Published : Mar 17, 2024, 04:54 PM ISTUpdated : Mar 17, 2024, 04:55 PM IST
ಬಾಲಿವುಡ್ ನಟಿ, ಸಂಸದೆ ಕಿರನ್ ಖೇರ್ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLS ಕಾರು ಖರೀದಿಸಿದ್ದಾರೆ. ಆಜಯ್ ದೇವಗನ್, ಅರ್ಜನ್ ಕಪೂರ್ ಸೇರಿದಂತೆ ಕೆಲವೇ ಕೆಲವು ಬಾಲಿವುಡ್ ನಟ ನಟಿಯರ ಬಳಿ ಈ ಕಾರಿದೆ. ಇದೀಗ ಕಿರಣ್ ಖೇರ್ ಕೂಡ ಈ ಕಾರಿನ ಮಾಲಕಿಯಾಗಿದ್ದಾರೆ.
ಬಾಲಿವುಡ್ ಸೆಲೆಬ್ರೆಟಿಗಳು ಹೊಸ ಕಾರು ಖರೀದಿಸುವುದು ಸಾಮಾನ್ಯ. ತಮ್ಮ ಹಳೇ ಕಾರು ಬದಲಾಯಿಸುವುದು, ಚಿತ್ರದ ಯಶಸ್ಸಿನ ಬಳಿಕ ಹೊಸ ಕಾರು ಖರೀದಿಗಳು ನಡೆಯುತ್ತಿರುತ್ತದೆ. ಇದೀಗ ಬಾಲಿವುಡ್ ನಟಿ ಕಿರಣ್ ಖೇರ್ ಸುದ್ದಿಯಲ್ಲಿದ್ದಾರೆ.
27
ಬಾಲಿವುಡ್ ನಟಿ, ಬಿಜೆಪಿ ನಾಯಕ ಕಿರಣ್ ಖೇರ್ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLS ಕಾರು ಖರೀದಿಸಿದ್ದಾರೆ. ಸಿಲ್ವರ್ ಬಣ್ಣದ ಕಾರನ್ನು ಕಿರಣ್ ಖೇರ್ ಖರಿದಿಸಿದ್ದಾರೆ.
37
ಕಿರನ್ ಖೇರ್ ಖರೀದಿಸಿದ ಹೊಚ್ಚ ಹೊಸ ಕಾರಿನ ಬೆಲೆ 1.32 ಕೋಟಿ ರೂ(ಎಕ್ಸ್ ಶೋ ರೂಂ). ಮೇಬ್ಯಾಕ್ ಮಾಡೆಲ್‌ನಲ್ಲಿ ಇದು ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
47
ಅಜಯ್ ದೇವಗನ್, ಆಯುಷ್ಮಾನ್ ಖುರಾನ, ರಾಕುಲ್ ಪ್ರೀತ್, ಅರ್ಜುನ್ ಕಪೂರ್ ಸೇರಿದಂತೆ ಕೆಲವೇ ಕೆಲವು ಮಂದಿ ಈ ಮರ್ಸಿಡಿಸ್ ಬೆಂಜ್ GLS ಕಾರು ಖರೀದಿಸಿದ್ದಾರೆ. ಈ ಸಾಲಿಗೆ ಕಿರಣ್ ಖೇರಿ ಸೇರಿದ್ದಾರೆ.
57
ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಕಾರಿನಲ್ಲಿ MBUX ಮಲ್ಟಿಮೀಡಿಯಾ ಸಿಸ್ಟಮ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ಸೇರಿದಂತೆ ಅತ್ಯಾಕರ್ಷಕ ಕ್ಯಾಬಿನ್ ಹೊಂದಿದೆ.
67
ಮರ್ಸಿಡಿಸ್ ಬೆಂಜ್ GLS ಕಾರು 3.0 ಲೀಟರ್ 6 ಸಿಲಿಂಡರ್ ಎಂಜಿನ್ ಹೊಂದಿರು ಈ ಕಾರು 375 bhp ಪವರ್ ಹಾಗೂ 750 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
77
9 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ ಆಲ್ ವ್ಹೀಲ್ ಡ್ರೈವ್ ಹೊಂದಿದೆ. ಮರ್ಸಿಡಿಸ್ ಬೆಂಜ್ GLS ಕಾರಿನಲ್ಲಿ ಇತ್ತೀಚೆಗೆ ಹೈಬ್ರಿಡ್ 4ಮ್ಯಾಟಿಕ್ ಆಯ್ಕೆಯನ್ನೂ ಪರಿಚಯಿಸಲಾಗಿದೆ.