ಅಂಬಾನಿ, ಅದಾನಿ ಅಲ್ಲ, ಬೆಂಟ್ಲಿ ಕಾರು ಖರೀದಿಗೆ ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಈ ಉದ್ಯಮಿ

Published : Jun 13, 2025, 08:31 PM IST

ಅಂಬಾನಿ, ಅದಾನಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಈ ಉದ್ಯಮಿ ರೀತಿ ಯಾರೂ ಡೆಲಿವರಿ ಪಡೆದುಕೊಂಡಿಲ್ಲ. ಕಾರಣ ಈ ಉದ್ಯಮಿ ರೋಸ್ ಗೋಲ್ಡ್ ಬಣ್ಣದ ಅತ್ಯಂತ ದುಬಾರಿ ಬೆಂಟ್ಲಿ ಬೆಂಟಿಯಾಗ್ ಕಾರು ಖರೀದಿಸಿದ್ದಾರೆ. ಆದರೆ ಕಾರು ಡೆಲಿವರಿ ಪಡೆಯಲು ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.

PREV
16

ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ವಿಶ್ವದ ಟಾಪ್ ಶ್ರೀಮಂತ ಉದ್ಯಮಿಗಳಲ್ಲ. ಈ ಉದ್ಯಮಿ ದುಬಾರಿ ಬೆಂಟ್ಲಿ ಬೆಂಟೆಯಾಗ್ ಕಾರು ಖರೀದಿಸಲು ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿ ಇದೀಗ ವಿಶ್ವದ ಗಮನ ಸೆಳೆದಿದೆ. ಈ ಉದ್ಯಮಿ ಅತೀ ಜನಪ್ರಿಯ ಪೋಲಾಂಡ್ ಮೂಸಾ ಅಲಿಯಾ ಮೂಸಾ ಹಾಜಿ. ಜಗತ್ತಿನಲ್ಲೇ ಅತೀ ದೊಡ್ಡ ಸುಗಂಧ ದ್ರವ್ಯ ಉತ್ಪಾದನಾ ಕಂಪನಿ ನಡೆಸುತ್ತಿರುವ ಮೂಸಾ ಕೇರಳ ಮೂಲದವರು. ಇದೀಗ ಕೇರಳದಲ್ಲಿ ಬೆಂಟ್ಲಿ ಬೆಂಟೆಯಾಗ್ ಕಾರು ಖರೀದಿಸಿದ್ದಾರೆ.

26

ಮೂಸಾ ಕೇರಳದಲ್ಲಿ ಸಿಗ್ನೇಚರ್ ಎಡಿಶನ್ ಬೆಂಟ್ಲಿ ಬೆಂಟೆಯಾಗ್ ಕಾರು ಖರೀದಿಸಿದ ಮೊದಲಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಚಿನ್ನದ ಬಣ್ಣದ ಈ ಕಾರು ಅತ್ಯಂತ ಐಷಾರಾಮಿ ಕಾರಾಗಿದೆ. ಈ ಸ್ಪಷಲ್ ಎಡಿಶನ್ ಕಾರಿನ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ. ತಮ್ಮ ಲ್ಯಾವಿಶ್ ಶೈಲಿಯಲ್ಲೇ ಮೂಸಾ ಕಾರು ಖರೀದಿಸಲು ಆಗಮಿಸಿದ್ದಾರೆ. ಇದು ರೋಸ್ ಗೋಲ್ಡ್ ಬಣ್ಣದಲ್ಲಿದೆ.

36

ಸಿನಿಮಾದಲ್ಲಿ ಹೀರೋಗಳ ಎಂಟ್ರಿ ಸೇರಿದಂತೆ ಮಹತ್ವದ ಸೀನ್‌ಗಳಲ್ಲಿರುವಂತೆ ಉದ್ಯಮಿ ಮೂಸಾ ಎಂಟ್ರಿಕೊಟ್ಟಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೂಸಾ, ಸಿನಿಮಾ ಹೀರೋಗಳಂತೆ ರೆಡ್‌ ಕಾರ್ಪೆಟ್ ಮೇಲೆ ನಡೆದುಕೊಂಡು ಬಂದು ಕಾರು ಡೆಲಿವರಿ ಪಡೆದಿದ್ದಾರೆ. ಕೇರಳದಳಲ್ಲಿ ಮೂಸಾ ಈ ಕಾರು ಖರೀದಿಸಿದ್ದಾರೆ.

46

ಮಲಪ್ಪುರಂ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ನೀಲಿ ಬಣ್ಣದ ಕವರ್‌ನಿಂದ ಕಾರನ್ನು ಮುಚ್ಚಲಾಗಿತ್ತು. ಮೂಸಾ ಹೆಲಿಕಾಪ್ಟರ್ ಮೂಲಕ ಆಗಮಿಸಿ ಕಾರಿನ ಕವರ್ ಅನಾವರಣ ಮಾಡಿ ಡೆಲಿವರಿ ಪಡೆದಿದ್ದಾರೆ. ಈ ಎಸ್‌ಯುವಿ ಕಾರು ರೋಸ್ ಗೋಲ್ಡ್ ಬಣ್ಣದಿಂದ ಕೂಡಿದೆ. ಇದರ ಇಂಟಿರೀಯರ್ ಕಸ್ಟಮೈಸ್ಡ್ ಆಗಿದೆ. ಮಾಲೀಕರು ತಮೆಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳುತ್ತಾರೆ. ಬುಕಿಂಗ್ ಮಾಡುವಾಗಲೇ ಕಸ್ಟಮೈಸ್ ಹೇಗಿರಬೇಕು ಅನ್ನೋ ಸೂಚನೆ ನೀಡಿದರೆ ಅದರಂತೆ ಕಾರು ತಯಾರಾಗಲಿದೆ.

56

ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೂಸಾ ತಮ್ಮ ಹೊಸ ಬೆಂಟ್ಲಿ ಬೆಂಟೆಯಾಗ್ ಕಾರಿನ ಮೂಲಕ ಮನೆಗೆ ತೆರಳಿದ್ದಾರೆ. ಮೂಸಾ ಅವರ ಬೆಂಟ್ಲಿ ಕಾರು 550 PS ಪವರ್ ಹಾಗೂ 770 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು ವಿ8 ಪೆಟ್ರೋಲ್ ಎಂಜಿನ್ ಕಾರಾಗಿದೆ. ಹೊಸ ಕಾರು ಡ್ರೈವ್ ಮಾಡುತ್ತಾ ಮನೆಗೆ ತೆರಳಿದ್ದಾರೆ. ಮೂಸಾಗೆ ರಸ್ತೆಯಲ್ಲಿ ಭದ್ರತೆಯನ್ನು ಒದಗಿಸಲಾಗಿತ್ತು.

66

ಮೂಸಾ ಉದ್ಯಮಿ ಕುಟುಂಬದಲ್ಲಿ ಬೆಳೆದವರಲ್ಲ. ಅತ್ಯಂತ ಕಡು ಬಡತನದಲ್ಲಿ ಬೆಳೆದು ಇದೀಗ ಶ್ರೀಮಂತ ಉದ್ಯಮಿಯಾಗಿದ್ದಾರೆ. ಹೊಟೆಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಆರಂಭಿಸಿ ಬಳಿಕ ದುಬೈಗೆ ತೆರಳಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿದ್ದರು. 1988ರಲ್ಲಿ ಪೋಲೆಂಡ್‌ಗೆ ತೆರಳಿದ ಮೂಸಾ ಉದ್ಯಮ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

Read more Photos on
click me!

Recommended Stories