ಬಿಎಸ್‌ಎನ್ಎಲ್ 91 ರೂಪಾಯಿಗೆ 90 ದಿನ ವ್ಯಾಲಿಡಿಟಿ, 3 ತಿಂಗಳು ರೀಚಾರ್ಜ್ ತಲೆಬಿಸಿ ಇಲ್ಲ

First Published | Jan 3, 2025, 8:02 PM IST

ಬಿಎಸ್‌ಎನ್ಎಲ್ ಮೈಕೊಡವಿ ಎದ್ದು ನಿಂತ ಬಳಿಕ ಆಫರ್‌ಗಳ ಸುರಿಮಳೆಯಾಗುತ್ತಿದೆ. ಇತ್ತ ಜಿಯೋ, ಏರ್ಟೆಲ್ ಸೇರಿದಂತೆ ಇತರ ಟೆಲಿಕಾಂ ಸರ್ವೀಸ್ ಸಂಸ್ಥೆಗಳು ಕಕ್ಕಾಬಿಕ್ಕಿಯಾಗಿದೆ. ಇದೀಗ 91 ರೂಪಾಯಿ 90 ದಿನ ವ್ಯಾಲಿಡಿಟಿ ಪ್ಲಾನ್ ಘೋಷಿಸಿದೆ.

ಬಿಎಸ್‌ಎನ್ಎಲ್ ಸರ್ವೀಸ್ ಉತ್ತಮಗೊಂಡಿದೆ. ಇದರ ಜೊತೆಗೆ ಕಡಿಮೆ ಬೆಲೆಯ ಪ್ಲಾನ್‌ಗಳಿಂದ ಜನರು ಬಿಎಸ್‌ಎನ್ಎಲ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಖಾಸಗಿ ಟೆಲಿಕಾಂಗಳ ರೀಚಾರ್ಜ್ ಮೊತ್ತ ದುಬಾರಿಯಾಗಿದೆ. ಸ್ಪರ್ಧೆ ಕಾರಣ ಕೆಲ ಆಫರ್ ನೀಡಿದರೂ ಜನರು ಮಾತ್ರ ಪೋರ್ಟ್ ಮಾಡುವುದು ನಿಲ್ಲಿಸಿಲ್ಲ. ಇದೇ ವೇಳೆ ಬಿಎಸ್‌ಎನ್ಎಲ್ ಗಣನೀಯವಾಗಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. 

ಬಿಎಸ್‌ಎನ್ಎಲ್ ಹೊಸ ಹೊಸ ಪ್ಲಾನ್ ಘೋಷಣೆ ಮಾಡಿದೆ. ಈ ಪೈಕಿ ಇದೀಗ 91 ರೂಪಾಯಿ ಪ್ಲಾನ್ ಎಲ್ಲರ ಗಮನಸೆಳೆದಿದೆ. ಇದು ಕೇವಲ 91 ರೂಪಾಯಿ ರೀಚಾರ್ಜ್ ಪ್ಲಾನ್. ಆದರೆ ಸೌಲಭ್ಯ ದುಪ್ಪಟ್ಟಿದೆ. ಕಾರಣ 3 ತಿಂಗಳು ರೀಚಾರ್ಜ್ ಮಾಡಬೇಕಾದ ತಲೆಬಿಸಿ ಇಲ್ಲ. 90 ದಿನಗಳ ವ್ಯಾಲಿಡಿಟಿ ಈ ಪ್ಲಾನ್‌ನಲ್ಲಿ ನೀಡಲಾಗುತ್ತಿದೆ.
 

Tap to resize

ಇದು ಬಿಎಸ್‌ಎನ್ಎಲ್ ಸಿಮ್‌ನ್ನು ಎರಡನೇ ಆಯ್ಕೆಯಾಗಿಟ್ಟಿರುವ ಗ್ರಾಹಕರಿಗೆ ಸೂಕ್ತ ಪ್ಲಾನ್. ಕಾರಣ ಸಿಮ್ ಆ್ಯಕ್ಚೀವ್ ಆಗಿರಲು ದುಬಾರಿ ಮೊತ್ತದ ರೀಚಾರ್ಜ್ ಮಾಡಬೇಕು ಎಂದೇನಿಲ್ಲ. 91 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, 3 ತಿಂಗಳು ಇನ್‌ಕಮಿಂಗ್ ಕರೆಗಳು, ಸಂದೇಶ ಸೇರಿದಂತೆ ಎಲ್ಲವೂ ಲಭ್ಯವಾಗಲಿದೆ.

91 ರೂಪಾಯಿ ಪ್ಲಾನ್‌ನಲ್ಲಿ ಯಾವುದೇ ಡೇಟಾ, ಟಾಕ್‌ಟೈಮ್ ಲಭ್ಯವಿರುವುದಿಲ್ಲ. ಇದು ಸಿಮ್ ಆ್ಯಕ್ಟೀವ್ ಆಗಿಡಲು ಬಯಸುವವರಿಗೆ ನೀಡಿದ ಪ್ಲಾನ್. ವಿಶೇಷ ಅಂದರೆ ಇದರ ಮೇಲೆ ಆ್ಯಡ್ ಆನ್ ಡೇಟಾ, ಟಾಕ್ ಟೈಮ್ ಪ್ಯಾಕೇಜ್‌ಗಳನ್ನು ಅತೀ ಕಡಿಮೆ ಬೆಲೆಗೆ ರೀಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಗ್ರಾಹಕರು ಸಿಮ್ ಆ್ಯಕ್ಟಿವೇಶನ್ ಜೊತೆಗೆ ಡೇಟಾ ಸೇರಿದಂತೆ ಇತರ ಸೌಲಭ್ಯವನ್ನು ಬಳಸಿಕೊಳ್ಳಲು ಸಾಧ್ಯವಿದೆ.
 

ಮೂಲ ಪ್ಲಾನ್ ಅಂದರೆ 91 ರೂಪಾಯಿ ರೀಚಾರ್ಜ್ ಮಾಡಿ ಇದಕ್ಕೆ ಹೆಚ್ಚುವರಿಯಾಗಿ ಡೇಟಾ ಸೇರಿಸಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಕೇವಲ 16 ರೂಪಾಯಿಯಿಂದ ಡೇಟಾ ಪ್ಲಾನ್ ಆರಂಭಗೊಳ್ಳಲಿದೆ. 58 ರೂಪಾಯಿ, 98 ರೂಪಾಯಿ ಸೇರಿದಂತೆ ಹಲವು ಪ್ಲಾನ್‌ಗಳು ಲಭ್ಯವಿದೆ. ಈ ಮೂಲೂಕ ಡೇಟಾ ಕೂಡ ಆನಂದಿಸಬಹುದು.

Latest Videos

click me!