ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆಯಿಂದ ತೀವ್ರ ಹಿನ್ನಡೆ ಅನುಭವಿಸಿದೆ. ಟ್ಯಾರಿಫ್ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಗ್ರಾಹಕರು ಬಿಎಸ್ಎನ್‌ಎಲ್‌ನತ್ತ ಮುಖ ಮಾಡಿದ್ದಾರೆ. ಬಿಎಸ್ಎನ್‌ಎಲ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ನಿಂದ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಹೆಚ್ಚಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇದೀಗ ಏರ್ಟೆಲ್ ಹೊಸ ವರ್ಷದಲ್ಲಿ ಕಡಿಮೆ ಬೆಲೆ ರೀಚಾರ್ಜ್ ಪ್ಲಾನ್ ಘೋಷಿಸಿದೆ.
ಏರ್ಟೆಲ್ ಇದೀಗ 219 ರೂಪಾಯಿ ಪ್ಲಾನ್ ಘೋಷಿಸಿದೆ. ಇದು 30 ದಿನಗಳ ವ್ಯಾಲಿಟಿಡಿ ಪ್ಲಾನ್ ಆಗಿದೆ. ಕೈಗೆಟುಕವ ದರದಲ್ಲಿ ಏರ್ಟೆಲ್ ಹಲವು ಆಫರ್ ನೀಡುತ್ತಿದೆ. ಪ್ರಮುಖವಾಗಿ ಈ ಪ್ಲಾನ್ ವ್ಯಾಲಿಟಿಡಿಗಾಗಿ ಬಳಸುವ ಗ್ರಾಹಕರಿಗೆ ನೀಡಲಾಗಿದೆ. ದುಬಾರಿ ಮೊತ್ತದ ರೀಚಾರ್ಜ್ ಬದಲು ಹೆಚ್ಚಿನ ದಿನ ವ್ಯಾಲಿಟಿಡಿ ಇರುವ ಪ್ಲಾನ್ ಬಯಸುವ ಗ್ರಾಹಕರಿಗೂ ಇದು ಸೂಕ್ತವಾಗಿದೆ.
219 ರೂಪಾಯಿ ಹೊಸ ಎರ್ಟೆಲ್ ರೀಚಾರ್ಜ್ ಪ್ಲಾನ್‌ನಲ್ಲಿ 30 ದಿನಗಳಲ್ಲಿ ಒಟ್ಟು 300 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. ಕರೆ ಅನ್‌ಲಿಮಿಟೆಡ್ ನೀಡಲಾಗಿದೆ. 30 ದಿನ ಯಾವುದೇ ನೆಟ್‌ವರ್ಕ್‌ಗೆ ಉಚಿತವಾಗಿ ಕರೆ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಕರೆ ಹಾಗೂ ಹೆಚ್ಚಿನ ವ್ಯಾಲಿಟಿಡಿ ಬಯಸುವ ಗ್ರಾಹಕರಿಗೆ ಇದು ಸೂಕ್ತವಾಗಿದೆ.
219 ರೂಪಾಯಿ ಪ್ಲಾನ್‌ನಲ್ಲಿ ಡೇಟಾ ಉಪಯೋಗ ಕಡಿಮೆ ಇದೆ. ಕಾರಣ ಇಲ್ಲಿ ಒಟ್ಟು 3ಜಿಬಿ ಡೇಟಾ ಸಿಗಲಿದೆ. ಇದರ ಜೊತೆಗೆ 5 ರೂಪಾಯಿ ಬ್ಯಾಲೆನ್ಸ್ ಇರಲಿದೆ. ಇನ್ನು 3 ಜಿಬಿ ಡೇಟಾ ಮುಗಿದ ಬಳಿಕ ಡೇಟಾ ಬಳಕೆ ಮಾಡಿದರೆ ಪ್ರತಿ ಎಂಬಿಗೆ 50 ಪೈಸೆ ಚಾರ್ಜ್ ಆಗಲಿದೆ.
ಏರ್ಟೆಲ್ ಕಡಿಮೆ ಬೆಲೆಗೆ ಹೊಸ ಪ್ಲಾನ್ ಘೋಷಿಸಿದೆ. ಆದರೆ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿರುವ ಗ್ರಾಹಕರು ಮರಳಿ ಬರುವ ಸಾಧ್ಯತೆ ಇಲ್ಲ. ಕಾರಣ ಸದ್ಯ ಘೋಷಿರುವ ಪ್ಲಾನ್ ಡೇಟಾ ಬಳೆಕೆದಾರ ಗ್ರಾಹಕರಿಗೆ ತೃಪ್ತಿಯಾಗುವಂತಿಲ್ಲ. ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಏರ್ಟೆಲ್ ಬೇರೆ ಕೈಗೆಟುಕುವ ದರದ ಪ್ಲಾನ್ ಲಭ್ಯವಿದೆ.