ದೀಪಾವಳಿ ಆಫರ್, ಮಾರುತಿ ಸ್ವಿಫ್ಟ್, ಸೆಲೆರಿಯೋ ಸೇರಿ ಆಯ್ದ ಕಾರಿನ ಮೇಲೆ 59 ಸಾವಿರ ಡಿಸ್ಕೌಂಟ್!

First Published | Nov 7, 2023, 5:12 PM IST

ಮಾರುತಿ ಸುಜುಕಿ ದೀಪಾವಳಿ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಅರೆನಾ ಮಾಡೆಲ್ಸ್ ಕಾರುಗಳಿಗೆ ಗರಿಷ್ಠ 59,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ದೀಪಾವಳಿ ಹಬ್ಬದ ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

Diwali festival offers Maruti suzuki arena models discount up to rs 59000 ckm

ದೀಪಾವಳಿ ಹಬ್ಬಕ್ಕೆ ಒಂದೊಂದೆ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ಘೋಷಿಸುತ್ತಿದೆ. ಇದೀಗ ಮಾರುತಿ ಸುಜುಕಿ ಸರದಿ.ಮಾರುತಿ ಸುಜುಕಿ ಅರೆನಾ ಮಾಡೆಲ್ಸ್ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ.

Diwali festival offers Maruti suzuki arena models discount up to rs 59000 ckm

ಮಾರುತಿ ಸುಜುಕಿ ಅರೆನಾ ಮಾಡೆಲ್ಸ್ ಕಾರುಗಳ ಡಿಸ್ಕೌಂಟ್ ಆಫರ್ ನವೆಂಬರ್ 12ರವರೆಗೆ ಮಾತ್ರ ಲಭ್ಯವಿದೆ. ಇದು ದೀಪಾವಳಿ ಹಬ್ಬದ ಸೀಮಿತ ಅವಧಿಯ ಆಫರ್ ಆಗಿದೆ.

Tap to resize

ಮಾರುತಿ ಸುಜುಕಿ ಎಸ್‌ಪ್ರೆಸ್ಸೋ ಕಾರಿಗೆ ಒಟ್ಟು 54,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. 30,000 ಕ್ಯಾಶ್ ಡಿಸ್ಕೌಂಟ್, 20,000 ಕ್ಯಾಶ್ ಡಿಸ್ಕೌಂಟ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಮಾರುತಿ ಸುಜುಕಿ ಸೆಲೆರಿಯೋ ಕಾರಿಗೆ ಒಟ್ಟು 59,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದರಲ್ಲಿ 35,000 ರೂಪಾಯಿ ನಗದು ಡಿಸ್ಕೌಂಟ್ ಘೋಷಿಸಲಾಗಿದೆ. ಸೆಲೆರಿಯಾ ಕಾರಿನ ಬೆಲೆ 5.37 ಲಕ್ಷ ರೂಪಾಯಿಯಿಂದ 7.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿಗೆ ಒಟ್ಟು 49,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 25,000 ರೂಪಾಯಿ ಕ್ಯಾಶ್, 20,000 ರೂ ಎಕ್ಸ್‌ಚೇಂಜ್ ಬೋನಸ್ ಹಾಗೂ 4,000 ರೂಪಾಯಿ ಡಿಸ್ಕೌಂಟ್ ಒಳಗೊಂಡಿದೆ. ವ್ಯಾಗನರ್ ಕಾರಿನ ಬೆಲೆ 5.54 ಲಕ್ಷ ರೂನಿಂದ 7.42 ಲಕ್ಷ ರೂ(ಎಕ್ಸ್ ಶೋ ರೂಂ)

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮೇಲೆ ಒಟ್ಟು 49,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷ ರೂಪಾಯಿಂದ 9.03 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
 

ಮಾರುತಿ ಸುಜುಕಿ ಅಲ್ಟೋಕೆ10 ಕಾರಿನ ಮೇಲೆ ಒಟ್ಟು 49,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 30,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂ ಎಕ್ಸ್‌ಚೇಂಜ್ ಬೋನಸ್ ಹಾಗೂ 4,000 ರೂಪಾಯಿ ಕಾರ್ಪೋರೇಟ್ ಬೋನಸ್ ಆಫರ್ ನೀಡಲಾಗಿದೆ.

ಅಲ್ಟೋ 800 ಕಾರಿನ ಮೇಲೆ 15,000 ರೂ ಡಿಸ್ಕೌಂಟ್, ಮಾರುತಿ ಇಕೋ ಕಾರಿನ ಮೇಲ ಒಟ್ಟು 29,000 ರೂಪಾಯಿ, ಮಾರುತಿ ಸುಜುಕಿ ಡಿಸೈರ್ ಕಾರಿನ ಮೇಲೆ 10,00 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹತ್ತಿರದ ಮಾರುತಿ ಸುಜುಕಿ ಅರೆನಾ ಡೀಲರ್ ಬಳಿ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.

Latest Videos

click me!