ಮರ್ಸಿಡಿಸ್ ಬೆಂಜ್ ಮೇಬ್ಯಾಕ್ GLS 600 ದುಬಾರಿ ಕಾರು ಖರೀದಿಸಿದ ಅಜಿಂಕ್ಯ ರಹಾನೆ!

First Published | Feb 20, 2024, 8:06 PM IST

ಟೆಸ್ಟ್ ತಂಡದಿಂದಲೂ ದೂರ ಉಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಇದೀಗ ದುಬಾರಿ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ ಕಾರು ಖರೀದಿಸಿ ಸರ್ಪ್ರೈಸ್ ನೀಡಿದ್ದಾರೆ. ರಹಾನೆ ಖರೀದಿಸಿದ ಸೂಪರ್ ಲಕ್ಷುರಿ ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಮುಂಬೈ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಸದ್ಯ ರಣಜಿ ಟ್ರೋಫಿಯಲ್ಲಿ ಬ್ಯೂಸಿಯಾಗಿದ್ದಾರೆ. ಮುಂಬೈ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
 

ರಣಜಿ ಟೂರ್ನಿಯ ಪಂದ್ಯಗಳ ನಡುವೆ ಅಜಿಂಕ್ಯ ರಹಾನೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ದುಬಾರಿ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರು ಖರೀದಿಸಿದ್ದಾರೆ. 
 

Tap to resize

ಅಜಿಂಕ್ಯ ರಹಾನೆ ಖರೀದಿಸಿದ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರಿನ ಎಕ್ಸ್ ಶೋ ರೂಂ ಬೆಲೆ 3.25 ಲಕ್ಷ ರೂಪಾಯಿ. ಬೆಂಜ್ ಕಾರುಗಳ ಪೈಕಿ ಅತ್ಯುತ್ತಮ ಆರಾಮದಾಯಕ ಪ್ರಯಾಣ ಹಾಗೂ ಐಷಾರಾಮಿ ಫೀಚರ್ಸ್ ಹೊಂದಿದೆ.

ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರನ್ನು ರಹಾನೆ ಖರೀದಿಸಿದ್ದಾರೆ. ಕುಟುಂಬದ ಜೊತೆ ಶೋರೂಂಗೆ ತೆರಳಿದ ರಹಾನೆ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ.
 

2023ರ ಜುಲೈ ಬಳಿಕ ಅಜಿಂಕ್ಯ ರಹಾನೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ಮಿಂಚಿದ ರಹಾನೆ ಇದೀಗ ಬೆಂಜ್ ಮೂಲಕ ಸದ್ದು ಮಾಡಿದ್ದಾರೆ.

ಅಜಿಂಕ್ಯ ರಹಾನೆ ಬಳಿ ಕೆಲ ಐಷಾರಾಮಿ ಕಾರುಗಳಿವೆ. ರಹಾನೆ ಇದುವರೆಗೆ ಹೆಚ್ಚಾಗಿ BMW 6 ಸೀರಿಸ್‌ನ 630i M ಸ್ಪೋರ್ಟ್ಸ್ ಕಾರು ಹೆಚ್ಚಾಗಿ ಬಳಸಿದ್ದಾರೆ. ಇದು ಕೂಡ ಬಿಳಿ ಬಣ್ಣದ ಕಾರಾಗಿದೆ.

ಇದರ ಜೊತೆಗೆ ಆಡಿ ಕ್ಯೂ5 ಕಾರನ್ನೂ ಹೊಂದಿದ್ದಾರೆ. ಇಷ್ಟೇ ಅಲ್ಲ ರಹಾನೆ ಖರೀದಿಸಿದ ಮೊದಲ ಕಾರು ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಕೂಡ ಅದೇ ಕಂಡೀಷನ್‌ನಲ್ಲಿ ಇಟ್ಟುಕೊಂಡಿದ್ದಾರೆ.

Latest Videos

click me!