ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಲಾಂಚ್, ಸೀಟಿಗೆ 2.2 ಮಿಲಿಯನ್ ಹೊಲಿಗೆ 11 ಮೈಲಿ ದಾರ ಬಳಕೆ!

First Published | May 9, 2024, 3:01 PM IST

ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಕಾರು ಬಿಡುಗಡೆಯಾಗಿದೆ. ಅತ್ಯಂತ ದುಬಾರಿ, ಶ್ರೀಮಂತರ ಕಾರು ಎಂದೇ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಹೊಚ್ಚ ಹೊಸ ಬ್ಲಾಕ್ ಬ್ಯಾಡ್ಜ್ ಕಾರು, ಹಲವು ವಿಶೇಷತೆ ಹೊಂದಿದೆ. ಇದರ ಸೀಟಿಗೆ 2.2 ಮಿಲಿಯನ್ ಹೊಲಿಗೆ ಹಾಕಲಾಗಿದೆ. ಇದಕ್ಕಾಗಿ 11 ಮೈಲಿಗಳಷ್ಟು ದಾರ ಬಳಕೆ ಮಾಡಲಾಗಿದೆ. ಈ ಕಾರಿನ ಮತ್ತಷ್ಟು ವಿಶೇಷತೆ ಇಲ್ಲಿದೆ.
 

ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸೀರೀಸ್ II ಕಾರು ಲಾಂಚ್ ಆಗಿದೆ. ನಿರ್ದಿಷ್ಟ ಅಭಿರುಚಿ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಸುಧಾರಿತ ಡಿಜಿಟಲ್ ಇಂಟರ್ಫೇಸ್ ಸ್ಪಿರಿಟ್ ಮತ್ತು ಖಾಸಗಿ ಸದಸ್ಯರನ್ನೊಳಗೊಂಡ ವಿಸ್ಪರ್ಸ್ ವಿಶೇಷ ಹೊಂದಿದೆ.
 

ರೋಲ್ಸ್-ರಾಯ್ಸ್ ನ ಇಂಟೀರಿಯರ್ ಗಳ ಅಂದ ಚಂದ ಮತ್ತು ಸೌಕರ್ಯವನ್ನು ತೀವ್ರವಾಗಿ ಆಸ್ವಾದಿಸಬೇಕು ಎಂದು ಬಯಸುವ ಗ್ರಾಹಕರಿಗಾಗಿ ಇದೀಗ  ಈ ಹೊಸ ಬ್ಲ್ಯಾಕ್ ಬ್ಯಾಡ್ಜ್ ಕಾರು ಬಿಡುಗಡೆಯಾಗಿದೆ. ಎಂಜಿನಿಯರಿಂಗ್, ತಂತ್ರಜ್ಞಾನ, ಬಳಸಿರುವ ಸಾಮಾಗ್ರಿಗಳು ಮತ್ತು ಅದರ ವಿನ್ಯಾಸ ಎಲ್ಲದರಲ್ಲೂ ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸೀರೀಸ್ II ಹೊಸತನ ತುಂಬಿಕೊಂಡಿದೆ.
 

Latest Videos


ಬ್ಲಾಕ್ ಬ್ಯಾಡ್ಜ್ ಕುಲ್ಲಿನನ್ ಸರಣಿ II ಆಕರ್ಷಕವಾದ ಮುಂಭಾಗದ ವಿನ್ಯಾಸದೊಂದಿಗ ಗಮನ ಸೆಳೆಯುವಂತೆ ರೂಪುಗೊಂಡಿದೆ. ಕೆಳಭಾಗದ ಏರ್ ಇಂಟೇಕ್ ವಿನ್ಯಾಸವು ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಈ ವಿಶೇಷ ವಿನ್ಯಾಸವು ಈ ಮೋಟಾರ್ ಕಾರಿನ ವೈಶಿಷ್ಟ್ಯವನ್ನು ಪ್ರಸ್ತುತ ಪಡಿಸುತ್ತದೆ. ಕ್ರಿಯಾತ್ಮಕ ವಿನ್ಯಾಸವನ್ನು ಮನದಟ್ಟು ಮಾಡುತ್ತದೆ. ಇದರ ಮೇಲೆ ಕಂಪನಿಯ ಐತಿಹಾಸಿಕ ಪ್ಯಾಂಥಿಯಾನ್ ಗ್ರಿಲ್ ಇದೆ.  
 

ಬ್ಲ್ಯಾಕ್ ಬ್ಯಾಡ್ಜ್‌ ಕಾರಿನಲ್ಲಿ ಗ್ರಿಲ್ ಅನ್ನು ಸೀರೀಸಿನ ವಿಶೇಷವಾದ ಕಪ್ಪು ಬಣ್ಣದಲ್ಲಿ ವಿನ್ಯಾಸ ಮಾಡಲಾಗಿದೆ. ಈ ಮಧ್ಯೆ ಬೆಳ್ಳಿಯ 'ಹಾರಿಜಾನ್ ಲೈನ್' ಮೋಟಾರು ಕಾರಿನ ವರ್ಟಿಕಲ್ ಡೇ ಟೈಮ್ ಲೈಟುಗಳಲ್ಲಿ ಹಾದು ಹೋಗಿದ್ದು, ಆ ವಿನ್ಯಾಸವು ಅದ್ದೂರಿಯಾಗಿದೆ. ಈ ಕಾರು ಸಂಪೂರ್ಣ ಕಪ್ಪು ಬಣ್ಣದಲ್ಲಿಯೂ ಲಭ್ಯವಿದೆ.
 

ಸ್ಪಿರಿಟ್ ಆಫ್ ಎಕ್ಸ್‌ ಟಸಿ ಪ್ರತಿಮೆಯನ್ನು ಒಳಗೊಂಡು ಎಲ್ಲಾ ಇಂಟೀರಿಯರ್ ಅಂಶಗಳು ಕಪ್ಪು ಬಣ್ಣದಲ್ಲಿ ಮಾಡಲಾಗಿದೆ. ವಿಶೇಷವಾಗಿ ಬ್ಲ್ಯಾಕ್ ಬ್ಯಾಡ್ಜ್‌ ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈಗ ಕಿಟಕಿಯನ್ನು ಸುತ್ತುವರೆದಿರುವ ಅಂಶಗಳು ಮತ್ತು ಬಾಗಿಲಿನ ಹಿಡಿಕೆಗಳಿಂದ ಹಿಡಿದು ಸಮಸ್ತವೂ ಕಪ್ಪು ಬಣ್ಣದ ತೀವ್ರತೆಯನ್ನು ಹೊಂದಿದೆ.
 

ಪ್ರತಿಯೊಂದು ಭಾಗವನ್ನು ಕೂಡ ಕಂಪನಿಯ ಕುಶಲಕರ್ಮಿಗಳು ಕೈಯಿಂದಲೇ ತಯಾರಿಸುತ್ತಾರೆ ಅನ್ನುವುದು ವಿಶೇಷ. ಮೊದಲನೆಯದಾಗಿ, ಹಾರ್ಡ್‌ವೇರ್ ಪ್ರೈಮರ್‌ಗಾಗಿ 'ಕೀ' ಅನ್ನು ಒದಗಿಸಲು ಹ್ಯಾಂಡಲ್‌ ನಲ್ಲಿ ಬೆಳಕಿನ ಅಪಘರ್ಷಕವನ್ನು ಬಳಸಲಾಗುತ್ತದೆ. ಅದರ ಮೇಲೆ ನಾಲ್ಕು ಪದರಗಳ ಕಪ್ಪು ಬಣ್ಣವನ್ನು ಪೇಂಟ್ ಮಾಡಲಾಗುತ್ತದೆ. ಕ್ಯೂರಿಂಗ್ ಮಾಡಿದ ನಂತರ, ಈ ಭಾಗಗಳು ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸೀರೀಸ್ IIರ ಶ್ರೀಮಂತವಾದ, ಹೆಚ್ಚಿನ ಹೊಳಪು ಹೊಂದಿರುವ ಕೋಚ್‌ ವರ್ಕ್‌ಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಪ್ರತ್ಯೇಕವಾಗಿ ಪಾಲಿಶ್ ಕೂಡ ಮಾಡಲಾಗುತ್ತದೆ.
 

ಹೊಸ ಡ್ಯುಯಾಲಿಟಿ ಟ್ವಿಲ್ ಸೀಟ್ ಗಳನ್ನು 2.2 ಮಿಲಿಯನ್ ಹೊಲಿಗೆಗಳನ್ನು ಮತ್ತು 11 ಮೈಲುಗಳಷ್ಟು ದಾರವನ್ನು ಬಳಸಿಕೊಂಡು ರಚಿಸಲಾಗಿದೆ 
ಹೊಸ ಸೀಟುಗಳು ಪರ್ಫೋರೇಷನ್ (ರಂಧ್ರೀಕರಣ) ಶೈಲಿಯಲ್ಲಿ ರೂಪುಗೊಂಡಿದೆಈ ರಂದ್ರೀಕರಣ ಮಾದರಿಯ ಸೀಟ್ ಗಳು 107,000 ರಂದ್ರಗಳನ್ನು ಒಳಗೊಂಡಿವೆ

ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸೀರೀಸ್ II ಗ್ರಾಹಕರು ಮ್ಯಾಟ್ ಮೇಲ್ಮೈಗಳಿಗೆ ಎಕ್ಸ್ ಟೀರಿಯರ್ ಬಣ್ಣಗಳನ್ನು ಹೊಂದುವ ಅವಕಾಶ ಪಡೆದಿದ್ದಾರೆ. ಜೊತೆಗೆ ಸೂಕ್ಷ್ಮವಾಗಿ ವರ್ಧಿಸಲಾದ ಲೋವರ್ ಸಿಲ್, ವೇಲೆನ್ಸ್ ಮತ್ತು ಲೋವರ್ ಫ್ರಂಟ್ ಬಂಪರ್ ಗಳಿಗೆ ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸೀರೀಸ್ IIನ ವಿಶೇಷ ಬಣ್ಣ ಒದಗಿಸಲಾಗುತ್ತದೆ. 
 

click me!