ಯುದ್ಧವಿದರೂ ಚಿನ್ನದ ದರ ಕುಸಿತವೇಕೆ? ಭವಿಷ್ಯದಲ್ಲಿ ಏನಾಗಲಿದೆ?

Published : Mar 25, 2026, 07:32 AM IST

ಲೇಖನ: ನವ್ಯ ಶ್ರೀ ಶೆಟ್ಟಿ:ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ಚಿನ್ನದ ಬೆಲೆ ಏರುವುದು ಸಾಮಾನ್ಯ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇರಾನ್ ಸಂಘರ್ಷದ ವೇಳೆ ಚಿನ್ನದ ದರ ಗಣನೀಯವಾಗಿ ಕುಸಿದಿದೆ. ಇದಕ್ಕೇನು ಕಾರಣ ಇಲ್ಲಿದೆ ಡಿಟೇಲ್ ಸ್ಟೋರಿ

PREV
17
ಯುದ್ಧವಿದರೂ ಚಿನ್ನದ ದರ ಕುಸಿತವೇಕೆ?

ಲೇಖನ: ನವ್ಯ ಶ್ರೀ ಶೆಟ್ಟಿ

ಸಮರ ಮತ್ತಿತರ ಸಂಕಷ್ಟದ ಪರಿಸ್ಥಿತಿಗಳಲ್ಲಿ ಷೇರುಪೇಟೆ ಕುಸಿದು, ಚಿನ್ನದ ಬೆಲೆ ಏರುತ್ತದೆ. ಆದರೆ ಈ ಸಮಯದಲ್ಲಿ ಬಂಗಾರವೂ ಕುಸಿದಿದೆ!

ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿಯೂ ಸಂಘರ್ಷ ಭುಗಿಲೆದ್ದರೆ ಅದರ ಬಿಸಿ ತಟ್ಟುವುದು ಚಿನ್ನ ಬೆಳ್ಳಿ ಮೇಲೆ. ಯುದ್ಧ ಎಂದರೆ ಚಿನ್ನ-ಬೆಳ್ಳಿ ಬೆಲೆ ಏರಿಕೆ ಎನ್ನುವುದು ಜನಜನಿತ. ಆದರೆ ಇತಿಹಾಸದಲ್ಲಿ ಇದೇ ಮೊದಲನೆ ಬಾರಿಗೆ ಹೊನ್ನು, ರಜತದ ಬೆಲೆ ಅದೆಲ್ಲವನ್ನೂ ಸುಳ್ಳು ಮಾಡಿ ಇಳಿದಿದೆ. ಹೂಡಿಕೆ ದಾರ ಸುರಕ್ಷಿತ ತಾಣ ಅಂತಲೇ ಕರೆಯಲ್ಪಡುವ ಚಿನ್ನ ಕುಸಿತಕ್ಕೆ ಕಾರಣ ಏನು? ಈಗ ಹೇಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

27
ಯುದ್ಧದಲ್ಲಿ ಇಳಿದಿದ್ದು ಇದೇ ಮೊದಲು

ಇರಾನ್ ಯುದ್ಧ ಆರಂಭವಾಗಿ 4 ವಾರ. ಚಿನ್ನ, ಬೆಳ್ಳಿ ಗಗನಮುಖಿ ಆಗುತ್ತದೆ ಅಂತಲೇ ಎಲ್ಲರೂ ಭಾವಿಸಿದರು. ಆದರೆ ಅದೆಲ್ಲ ಸುಳ್ಳು ಮಾಡಿದೆ ಚಿನ್ನ, ಬೆಳ್ಳಿ, ಯುದ್ಧದ ವೇಳೆ ಬೆಲೆ ಇಳಿದಿದ್ದು ಇತಿಹಾಸದಲ್ಲೇ ಇದೇ ಮೊದಲು. ಇರಾನ್ ಸಂಘರ್ಷದಿಂದ ಇದುವರೆಗೆ ಶೇ. 18 ರಷ್ಟು ಚಿನ್ನದ ಬೆಲೆ ಕುಸಿದಿದೆ. ಯುದ್ಧ ಆರಂಭವಾದ ದಿನ ಅಂದರೆ ಫೆಬ್ರವರಿ 28 ರಂದು ಆ ತಿಂಗಳ ಗರಿಷ್ಟ ಮಟ್ಟಕ್ಕೆ ಚಿನ್ನ, ಬೆಳ್ಳಿ ತಲುಪಿತ್ತು. 24 ಕ್ಯಾರೆಟ್ ನ 1 ಗ್ರಾಂ ಚಿನ್ನ 16871, 22 ಕ್ಯಾರೆಟ್ 15,465 ಗೆ ತಲುಪಿತ್ತು. ಆದರೆ 25 ದಿನದಲ್ಲಿ ಗ್ರಾಂಗೆ ಸುಮಾರು 2500-3000 ರು. ಇಳಿದಿದೆ.

24 ಕ್ಯಾರೆಟ್ ಚಿನ್ನ 14.291ಕ್ಕೆ ತಲುಪಿದ್ದರೆ, 22 ಕ್ಯಾರೆಟ್‌ನ ಚಿನ್ನ 13100 ರು.ಗೆ ಇಳಿ ದಿದೆ. ಇನ್ನು ಈ ವರ್ಷವಿಡೀ ಕೆಜಿಗೆ 3 ಲಕ್ಷದ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಬೆಳ್ಳಿಯೂ ತಗ್ಗಿದೆ. ಯುದ್ಧದ ಆರಂಭದ ದಿನ 2.95 ಲಕ್ಷ 6. ಇದ್ದ ಚಿನ್ನ ಈಗ ಬರೋಬರಿ 60 ಸಾವಿರ ಇಳಿದು 2.35 ಲಕ್ಷ ತಲುಪಿದೆ. ಇವುಗಳಲ್ಲಿ ಯೂ ಹಾವು ಏಣಿ ಆಟ ನಡೆಯುತ್ತಿದೆ.

37
4 ದಶಕದಲ್ಲೇ ಚಿನ್ನದ ದರದಲ್ಲಿ ಅತಿಹೆಚ್ಚು ಕುಸಿತ

ವರದಿಗಳ ಪ್ರಕಾರ ಕಳೆದ 43 ವರ್ಷಗಳಲ್ಲಿ ಅಂದರೆ 1983 ರ ಬಳಿಕ ವಾರವೊಂದರಲ್ಲಿ ಚಿನ್ನದ ದರ ಈ ಪ್ರಮಾಣದಲ್ಲಿ ಕುಸಿದಿದ್ದು ಇದೇ ಮೊದಲು. 7 ದಿನದಲ್ಲೇ ಶೇ. 11 ರಷ್ಟು ಇಳಿಕೆ ಕಂಡಿದೆ. 1979-1980 ರ ನಡುವೆ ಇರಾನ್ ಕ್ರಾಂತಿಯ ಸಮಯದಲ್ಲಿ ತೈಲ ಪೂರೈಕೆಯಲ್ಲಿ ಅಡ್ಡಿ, ಶೀತಲ ಸಮರದಿಂದಾಗಿ ಚಿನ್ನದ ಬೆಲೆ ಶೇ.15-20 ರಷ್ಟು ಕುಸಿದಿತ್ತು. ಆ ಬಳಿಕ ವಾರವೊಂದರಲ್ಲಿ ಎಂದಿಗೂ ಶೇ. 10ಕ್ಕಿಂತ ಕುಸಿದ ನಿದರ್ಶನವಿಲ್ಲ.

ಹಿಂದಿನ ಯುದ್ಧದಲ್ಲಿ ಚಿನ್ನದ ದರ ಹೇಗಿತ್ತು?

ಮೊದಲ ಮಹಾಯುದ್ಧ: ಈ ಅವಧಿಯಲ್ಲಿ ಚಿನ್ನದ ದರ ಒಂದು ದಿನ್ 20.67 ಅಮೆರಿಕನ್ ಡಾಲರ್‌ಗಷ್ಟಿತ್ತು.

ಎರಡನೇ ಮಹಾಯುದ್ಧ : 1934 ರಲ್ಲಿ ಒಂದು ಔನ್ಸ್‌ಗೆ 35 ಡಾಲರ್ ಇತ್ತು. ಆಗ ನಾಗರಿಕರ ಚಿನ್ನ ಖರೀದಿಗೆ ಮಿತಿ ಹೇರಲಾಗಿತ್ತು.

ವಿಯೆಟ್ನಾಂ ಯುದ್ಧ: ಯುದ್ಧದ ಭಯದಿಂದ ಚಿನ್ನ ಖರೀದಿಗೆ ಬೇಡಿಕೆ ಹೆಚ್ಚಾಯಿತು. ಪರಿಣಾಮ 1968ರ ವೇಳೆಗೆ 40.20 ಡಾಲರ್‌ಗೆ ಏರಿಕೆಯಾಗಿತ್ತು. ಯುದ್ಧ ಮುಗಿಯುವ ವೇಳೆ ಸುಮಾರು 5 ಪಟ್ಟು ಏರಿಕೆ ಕಂಡಿತ್ತು.

47
ಕೊಲ್ಲಿ ಯುದ್ಧದ ವೇಳೆ ಚಿನ್ನದ ದರ ಎಷ್ಟಿತ್ತು?

ಕೊಲ್ಲಿ ಯುದ್ಧ: ಖರೀದಿದಾರರ ಪ್ರಮಾಣ ಹೆಚ್ಚಾದ ಕಾರಣ ಈ ಅವಧಿಯಲ್ಲಿ ಚಿನ್ನದ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿತ್ತು. 1990ರ ಜುಲೈನಲ್ಲಿ ಔನ್ಸ್ ಗೆ 384 ಡಾಲರ್ ಇದ್ದ ಬೆಲೆ ಒಂದೇ ತಿಂಗಳಲ್ಲಿ 403 ಡಾಲರ್‌ಗೆ ಏರಿತ್ತು.

ರಷ್ಯಾ ಯುಕ್ರೇನ್ ಯುದ್ಧ: 2022 ಫೆಬ್ರವರಿ 24 ರಂದು ಯುದ್ಧ ಆರಂಭವಾದ ದಿನ 24 ಕ್ಯಾರೆಟ್ ಚಿನ್ನ 5100ರಿಂದ 5150ರ ಆಸುಪಾಸಿನಲ್ಲಿತ್ತು. 10 ದಿನದಲ್ಲಿ ಅದು 5250-5300 . 5 ಒಟ್ಟಾರೆ ಅಂದಾಜು ಶೇ. 15 ರಷ್ಟು ಏರಿಕೆ ಕಂಡಿತ್ತು.

ಇಸ್ರೇಲ್ ಹಮಾಸ್ ಯುದ್ಧ: 2023ರ ಅಕ್ಟೋಬರ್‌ನಲ್ಲಿ ಆರಂಭವಾದ ಇಸ್ರೇಲ್ ಹಮಾಸ್ ಯುದ್ಧದ ಸಂದರ್ಭದಲ್ಲಿ ಶೇ. 10 ರಷ್ಟು ಚಿನ್ನ ಬೆಲೆ ಏರಿಕೆ ಕಂಡಿತ್ತು. 58 ಸಾವಿರ ಆಸುಪಾಸಿನಲ್ಲಿದ್ದ 10 ಗ್ರಾಂ ಶುದ್ಧ ಚಿನ್ನದ ದರ ಆ ಬಳಿಕ 75,000 ಗಡಿ ದಾಟಿತ್ತು.

57
ಸಂಘರ್ಷದಲ್ಲೂ ಬೆಲೆ ಇಳಿಕೆಗೆ ಕಾರಣ ಏನು?

1. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ

ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದ ರೂಪಾಯಿ ಮೌಲ್ಯ ಡಾಲ‌ರ್ ಎದುರು ಕುಸಿದು 94 ರ ಸನಿಹದಲ್ಲಿದೆ. ಇದು ಕೂಡ ಬೆಲೆ ಇಳಿಕೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಡಾಲರ್ ಸೂಚ್ಯಂಕ ಬಲಗೊಂಡಿದೆ. ಹೀಗಾಗಿ ಯುದ್ಧದ ಸಮಯದಲ್ಲಿ ಹೂಡಿಕೆದಾರರು ಚಿನ್ನಕ್ಕಿಂತ ಡಾಲರ್‌ ಸುರಕ್ಷಿತ ತಾಣವೆಂದು ಪರಿಗಣಿಸುತ್ತಾರೆ. ಪ್ರಪಂಚದಾದ್ಯಂತದ ಪ್ರಮುಖ ಬ್ಯಾಂಕುಗಳು ಮತ್ತು ಹೂಡಿಕೆ ಕಂಪನಿಗಳು ಡಾಲರ್‌ನಲ್ಲಿ ಹೂಡಿಕೆ ಮಾಡುತ್ತಿವೆ. ಇದರ ಪರಿಣಾಮ ಚಿನ್ನದ ಮೇಲೆ ಬೀಳುತ್ತಿದೆ.

ಅಮೆರಿಕದ ಫೆಡರಲ್ ರಿಸರ್ವ್ ನಿಲುವು

ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 110 ರು. ದಾಟಿರುವುದರಿಂದ ಹಣದುಬ್ಬರ ಹೆಚ್ಚಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಸಲು ನಿರಾಕರಿಸಿದೆ. ಬಡ್ಡಿದರ ಹೆಚ್ಚಿದಾಗ ಗ್ರಾಹಕರು ಚಿನ್ನದ ಬದಲಿಗೆ ಬಡ್ಡಿ ನೀಡುವ ಸರ್ಕಾರಿ ಬಾಂಡ್ ಗಳತ್ತ ಆಕರ್ಷಿತರಾಗುತ್ತಾರೆ. ಅಮೆರಿಕದ ಕ್ರೆಡಿಟ್ ಸ್ಥಿತಿ ಎಷ್ಟು ಪ್ರಬಲವಾಗಿದೆಯೆಂದರೆ, ಅದರ ಸರ್ಕಾರಿ ಬಾಂಡ್‌ ಗಳಲ್ಲಿ ಹೂಡಿಕೆ ಮಾಡುವುದನ್ನು ಚಿನ್ನದಂತೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಪರಿಣಾಮವಾಗಿ, ಹೂಡಿಕೆದಾರರು 0% ಬಡ್ಡಿದರಗಳೊಂದಿಗೆ ಚಿನ್ನವನ್ನು ಮಾರಾಟ ಮಾಡುವ ಮೂಲಕ ಮತ್ತು ಆ ಹಣವನ್ನು ಅಮೆರಿಕದ ಬಾಂಡ್ ಗಳಲ್ಲಿ ಹೂಡಿಕೆ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ.

67
ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ನಗದು ಲಭ್ಯತೆ

ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾದಾಗ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಅಥವಾ ನಷ್ಟ ಸರಿದೂಗಿಸಲು ಚಿನ್ನವನ್ನು ಮಾರಿ ಹಣ ಪಡೆಯುತ್ತಾರೆ. ಇದು ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಹೆಚ್ಚಿಸಿ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಯುದ್ಧ ಆರಂಭದ ದಿನಗಳಲ್ಲಿ ಬೆಲೆಗಳು ಗಗನಕ್ಕೇರಿದ್ದವು. ಆಗ ಹೂಡಿಕೆದಾರರು ಹೆಚ್ಚಾಗಿ ಖರೀದಿಸಿದ್ದರಿಂದ ಬೇಡಿಕೆ ಹೆಚ್ಚಾಗಿ ಪೂರೈಕೆ ಕೊರತೆ ಉಂಟಾಗಿತ್ತು. ಬೆಲೆಗಳು ಗರಿಷ್ಠ ಮಟ್ಟ ತಲುಪಿದ್ದರಿಂದ ಲಾಭವನ್ನು ನಗದೀಕರಿಸಲು ಮಾರಾಟಕ್ಕೆ ಮುಂದಾದರು.

ಪ್ರಾಫಿಟ್ ಬುಕ್ಕಿಂಗ್ ಕೂಡ ಬೆಲೆ ಕುಸಿತಕ್ಕೆ ಕಾರಣ

ಕಳೆದ ಒಂದು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಅಸಾಧಾರಣ ಲಾಭವನ್ನು ನೀಡಿದ್ದವು. ಬೆಲೆಗಳು ಗರಿಷ್ಠ ಮಟ್ಟ ತಲುಪಿದಾಗ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮಾರಾಟ ಪ್ರಕ್ರಿಯೆ ಆರಂಭಿಸಿದ್ದು ಬೆಲೆ ಕುಸಿತಕ್ಕೆ ಕಾರಣವಾಗಿದೆ.

77
ವಿದೇಶಗಳಲ್ಲಿಯೂ ಇದೇ ಪರಿಸ್ಥಿತಿ

ವಿದೇಶಗಳಲ್ಲಿಯೂ ಚಿನ್ನ ಬೆಳ್ಳಿ ದರ ಇಳಿಕೆಯಾಗಿದೆ. ಯುರೋಪ್ ನಲ್ಲಿ ಇತ್ತೀಚಿನ ದಿನಗಳಲ್ಲಿ 10 ರಿಂದ 15 ರಷ್ಟು ಚಿನ್ನ ದರ ಕುಸಿದಿದೆ. ಬ್ರಿಟನ್,ಚೀನಾ, ಜಪಾನ್, ದುಬೈನಲ್ಲಿಯೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದೆ. ಚಿನ್ನವನ್ನು ಹೂಡಿಕೆದಾರರ ಸುರಕ್ಷಿತ ತಾಣ ಸ್ವರ್ಗ ಅಂತೆಲ್ಲ ಕರೆಯುತ್ತಾರೆ. ಆದರೆ ಈಗ ಬೆಲೆ ಇಳಿಕೆ ಅವರನ್ನು ಆತಂಕಕ್ಕೆ ಗುರಿ ಮಾಡಿದೆ. ಸಾಮಾನ್ಯವಾಗಿ ಯುದ್ಧ ಅಥವಾ ಜಾಗತಿಕ ಅನಿಶ್ಚಿತತೆ ಉಂಟಾ ದಾಗ ಹೆಚ್ಚೆಚ್ಚು ಹೂಡಿಕೆ ಮಾಡುತ್ತಾರೆ ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ.

ಭವಿಷ್ಯದಲ್ಲಿ ಏನಾಗಲಿದೆ?

ಈ ವರ್ಷ ಆರಂಭದಲ್ಲಿ 25-30 ದರ ಏರಿಕೆಯಾಗಿತ್ತು. 2025ರ ಜನವರಿ 1ರಲ್ಲಿ 24 ಕ್ಯಾರೆಟ್ ಗ್ರಾಂ ಚಿನ್ನದ ಬೆಲೆ 7800 ರು. ಇದು ಈ ವರ್ಷದ ಜನವರಿಯಲ್ಲಿ 13500 ರು. ಅಂದರೆ ಗ್ರಾಂವೊಂದಕ್ಕೆ 6 ಸಾವಿರ ಏರಿಕೆ. ಆದರೆ ಈಗ ಕುಸಿಯುತ್ತಿದೆ. ಯುದ್ಧ ತೀವ್ರಗೊಂಡರೆ ಬೆಲೆ ಮತ್ತೆ ಏರುವ ಸಾಧ್ಯತೆಯಿದೆ. ಆದರೆ ಡಾಲರ್‌ ಇದೇ ರೀತಿ ಬಲವಾಗಿದ್ದರೆ ಮತ್ತು ಫೆಡ್ ಬಡ್ಡಿದರಗಳಲ್ಲಿ ಬದಲಾವಣೆ ಆದರೆ ಬೆಲೆ ಇನ್ನೂ ಕೊಂಚ ತಗ್ಗಬಹುದು.

ಚಿನ್ನದ ದರ ಗ್ರಾಂಗೆ ಶೇ 10,000 ಆಗಬಹುದು. 10 ಗ್ರಾಂಗೆ ಲಕ್ಷಕ್ಕಿಂತ ಕಡಿಮೆ ತಲುಪಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಚಿನ್ನದ ದರ ಇಷ್ಟೊಂದು ಕಡಿಮೆ ಆಗುವ ಸಾಧ್ಯತೆ ತೀರ ಕಡಿಮೆ. ಬೆಲೆ ಇಳಿಕೆ ಶಾಶ್ವತ ಅಲ್ಲ, ತಾತ್ಕಾಲಿಕ ಆಷ್ಟೇ. ಅತಿಯಾಗಿ ಬೆಲೆ ಏರಿದಾಗ ಅದು ಸ್ಥಿರತೆಗೆ ಬರಲು ಇಂತಹ ವಿದ್ಯಮಾನ ಘಟಿಸುವುದು ಸಾಮಾನ್ಯ ಎನ್ನುವುದು ತಜ್ಞರ ಅಭಿಪ್ರಾಯ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories