ಚಿನ್ನ-ಬೆಳ್ಳಿ ಖರೀದಿಗೆ ಪ್ಲಾನ್ ಮಾಡ್ಕೊಂಡಿದ್ರೆ ತಿಳಿದುಕೊಳ್ಳಿ ಇಂದಿನ ಬೆಲೆ

First Published | Jan 2, 2025, 8:43 AM IST

ಚಿನ್ನ ಮತ್ತು ಬೆಳ್ಳಿ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ದರೆ ಇಂದಿನ ಬೆಲೆ ತಿಳಿದುಕೊಳ್ಳಿ. 22 ಮತ್ತು 24 ಕ್ಯಾರಟ್ ಚಿನ್ನದ ದರದ ಜೊತೆಗೆ ಬೆಳ್ಳಿ ದರದ ಮಾಹಿತಿಯೂ ಇಲ್ಲಿದೆ.

ಇಂದು ಚಿನ್ನ ಮತ್ತು ಬೆಳ್ಳಿ ಖರೀದಿಗೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ, ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಇದರಿಂದ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಸಿಗುತ್ತೆ ಎಂಬುದರ ಸ್ಪಷ್ಟವಾದ ಚಿತ್ರಣ ಸಿಗುತ್ತದೆ. 

ಮೊದಲು ಜನರು ಹಣ ಉಳಿದ್ರೆ ಬ್ಯಾಂಕ್‌ ಖಾತೆಯಲ್ಲಿ ಸೇವ್ ಮಾಡುತ್ತಿದ್ದರು. ಆದ್ರೆ ಇಂದು ಕಾಲ ಬದಲಾಗಿದ್ದು, ಹಣವನ್ನು ಹೂಡಿಕೆ ಮಾಡಲು ಪ್ರಯುತ್ನಿಸುತ್ತಾರೆ. ಚಿನ್ನವೂ ಸಹ ಹೂಡಿಕೆಯಾಗಿ ಬದಲಾಗಿದೆ. ಇದಕ್ಕೆ ಕಾರಣ ಏರುತ್ತಿರುವ ಬೆಲೆ. ಹಾಗಾಗಿ ಬೆಲೆ ಏರಿಕೆಯಾದ್ರೂ ಚಿನ್ನದ ಬೇಡಿಕೆಯಲ್ಲಿ ಯಾವುದೇ ಕಡಿಮೆಯಾಗಿಲ್ಲ.

Tap to resize

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಜನವರಿ 1ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಪ್ರತಿದಿನವೂ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಳಿತ ಆಗುತ್ತಿರುತ್ತದೆ.

22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,151 ರೂಪಾಯಿ 
8 ಗ್ರಾಂ: 57,208 ರೂಪಾಯಿ 
10 ಗ್ರಾಂ: 71,510 ರೂಪಾಯಿ
100 ಗ್ರಾಂ: 7,15,100 ರೂಪಾಯಿ

24 ಕ್ಯಾರಟ್ ಚಿನ್ನದ ಬೆಲೆ 
1 ಗ್ರಾಂ: 7,801 ರೂಪಾಯಿ 
8 ಗ್ರಾಂ: 62,408 ರೂಪಾಯಿ 
10 ಗ್ರಾಂ: 78,010 ರುಪಾಯಿ
100 ಗ್ರಾಂ: 7,80,100 ರೂಪಾಯಿ
 

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ
ಬೆಂಗಳೂರು: 71,510 ರೂಪಾಯಿ, ಚೆನ್ನೈ: 71,510 ರೂಪಾಯಿ,  ಮುಂಬೈ: 71,510 ರೂಪಾಯಿ, ದೆಹಲಿ: 71,660 ರೂಪಾಯಿ,  ಕೋಲ್ಕತ್ತಾ: 71,510 ರೂಪಾಯಿ ಮತ್ತು ಹೈದರಾಬಾದ್: 71,510 ರೂಪಾಯಿ

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ
10 ಗ್ರಾಂ: 904 ರೂಪಾಯಿ 
100 ಗ್ರಾಂ: 9,040 ರೂಪಾಯಿ 
1 ಕೆಜಿ: 90,400 ರೂಪಾಯಿ

Latest Videos

click me!