ಇಂದಿನ 22 & 24 ಕ್ಯಾರಟ್ ಚಿನ್ನದ ಬೆಲೆ; ಖರೀದಿಗೆ ಮುನ್ನ ದರ ತಿಳಿದುಕೊಳ್ಳಿ

First Published | Jan 4, 2025, 7:56 AM IST

ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ, ಖರೀದಿಗೆ ಮುನ್ನ ಇಂದಿನ ದರ ತಿಳಿದುಕೊಳ್ಳುವುದು ಮುಖ್ಯ. 22 ಮತ್ತು 24 ಕ್ಯಾರಟ್ ಚಿನ್ನದ ದರ, ಬೆಳ್ಳಿ ದರ ಮತ್ತು ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ ಇಲ್ಲಿದೆ.

ಪ್ರತಿಯೊಬ್ಬ ಮಹಿಳೆಗೂ ಚಿನ್ನಾಭರಣ ಧರಿಸಬೇಕು ಎಂಬ ಆಸೆ ಇದ್ದೇ  ಇರುತ್ತದೆ.  ಆದರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಂದು ವೇಳೆ ಚಿನ್ನ ಖರೀದಿಗೆ ಇಂದು ಅಂಗಡಿಗೆ ಹೋಗುತ್ತಿದ್ದರೆ ಇವತ್ತಿನ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಸಂಬಳ ಅಥವಾ ವ್ಯಾಪಾರದಲ್ಲಿ ಹಣ ಉಳಿದ್ರೆ ಚಿನ್ನ ಖರೀದಿ ಮಾಡಬಹುದಾ ಎಂದು ಯೋಚಿಸುತ್ತಾರೆ. ಆದ್ದರಿಂದ ಅಂಗಡಿಗೆ ತೆರಳುವ ಮುನ್ನ ಬೆಲೆ ಎಷ್ಟಿದೆ ಅಂತ ತಿಳಿದ್ರೆ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಸಿಗುತ್ತೆ ಎಂಬ ಅಂದಾಜು ಸಿಗುತ್ತದೆ. ಇದರಿಂದ ಗೋಲ್ಡ್ ಶಾಪಿಂಗ್ ಸರಳವಾಗುತ್ತದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.

Tap to resize

ಇಂದಿನ 22 ಕ್ಯಾರಟ್ ಚಿನ್ನದ ಬೆಲೆ 
1 ಗ್ರಾಂ: 7,261 ರೂಪಾಯಿ
8 ಗ್ರಾಂ: 58,088 ರೂಪಾಯಿ 
10 ಗ್ರಾಂ: 72,610 ರೂಪಾಯಿ
100 ಗ್ರಾಂ: 7,26,100 ರೂಪಾಯಿ

ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,291 ರೂಪಾಯಿ
8 ಗ್ರಾಂ: 63,368 ರೂಪಾಯಿ 
10 ಗ್ರಾಂ: 79,210 ರೂಪಾಯಿ 
100  ಗ್ರಾಂ: 7,92,100 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್, 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 72,610 ರೂಪಾಯಿ, ಮುಂಬೈ: 72,610 ರೂಪಾಯಿ, ದೆಹಲಿ: 72,760 ರೂಪಾಯಿ, ಕೋಲ್ಕತ್ತಾ: 72,610 ರೂಪಾಯಿ,  ಬೆಂಗಳೂರು: 72,610 ರೂಪಾಯಿ, ಹೈದರಾಬಾದ್: 72,610 ರೂಪಾಯಿ ಆಗಿದೆ. 

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ
10 ಗ್ರಾಂ: 926 ರೂಪಾಯಿ
100 ಗ್ರಾಂ: 9,260  ರೂಪಾಯಿ
1000 ಗ್ರಾಂ: 92,600 ರೂಪಾಯಿ

ಇಂದು ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣ  ವಸ್ತುಗಳಾಗಿ ಉಳಿದಿಲ್ಲ. ಬೆಲೆ ಏರಿಕೆ ಕಾರಣದಿಂದ ಈ ಎರಡೂ ಲೋಹಗಳ ಮೇಲಿನ ಹೂಡಿಕೆಯೂ ಅಧಿಕವಾಗುತ್ತಿದೆ. ಈ ವರ್ಷವೂ ಬೆಲೆ ಏರಿಕೆ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

Latest Videos

click me!