ಹಳೆ ಬಟ್ಟೆಗೆ ಸ್ಟೀಲ್ ಪಾತ್ರೆ ಅಂತ ಪ್ರತಿ ದಿನ ಒಬ್ಬರಾದ್ರೂ ಬೀದಿಯಲ್ಲಿ ಕೂಗ್ತಾ ಬರ್ತಾರೆ. ನೀವೂ ಅವರಿಗೆ ಹಳೆ ಬಟ್ಟೆ ನೀಡಿ ಪಾತ್ರೆ ಖರೀದಿ ಮಾಡಿರ್ಬಹುದು. ನೀವು ಕೊಟ್ಟ ಈ ಬಟ್ಟೆ ಎಲ್ಲಿಗೆ ಹೋಗುತ್ತೆ? ಇದ್ರಿಂದ ಯಾರಿಗೆಲ್ಲ ಲಾಭ ? ಯೋಚನೆ ಮಾಡಿದ್ದೀರಾ?
ಭಾರತದ ಪ್ರತಿಯೊಂದು ನಗರ, ಪಟ್ಟಣ ಮಾತ್ರವಲ್ಲ ಹಳ್ಳಿಗಳಿಗೂ ಬಟ್ಟೆ ಖರೀದಿ ಮಾಡೋದು ಬರ್ತಾರೆ. ಹಳೆ ಬಟ್ಟೆಯನ್ನು ಎಲ್ಲೋ ಮಾರಾಟ ಮಾಡ್ತಾರೆ ಎನ್ನುವ ಸಾಮಾನ್ಯ ಜ್ಞಾನ ನಮಗಿದೆ. ಆದ್ರೆ ಇದ್ರ ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ಮರುಬಳಕೆ ಬ್ಯುಸಿನೆಸ್ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲ.
25
ಮೊದಲು ಏನಾಗುತ್ತೆ?
ಮನೆಯಿಂದ ತೆಗೆದುಕೊಂಡು ಹೋದ ಬಟ್ಟೆ ನೇರವಾಗಿ ಅಂಗಡಿಗೆ ಹೋಗೋದಿಲ್ಲ. ಅದನ್ನು ಯಾವುದೇ ಅಂಗಡಿಯವರು ಮಾರಾಟ ಕೂಡ ಮಾಡೋದಿಲ್ಲ. ಎಲ್ಲ ಹಳೆ ಬಟ್ಟೆ ದೊಡ್ಡ ಗೋದಾಮು ತಲುಪುತ್ತೆ. ಅಲ್ಲಿ ಪ್ರತಿಯೊಂದು ಬಟ್ಟೆಯನ್ನು ಕೈಯಿಂದ ಪರಿಶೀಲಿಸಿ ಮೂರು ವಿಧವಾಗಿ ವಿಂಗಡಿಸಲಾಗುತ್ತೆ. ಹೊಸದರಂತಿರುವ ಬಟ್ಟೆ, ಬಳಸಬಹುದಾದ ಬಟ್ಟೆ ಮತ್ತು ಸಂಪೂರ್ಣ ಹಾಳಾಗಿರುವ ಬಟ್ಟೆ.
35
ಚೆನ್ನಾಗಿರುವ ಬಟ್ಟೆ
ಗುಣಮಟ್ಟ ಉತ್ತಮವಾಗಿರುವ ಬಟ್ಟೆಗಳನ್ನು ತೊಳೆದು, ಇಸ್ತ್ರಿ ಮಾಡಿ, ಪ್ಯಾಕ್ ಮಾಡಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತದೆ. ಭಾರತದಲ್ಲಿ ಲಕ್ಷಾಂತರ ಜನರು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಸೆಕೆಂಡ್ ಹ್ಯಾಂಡ್ ಸೇಲ್ ನಲ್ಲಿ ಖರೀದಿ ಮಾಡ್ತಾರೆ. ಕೆಲವು ಬಟ್ಟೆಗಳು ಬೇರೆ ರಾಜ್ಯಗಳಿಗೆ, ಮತ್ತೆ ಕೆಲವು ವಿದೇಶಗಳಿಗೂ ರಫ್ತಾಗುತ್ತವೆ.
ಹರಿದ ಬಟ್ಟೆಗಳನ್ನು ಕಸಕ್ಕೆ ಹಾಕುವುದಿಲ್ಲ. ಹರಿದ ಬಟ್ಟೆಗಳನ್ನು ಮಿಷನ್ ಸಹಾಯದಿಂದ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನಾರುಗಳನ್ನು ಬೇರ್ಪಡಿಸಲಾಗುತ್ತದೆ. ಆ ನಾರುಗಳಿಂದ ಹೊಸ ನೂಲು ತಯಾರಿಸಿ, ಕಾರ್ಪೆಟ್, ಕಂಬಳಿ, ಮಾಪ್, ಕುಶನ್, ಕೈಗಾರಿಕಾ ಬಟ್ಟೆ ಸೇರಿದಂತೆ ನಾನಾ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
55
ಪರಿಸರ ರಕ್ಷಣೆ
ನೀವು ನೀಡಿದ ಬಟ್ಟೆಗಳನ್ನು ಕಾರಿನ ಸೀಟ್ ಆಗಿಯೂ ಬಳಕೆ ಮಾಡಲಾಗುತ್ತದೆ. ನಿಮ್ಮ ಹಳೆ ಶರ್ಟ್, ಮುಂದೆ ಯಾರದ್ದೋ ಕಾರಿನ ಸೇಟ್ ಸೇರಬಹುದು. ಈ ಮರುಬಳಕೆಯಿಂದ ಪರಿಸರದ ರಕ್ಷಣೆ ಆಗ್ತಿದೆ. ಪ್ರತಿ ವರ್ಷ ಲಕ್ಷಾಂತರ ಟನ್ ಬಟ್ಟೆಗಳು ಕಸದ ರಾಶಿಗೆ ಸೇರುವ ಬದಲು ಅದನ್ನು ಮರು ಬಳಕೆ ಮಾಡುವುದರಿಂದ ನೀರಿನ ಉಳಿತಾಯವಾಗುತ್ತದೆ. ಹೊಸ ಹತ್ತಿ ಉತ್ಪಾದನೆಯ ಅಗತ್ಯ ಕಡಿಮೆಯಾಗುತ್ತದೆ. ಮಾಲಿನ್ಯ ಕಡಿಮೆಯಾಗುತ್ತದೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.