗಲೂ ಅತ್ಯಂತ ಮಹತ್ವದ್ದಾಗಿದೆ. ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಆಕಾಂಕ್ಷೆಯಿಂದ 25-ವರ್ಷಗಳಿಂದ ಶ್ರಮಿಸುತ್ತಿದ್ದು, ಉತ್ತಮ ಸ್ಥಾನವನ್ನು ಹೊಂದಿದ್ದೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಸಿಇಒ ಮಸಕಾಜು ಯೋಶಿಮುರಾ ಹೇಳಿದ್ದಾರೆ.
 

Latest Videos

click me!