ಭಾರತಕ್ಕೆ ಕಾಲಿಟ್ಟಿ ಲೋಟಸ್ ಬ್ರಿಟಿಷ್ ಕಾರು, ಒಂದು ಚಾರ್ಜ್‌ಗೆ 490 ಕಿ.ಮೀ ಮೈಲೇಜ್!

Published : Nov 09, 2023, 07:44 PM IST

ಬ್ರಿಟಿಷ್ ಆಟೋಮೊಬೈಲ್ ಲೋಟಸ್ ಭಾರತಕ್ಕೆ ಕಾಲಿಟ್ಟಿದೆ. ಲ್ಯಾಂಬೋರ್ಗಿನಿ ಕಾರಿನ ನೇರ ಪ್ರತಿಸ್ಪರ್ಧಿಯಾಗಿರುವ  ಈ ಕಾರು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದೀಗ ಲೋಟಸ್ ಭಾರತದಲ್ಲಿ ಎಲೆಕ್ಟ್ರಾ ಅನ್ನೋ ಇವಿ ಕಾರು ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 490 kM ಮೈಲೇಜ್ ನೀಡಲಿದೆ.

PREV
18
ಭಾರತಕ್ಕೆ ಕಾಲಿಟ್ಟಿ ಲೋಟಸ್ ಬ್ರಿಟಿಷ್ ಕಾರು, ಒಂದು ಚಾರ್ಜ್‌ಗೆ 490 ಕಿ.ಮೀ ಮೈಲೇಜ್!

ಭಾರತದಲ್ಲಿ ಹೊಸ ಹೊಸ ಕಾರುಗಳು ಭರಾಟೆ ಆರಂಭಗೊಂಡಿದೆ. ಇದೀಗ ಪೈಪೋಟಿಯೂ ಹೆಚ್ಚಾಗುತ್ತಿದೆ. ಕಾರಣ, ಬ್ರಿಟಿಷ್ ಐಕಾನಿಕ್ ಆಟೋಮೊಬೈಲ್ ಲೋಟಸ್ ಭಾರತ ಪ್ರವೇಶ ಘೋಷಿಸಿದೆ.

28

ಭಾರತ ಎಂಟ್ರಿಯಲ್ಲಿ ಲೋಟಸ್ ಎಲೆಕ್ಟ್ರಾ ಇವಿ ಕಾರು ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳ ಕಾರು ಶೀಘ್ರದಲ್ಲೇ ಭಾರತದ ರಸ್ತೆಗೆ ಇಳಿಯಲಿದೆ.

38

ದೆಹಲಿ ಮೂಲದ ಎಕ್ಸ್‌ಕ್ಲೂಸೀವ್ ಮೋಟಾರ್ ಜೊತೆ ಒಪ್ಪಂದ ಮಾಡಿಕೊಂಡಿರುವ ಲೋಟಸ್ ಮೋಟಾರ್ಸ್, ಭಾರತದಲ್ಲಿ ಕಾರುಗಳ ವಿತರಣೆ ಮಾಡಲಿದೆ. ಈ ಮೂಲಕ ಬ್ರಿಟಿಷ್ ಕಾರು ಗ್ರ್ಯಾಂಡ್ ಒಪನಿಂಗ್‌ಗೆ ಸಜ್ಜಾಗಿದೆ.

48

ಲೋಟಸ್ ಎಲೆಕ್ಟ್ರೆ ಕಾರು ಒಂದು ಬಾರಿ ಚಾರ್ಜ ಮಾಡಿದರೆ 490 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದು ನೇರವಾಗಿ ಲ್ಯಾಂಬೋರ್ಗಿನಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

58

ಲೋಟಸ್ ಎಲೆಕ್ಟ್ರೆ ಕಾರಿನ ಬೆಲೆ 2.55 ಕೋಟಿ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ 2.99 ಕೋಟಿ ರೂಪಾಯಿ (ಎಕ್ಸ್ ಶೋ ರೂಂ)ಇದು ಇತರ ಪ್ರತಿಸ್ಪರ್ಧಿ ಕಾರಿನ ಬೆಲೆಯಲ್ಲೂ ಪೈಪೋಟಿ ನೀಡುವಂತಿದೆ.

68

ಲೋಟಸ್ ಎಲೆಕ್ಟ್ರೆ ಗರಿಷ್ಠ ವೇಗ ಗಂಟೆಗೆ 265 ಕಿಲೋಮೀಟರ್. ಇಂಧನ ಕಾರಿನಂತೆ ಗರಿಷ್ಠ BHP ಹಾಗೂ ಟಾರ್ಕ್ ಪವರ್ ಹೊಂದಿರುವ ಲೋಟಸ್ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.
 

78

ಬ್ರಿಟಿಷ್ ಕಾರುಗಳು ಭಾರತಕ್ಕೆ ಹೊಸದಲ್ಲ, ಈಗಾಗಲೇ ಮೆಕ್ಲೆರೆನ್, ಆಸ್ಟನ್ ಮಾರ್ಟಿನ್, ಬೆಂಟ್ಲಿ, ರೋಲ್ಸ್ ರಾಯ್ಸ್ ಕಾರುಗಳು ಭಾರತದಲ್ಲಿ ಮಾರಾಟಗೊಳ್ಳುತ್ತಿದೆ.

88

ಇನ್ನು ಲ್ಯಾಂಡ್ ರೋವರ್ ಜಾಗ್ವಾರ್ ಟಾಟಾ ಮಾಲೀಕತ್ವದ ಬ್ರಿಟಿಷ್ ಕಾರಾಗಿದೆ. ಮೊದಲು ಇದು ಬ್ರಿಟಿಷ್ ಮಾಲೀಕತ್ವದ ಕಾರಾಗಿತ್ತು. ಆದರೆ ಟಾಟಾ ಮೋಟಾರ್ಸ್ ಈ ಐಷಾರಾಮಿ ಆಟೋಮೊಬೈಲ್ ಕಂಪನಿಯನ್ನು 2013ರಲ್ಲಿ ಖರೀದಿಸಿದೆ. 
 

Read more Photos on
click me!

Recommended Stories