Published : Dec 28, 2024, 10:09 AM ISTUpdated : Dec 28, 2024, 10:46 AM IST
ವಾರಾಂತ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ. ದಿಲ್ಲಿ-ಮುಂಬೈನಲ್ಲಿ ಶನಿವಾರ, ಡಿಸೆಂಬರ್ 28 ರಂದು ಚಿನ್ನದ ಬೆಲೆಯಲ್ಲಿ (Gold Price Today) ಇಳಿಕೆ ಕಂಡುಬಂದಿದೆ. ಇಂದು ಚಿನ್ನದ ಖರೀದಿಗೆ ಹೋಗುವ ಮುನ್ನ ಬೆಲೆ ತಿಳಿದುಕೊಳ್ಳಿ.
ಹೊಸ ವರ್ಷಕ್ಕೆ ನಿಮ್ಮ ಆಪ್ತರಿಗೆ ಗಿಫ್ಟ್ ಕೊಡುವ ಯೋಚನೆ ಇದ್ರೆ ಚಿನ್ನವನ್ನೇ ಆಯ್ಕೆ ಮಾಡಿಕೊಳ್ಳಿ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಚಿನ್ನದ ಕಾಣಿಕೆ ನೀಡಿ ಆಪ್ತರನ್ನು ಸಂತೋಷಗೊಳಿಸಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಿ.
26
ಚಿನ್ನ ಕೇವಲ ಆಭರಣವಾಗಿ ಉಳಿದಿಲ್ಲ, ಕಳೆದ ಎರಡು ದಶಕಗಳಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಇಂದು 24 ಕ್ಯಾರಟ್ ಚಿನ್ನದ ಮೇಲೆ 1,600 ರೂ.ವರೆಗೆ ಇಳಿಕೆಯಾಗಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
36
22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,135 ರೂಪಾಯಿ (15 ರೂ.ಇಳಿಕೆ)
8 ಗ್ರಾಂ: 57,080 ರೂಪಾಯಿ (120 ರೂ.ಇಳಿಕೆ)
10 ಗ್ರಾಂ: 71,350 ರೂಪಾಯಿ (150 ರೂ.ಇಳಿಕೆ)
100 ಗ್ರಾಂ: 7,13,500 ರೂಪಾಯಿ (1,500 ರೂ. ಇಳಿಕೆ )
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 71,350 ರೂಪಾಯಿ, ಮುಂಬೈ: 71,350 ರೂಪಾಯಿ, ದೆಹಲಿ: 71,500 ರೂಪಾಯಿ, ಕೋಲ್ಕತ್ತಾ: 71,350 ರೂಪಾಯಿ, ಬೆಂಗಳೂರು: 71,350 ರೂಪಾಯಿ, ಹೈದರಾಬಾದ್: 71,350 ರೂಪಾಯಿ,
66
ದೇಶದಲ್ಲಿ ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ಅಧಿಕವಾಗಿದೆ. ಬೆಳ್ಳಿ ದರ ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
10 ಗ್ರಾಂ: 926 ರೂಪಾಯಿ
100 ಗ್ರಾಂ: 9,260 ರೂಪಾಯಿ
1 ಕಜೆ: 92,600 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.