ಇಶಾ ಅಂಬಾನಿಗಿಂತ ಹೆಚ್ಚು ಸಂಬಳ ಪಡೆಯುವ ರಿಲಯನ್ಸ್ ಉದ್ಯೋಗಿ ಇವರೇ ನೋಡಿ

Published : Jun 13, 2025, 08:59 PM IST

ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಇಶಾ ಅಂಬಾನಿಗಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಯಾರು ಎಂಬುದನ್ನು ತಿಳಿಯಿರಿ. ನಿಖಿಲ್ ಮೆಸ್ವಾನಿ ಅವರ ಸಂಬಳ ಮತ್ತು ಅವರ ರಿಲಯನ್ಸ್‌ನೊಂದಿಗಿನ ಸಂಬಂಧದ ಬಗ್ಗೆ ತಿಳಿದುಕೊಳ್ಳಿ.

PREV
15

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್ ಅಂಬಾನಿ ದೇಶದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಮಕ್ಕಳಾದ ಇಶಾ, ಆಕಾಶ್, ಅನಂತ್ ಸಹ ರಿಲಯನ್ಸ್ ಕಂಪನಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ. ಈ ಕೆಲಸಗಳಿಗೆ ಸಂಬಳ ಪಡೆದುಕೊಳ್ಳುತ್ತಾರೆ. ಆದ್ರೆ ಇದೇ ರಿಲಯನ್ಸ್ ಕಂಪನಿಯಲ್ಲಿ ಇಶಾ ಅಂಬಾನಿಗಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಒಬ್ಬರಿದ್ದಾರೆ.

25

ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಗಳ ಮೂಲಕ ವಿವಿಧ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ವ್ಯವಹಾರಗಳಲ್ಲಿ ಮುಕೇಶ್ ಅಂಬಾನಿ ಅವರು ನೀತಾ ಅಂಬಾನಿ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಮತ್ತು ಕೆಲವು ಆಪ್ತರಿಂದ ಸಹಾಯ ಪಡೆಯುತ್ತಾರೆ. ಈ ಆಪ್ತರಲ್ಲಿ ನಿಖಿಲ್ ಮೆಸ್ವಾನಿ ಸಹ ಒಬ್ಬರಾಗಿದ್ದಾರೆ.

35

ನಿಖಿಲ್ ಮೆಸ್ವಾನಿ ರಿಲಯನ್ಸ್ ಉದ್ಯಮದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಯಾಗಿದ್ದಾರೆ. ವರದಿಗಳ ಪ್ರಕಾರ, ನಿಖಿಲ್ ಮೆಸ್ವಾನಿ ಅವರು 24 ಕೋಟಿ ರೂ.ಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಈ ಸಂಬಳ ಅಂಬಾನಿ ಕುಟುಂಬದ ಸದಸ್ಯರಿಗಿಂತ ಅಧಿಕವಾಗಿದೆ. ಇಶಾ ಅಂಬಾನಿಗಿಂತಲೂ ನಿಖಿಲ್ ಹೆಚ್ಚು ಸಂಬಳ ಪಡೆಯುತ್ತಾರೆ.

45

ಯಾರು ಈ ನಿಖಿಲ್ ಮೆಸ್ವಾನಿ?

ರಸಿಕ್‌ಭಾಯ್ ಮೆಸ್ವಾನಿಯವರ ಮಗನೇ ಈ ನಿಖಿಲ್ ಮೆಸ್ವಾನಿ. ರಸಿಕ್‌ಭಾಯ್ ಅವರು ಮುಕೇಶ್ ಅಂಬಾನಿಯವರ ಬಾಸ್ ಆಗಿದ್ದರು. ರಸಿಕ್‌ಭಾಯ್ ಮಾರ್ಗದರ್ಶನದಲ್ಲಿಯೇ ಮುಕೇಶ್ ಅಂಬಾನಿ ತಮ್ಮದೇ ಸ್ವಂತ ವ್ಯವಹಾರವನ್ನು ಆರಂಭಿಸಿದ್ದರು. ರಸಿಕ್‌ಭಾಯ್ ಧೀರೂಭಾಯಿ ಅಂಬಾನಿಯವರ ಸೋದರಳಿಯರಾಗಿದ್ದು, ರಿಲಯನ್ಸ್‌ನ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. 1986ರಿಂದ ನಿಖಿಲ್ ಮೆಸ್ವಾನಿ ಅವರು ರಿಲಯನ್ಸ್ ಸಂಸ್ಥೆಯ ಭಾಗವಾಗಿದ್ದಾರೆ.

55

ರಿಲಯನ್ಸ್ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ನಿಖಿಲ್ ಮೆಸ್ವಾನಿ ಜುಲೈ 1, 1988 ರಿಂದ, ಅವರು ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದರು ಮತ್ತು ಪೂರ್ಣ ಸಮಯದ ನಿರ್ದೇಶಕರ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

Read more Photos on
click me!

Recommended Stories