ಪೊರ್ಶೆ, ಬೆಂಜ್ ಬಳಿಕ ಮತ್ತೊಂದು ಲಕ್ಷುರಿ ಕಾರು ಖರೀದಿಸಿದ ಮಾದುರಿ ದೀಕ್ಷಿತ್, ಇದರ ಬೆಲೆ ಎಷ್ಟು?

First Published | May 13, 2024, 2:58 PM IST

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ವಯಸ್ಸು 56. ಆದರೆ ಈಗಲೂ ಯುವತಿಯರನ್ನೂ ನಾಚಿಸುವ ಸೌಂದರ್ಯದ ಮಾಧುರಿ ದೀಕ್ಷಿತ್ ಬಳಿ ಕೆಲ ದುಬಾರಿ ಕಾರುಗಳಿವೆ. ಇದೀಗ ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಈ ಬಾರಿ ಮಾಧುರಿ, ಐಷಾರಾಮಿ ಹಾಗೂ ದುಬಾರಿ ಕಾರು ಖರೀದಿಸಿದ್ದಾರೆ. ಯಾವ ಕಾರು? ಬೆಲೆ ಎಷ್ಟು?
 

ಬಾಲಿವುಡ್‌ನಲ್ಲಿ ನಟಿ ಮಾಧುರಿ ದೀಕ್ಷಿತ್ ಬೇಡಿಕೆ ಹಾಗೆ ಇದೆ. ಬಾಲಿವುಡ್ ಚಿತ್ರ, ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿರುವ ಮಾಧುರಿ ದೀಕ್ಷಿತ್ ಇದೀಗ ಮತ್ತೊಂದು ದುಬಾರಿ ಕಾರು ಖರೀದಿಸಿದ್ದಾರೆ.  
 

ಮಾಧುರಿ ದೀಕ್ಷಿತ್ ಈ ಬಾರಿ ರೇಂಜ್ ರೋವರ್ ಆಟೋಬಯೋಗ್ರಫಿ LWB 3.0 ಕಾರು ಖರೀದಿಸಿದ್ದಾರೆ. ಡೀಸೆಲ್ ವೇರಿಯಂಟ್ ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ.
 

Tap to resize

ಪತಿ ಡಾ. ಶ್ರೀರಾಮ್ ನೆನೆ ಜೊತೆ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನಲ್ಲಿ ಮಾಧುರಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಜುಹುಗೆ ಇಬ್ಬರು ಜೊತೆಯಾಗಿ ಹೊಸ ಕಾರಿನಲ್ಲಿ ಆಗಮಿಸಿದ್ದಾರೆ. 

ರೇಂಜ್ ರೋವರ್ ಆಟೋಬಯೋಗ್ರಫಿ LWB 3.0 ಕಾರಿನ ಎಕ್ಸ್ ಶೋ ರೂಂ ಬೆಲೆ 3.16 ಕೋಟಿ ರೂಪಾಯಿ. ಆನ್ ರೋಡ್ ಬೆಲೆ 3.79ಕೋಟಿಯಿಂದ 4 ಕೋಟಿ ರೂಪಾಯಿ.
 

ಸನ್‌ಸೆಟ್ ಗೋಲ್ಡ್ ಗ್ಲಾಸಿ ಫಿನೀಶ್ ಬಣ್ಣದ ಕಾರನ್ನು ಮಾಧುರಿ ಖರೀದಿಸಿದ್ದಾರೆ. ಈ ಬಣ್ಣಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕು. ಇದು ಮೈಲ್ಡ್ ಹೈಬ್ರಿಡ್ ಕಾರಾಗಿದೆ.
 

madhuri dixit

ಮಾಧುರಿ ದೀಕ್ಷಿತ್ ಹೆಚ್ಚಾಗಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಎಸ್560 ಕಾರಿನಲ್ಲಿ ಕಾಣಿಸಿಕೊಡಿದ್ದಾರೆ. ತಮ್ಮ ಓಟಾಡಕ್ಕೆ ಮಾಧುರಿ ಇದೇ ಕಾರನ್ನು ಬಳಸುತ್ತಿದ್ದರು. ಇದರ ಬೆಲೆ 2 ಕೋಟಿ ರೂಪಾಯಿ.
 

ಮಾಧುರಿ ಪತಿ ಶ್ರೀರಾಮ್ ಬಳಿ ಹಲವು ಸೂಪರ್ ಕಾರುಗಳಿವೆ. ಪೊರ್ಶೆ, 911, ಫೆರಾರಿ 296 ಜಿಟಿಬಿ ಸೇರಿದಂತೆ ಕೆಲ ಕಾರುಗಳಿವೆ. ಈ ಸಾಲಿಗೆ ಇದೀಗ ರೇಂಜ್ ರೋವರ್ ಆಟೋಬಯೋಗ್ರಫಿ ಸೇರಿಕೊಂಡಿದೆ.
 

ಮಾಧುರಿ ಹಾಗೂ ಶ್ರೀರಾಮ್ ದಂಪತಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮ್ಯಾಕ್ ಕಾರಿನ ಮಾಲೀಕರಾಗಿದ್ದಾರೆ. ನೆಕ್ಸಾನ್ ಇವಿ ಡಾರ್ಕ್ ಎಡಿಶನ್ ಕಾರಿನಲ್ಲಿ ಕೆಲವು ಬಾರಿ ಕಾಣಿಸಿಕೊಂಡಿದ್ದಾರೆ.

Latest Videos

click me!