ಆರ್ಟಿಕಲ್ 370 ಯಶಸ್ಸಿನ ಬೆನ್ನಲ್ಲೇ ದುಬಾರಿ ಬೆಂಜ್ GLC ಕಾರು ಖರೀದಿಸಿದ ಪ್ರಿಯಾ ಮಣಿ!

First Published | Feb 26, 2024, 1:18 PM IST

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಮಣಿ ಇದೀಗ ಬಾಲಿವುಡ್‌ನಲ್ಲಿ ಸಕ್ಸಸ್ ಮೇಲೆ ಸಕ್ಸಸ್ ಕಾಣುತ್ತಿದ್ದಾರೆ. ಜವಾನ್ ಬಳಿಕ ಆರ್ಟಿಕಲ್ 370 ಚಿತ್ರಕ್ಕೂ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಯಶಸ್ಸಿನ ಬೆನ್ನಲ್ಲೇ ಪ್ರಿಯಾ ಮಣಿ ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಏಷ್ಟು ?
 

ನಟಿ ಪ್ರಿಯಾಮಣಿ ಇದೀಗ ಬಾಲಿವುಡ್‌ನಲ್ಲಿ ಭಾರಿ ಯಶಸ್ಸು ಕಂಡಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದ ಯಶಸ್ಸಿನ ಬಳಿಕ ಇದೀಗ ಆರ್ಟಿಕಲ್ 370 ಚಿತ್ರದಲ್ಲೂ ಪ್ರಿಯಾ ಮಣಿ ಮೋಡಿ ಮಾಡಿದ್ದಾರೆ.
 

ಪ್ರಿಯಾ ಮಣಿ ಚಿತ್ರಗಳು ಮೇಲಿಂದ ಮೇಲೆ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಇದೀಗ ನಟಿ ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಕಾರು ಖರೀದಿಸಿದ್ದಾರೆ.

Tap to resize

ಪ್ರಿಯಾ ಮಣಿ ಪೋಲಾರ್ ವೈಟ್ ಶೇಡ್ ಮರ್ಸಿಡಿಸ್ ಬೆಂಜ್ ನ್ಯೂ ಜನರೇಶ್ ಜಿಎಲ್‌ಸಿ ಕಾರು ಖರೀದಿಸಿದ್ದಾರೆ. ಇದರ ಎಕ್ಸ್ ಶೋ ರೂ ಬೆಲೆ ಬರೋಬ್ಬರಿ 74.20 ಲಕ್ಷ ರೂಪಾಯಿ.

ಈ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ ದಾಟಲಿದೆ. ಈ ಐಷಾರಾಮಿ ಎಸ್‌ಯುವಿ ಕಾರು ಭಾರತದಲ್ಲಿ ಇದೀಗ ಅತೀ ಹೆಚ್ಚು ಬೇಡಿಕೆಯ ಕಾರಿಗೆ ಹೊರಹೊಮ್ಮಿದೆ.
 

ಮುಂಬೈನ ಖ್ಯಾತ ಮರ್ಸಿಡಿಸ್ ಬೆಂಜ್ ಕಾರು ಡೀಲ್ ಬಳಿಯಿಂದ ಪ್ರಿಯಾ ಮಣಿ ಕಾರು ಖರೀದಿಸಿದ್ದಾರೆ. ಶೋ ರೂಂಗೆ ತೆರಳಿದ ನಟಿ ಕಾರು ಡೆಲವರಿ ಪಡೆದುಕೊಂಡಿದ್ದಾರೆ.
 

ಪ್ರಿಯಾ ಮಣಿ ಕುಟುಂಬ ಸಮೇತ ಶೋ ರೂಂಗೆ ತೆರಳಿ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಹೊಚ್ಚ ಹೊಸ ಕಾರು ಡ್ರೈವ್ ಮಾಡಿ ಸಂತಸ ಪಟ್ಟಿದ್ದಾರೆ.
 

ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಕಾರು ಸೆಲೆಬ್ರೆಟಿಗಳ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ಐಷಾರಾಮಿ, ಪ್ರಿಮಿಯಂ ಕ್ಲಾಸ್ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಇದು ಉತ್ತಮ ಕಾರು.
 

ಬೆಂಜ್ ಜಿಎಲ್‌ಸಿ ಕಾರಿನಲ್ಲಿ 2.0 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಆಯ್ಕೆಗಳಿವೆ. ಪೆಟ್ರೋಲ್ ಕಾರು 258 hp ಪವರ್, 400Nm ಟಾರ್ಕ್ ಸಾಮರ್ಥ್ಯ ಹೊಂದಿದ್ದರೆ, ಡೀಸೆಲ್ ಎಂಜಿನ್ 197 hp and 440 Nm ಸಾಮರ್ಥ್ಯ ಹೊಂದಿದೆ.
 

Latest Videos

click me!