ಅನಿಲ್ ಕಪೂರ್ ದೀಪಾವಳಿ ಹಬ್ಬದ ಸಂಭ್ರಮ ಡಬಲ್, ಮನೆಗೆ ಬಂತು ಹೊಸ ಮರ್ಸಿಜಿಸ್ ಮೇಬ್ಯಾಕ್!

First Published | Nov 12, 2023, 12:04 AM IST

ದೀಪಾವಳಿ ಹಬ್ಬಕ್ಕೆ ಬಾಲಿವುಡ್ ನಟ ಅನಿಲ್ ಕಪೂರ್ ಸಂಭ್ರಮ ಡಬಲ್ ಆಗಿದೆ. ಈ ಬಾರಿ ಅನಿಲ್ ಕಪೂರ್ ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಇತರ ಕುತೂಹಲ ಮಾಹಿತಿ ಇಲ್ಲಿದೆ.
 

ದೀಪಾವಳಿ ಹಬ್ಬಕ್ಕೆ ಚಿನ್ನ, ಹೊಸ ಕಾರು ಸೇರಿದಂತೆ ಶಾಪಿಂಗ್ ಭರಾಟೆ ಜೋರು. ಈ ಬಾರಿ ಬಾಲಿವುಡ್ ನಟ ಅನಿಲ್ ಕಪೂರ್ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಖರೀದಿಸಿದ್ದಾರೆ.
 

ಎಮರಾಲ್ಡ್ ಗ್ರೀನ್ ಕಲರ್‌ನ ಮರ್ಸಡೀಸ್ ಮೇಬ್ಯಾಕ್ ಎಸ್ 580 ಕಾರನ್ನು ಅನಿಲ್ ಕಪೂರ್ ಖರೀದಿಸಿದ್ದಾರೆ. ಇದರ ಎಕ್ಸ್ ಶೋ ರೂಂ ಆರಂಭಿಕ ಬೆಲೆ 2.69 ಕೋಟಿ ರೂಪಾಯಿ.
 

Tap to resize

ಅನಿಲ್ ಕಪೂರ್‌ಗೆ ಮರ್ಸಿಡೀಸ್ ಕಾರುಗಳು ಹೊಸದಲ್ಲ. ಈಗಲೇ ಬಾಲಿವುಡ್ ನಟ ಅನಿಲ್ ಕಪೂರ್ ಮರ್ಸಿಡಿಸ್ ಮೇಬ್ಯಾಕ್ ಎಸ್ 500 ಕಾರಿನ ಮಾಲೀಕರಾಗಿದ್ದಾರೆ. 

ಅನಿಲ್ ಕಪೂರ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆಡಿ ಎ8 ಸೆಡಾನ್ ಕಾರನ್ನು ಅನಿಲ್ ಕಪೂರ್ ಹೊಂದಿದ್ದಾರೆ ಇದರ ಜೊತೆಗೆ ಲ್ಯಾಂಡ್ ರೋವರ್ ಕಾರುಗಳನ್ನು ಹೊಂದಿದ್ದಾರೆ.
 

BMW 5 ಸೀರಿಸ್ ಕಾರು ಕೂಡ ಅನಿಲ್ ಕಪೂರ್ ಬಳಿ ಇದೆ. ಇಷ್ಟೇ ಅಲ್ಲ ವೋಲ್ವೋ XC 90 ಕಾರು ಇವರ ಬಳಿ ಇದೆ. ಇನ್ನು ಲ್ಯಾಂಬೋರ್ಗಿನಿ ಗಲ್ಲಾರ್ಡೋ ಸ್ಪೈಡರ್ ಕಾರನ್ನು ಹೊಂದಿದ್ದಾರೆ.

ಸದ್ಯ ಅನಿಲ್ ಕಪೂರ್ ಖರೀದಿಸಿರುವ ಮೇಬ್ಯಾಕ್ ಎಸ್ 580 ಕಾರು 4-ಲೀಟರ್ V8 ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿದೆ. 612 PS ಪವರ್ ಹಾಗೂ 900 Nm ಪೀಕ್ ಟಾರ್ಗ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ADAS ಟೆಕ್ನಾಲಜಿ ಫೀಚರ್, ಗರಿಷ್ಠ ಸುರಕ್ಷತೆ ಫೀಚರ್, 360 ಡಿಗ್ರಿ ಕ್ಯಾಮೆರಾ, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
 

9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದ್ದು, ಆಲ್ ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿದೆ. 100 ಕಿಲೋಮೀಟರ್ ವೇಗವನ್ನು ಕೇವಲ 4.8 ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳಲಿದೆ.

Latest Videos

click me!