ಮೋಸ: ಕಾರ್ಡ್ ಹಾಕುವ ಮುನ್ನ ಸ್ಲಾಟ್ ಸರಿಯಾಗಿದೆಯಾ ಅಂತ ನೋಡಿಕೊಳ್ಳಿ. ಕೆಲವೊಮ್ಮೆ ಮೋಸಗಾರರು ಸ್ಕಿಮ್ಮರ್ ಅಳವಡಿಸಿರುತ್ತಾರೆ. ಇದು ನಿಮ್ಮ ಕಾರ್ಡ್‌ನ ಮಾಹಿತಿಯನ್ನು ಕದಿಯುತ್ತಾರೆ. ಕದ್ದ ಮಾಹಿತಿಯಿಂದ ನಿಮ್ಮ ಕಾರ್ಡ್ ನಕಲಿ ಮಾಡಿ ಹಣ ಕದಿಯಬಹುದು.
ಹಣ ವಾಪಸ್ ಪಡೆಯಲು ಏನು ಮಾಡಬೇಕು?
1. ಕಸ್ಟಮರ್ ಕೇರ್‌ಗೆ ಕರೆ ಮಾಡಿ: ATMನಿಂದ ಹಣ ಬರದಿದ್ದರೆ, ಬ್ಯಾಂಕ್‌ನ 24 ಗಂಟೆಗಳ ಕಸ್ಟಮರ್ ಕೇರ್‌ಗೆ ಕರೆ ಮಾಡಿ. ನಿಮ್ಮ ಸಮಸ್ಯೆ ಹೇಳಿ, ವ್ಯವಹಾರದ ರೆಫರೆನ್ಸ್ ನಂಬರ್ ಕೊಡಿ. ನಿಮ್ಮ ದೂರು ದಾಖಲಿಸಿ, ದೂರಿನ ಟ್ರ್ಯಾಕಿಂಗ್ ನಂಬರ್ ಕೊಡ್ತಾರೆ. RBI ಪ್ರಕಾರ, ಕಡಿತವಾದ ಹಣ 5 ದಿನಗಳಲ್ಲಿ ವಾಪಸ್ ಆಗಬೇಕು. ಇಲ್ಲದಿದ್ದರೆ, ದಿನಕ್ಕೆ ₹100 ದಂಡ ಕೊಡಬೇಕು.