ರೇಂಜ್ ರೋವರ್ ಕಾರಿನ ಬೆಲೆ 1.06 ಕೋಟಿ ಇಳಿಕೆ, ಭಾರತ ಯುಕೆ ಟ್ರೇಡ್ ಡೀಲ್ ಬಂಪರ್ ಕೊಡುಗೆ, ಸೆಲೆಬ್ರೆಟಿಗಳು ಸೇರಿದಂತೆ ಹಲವರ ನೆಚ್ಚಿನ ಕಾರು ಇದೀಗ ಇತರ ಕಾರುಗಳಂತೆ ಸಾಮಾನ್ಯ ಬೆಲೆಯಲ್ಲಿ ಲಭ್ಯ.
ಜಾಗ್ವಾರ್ ಲ್ಯಾಂಡ್ ರೋವರ್ (JLR) ಐಷಾರಾಮಿ ಕಾರು ಇದೀಗ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತ ಹಾಗೂ ಯುಕೆ ಟ್ರೇಡ್ ಡೀಲ್ ಬಳಿಕ ಇದೀಗ JLR ತನ್ನ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. ಇದರಿಂದ ಭಾರತದಲ್ಲಿ ಇನ್ನು ರೇಂಜ್ ರೋವರ್ ಸೇರಿದಂತೆ JLR ಕಾರುಗಳು ಸಾಮಾನ್ಯ ಕಾರುಗಳ ಬೆಲೆಯಲ್ಲಿ ಲಭ್ಯವಾಗಲಿದೆ.
25
1.06 ಕೋಟಿ ರೂಪಾಯಿ ಇಳಿಕೆ
ಜಾಗ್ವಾರ್ ಲ್ಯಾಂಡ್ ರೋವರ್ ಟಾಟಾ ಮೋಟಾರ್ಸ್ ಮಾಲೀಕತ್ವದ ಬ್ರಿಟಿಷ್ ಕಾರು. ಇದರ ಉತ್ಪಾದನೆ ಎಲ್ಲವೂ ಲಂಡನ್‌ನಲ್ಲಿದೆ. ಭಾರತ ಕಾರು, ಬಿಡಿ ಭಾಗ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಇದರ ಆಮದು ಸುಂಕ ದುಬಾರಿಯಾಗಿದ್ದ ಕಾರಣ ಕಾರಿನ ಬೆಲೆಯೂ ದುಬಾರಿಯಾಗಿತ್ತು. ಇದೀಗ ಸುಂಕ ಇಳಿಕೆ ಮಾಡಿದ ಕಾರಣ, JLR ತನ್ನ ಕಾರಿನ ಬೆಲೆಯಲ್ಲೂ ಇಳಿಕೆ ಮಾಡಿದೆ. ಗರಿಷ್ಠ 1.06 ಕೋಟಿ ರೂಪಾಯಿ ವರೆಗೆ ರೇಂಜ್ ರೋವರ್ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿದೆ.
35
ರೇಂಜ್ ರೋವರ್ ಕಾರುಗಳ ಬೆಲೆ ಎಷ್ಟಾಗಲಿದೆ
ರೇಂಜ್ ರೋವರ್ 4.4 ಲೀಟರ್ ಪೆಟ್ರೋಲ್ ಎಸ್‌ಯುವಿ ಕಾರಿನ ಬೆಲೆ 4.25 ಕೋಟಿ ರೂಪಾಯಿ ಇದೀಗ ಈ ಕಾರು 3.19 ಕೋಟಿ ರೂಪಾಯಿಗೆ ಸಿಗಲಿದೆ. ರೇಂಜ್ ರೋವರ್ ಸ್ಪೋರ್ಟ್ ಎಡಿಶನ್ ಕಾರಿನ ಬೆಲೆ 2.75 ಕೋಟಿ ರೂಪಾಯಿಯಿಂದ 2.35 ಕೋಟಿ ರೂಪಾಯಿಗೆ ಇಳಿಕೆಯಾಗಲಿದೆ.
ಭಾರತ ಯುಕೆ (CETA) ಟ್ರೇಡ್ ಡೀಲ್ ಜುಲೈ 2025ರ ಪ್ರಕರಾ ಅಮದು ಸುಂಕದಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಯುಕೆಯಿಂದ ಭಾರತಕ್ಕೆ ಆಮದು ಮಾಡುತ್ತಿರುವ ವಸ್ತುಗಳ ಮೇಲೆ ಶೇಕಡಾ 110ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಇದೀಗ ಕೇಲ ಶೇಕಡಾ 30 ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ. ಇದರಿಂದ ಲ್ಯಾಂಡ್ ರೋವರ್ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
55
ಸೆಲೆಬ್ರೆಟಿಗಳ ನೆಚ್ಚಿನ ಕಾರು
ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಸೆಲೆಬ್ರೆಟಿಗಳು, ಉದ್ಯಮಿಗಳ ನೆಚ್ಚಿನ ಕಾರಾಗಿದೆ. ಬಾಲಿವುಡ್‌ನ ಹಲವು ನಟ ನಟಿಯರು ರೇಂಜ್ ರೋವರ್ ಸೇರಿದಂತೆ ಜೆಎಲ್ಆರ್ ಕಾರುಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್, ರಣವೀರ್ ಸಿಂಗ್, ರಂದೀಪ್ ಹೂಡ, ಸೋನಮ್ ಕಪೂರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ರೇಂಜ್ ರೋವರ್ ಕಾರು ಖರೀದಿಸಿದ್ದರು.