Gold And Silver Price: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಇಳಿಕೆ ಕಂಡುಬಂದಿದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 7,600 ರೂ. ಮತ್ತು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 7,000 ರೂ. ಕುಸಿತ ಕಂಡಿದೆ.
ಆಗಸ್ಟ್ ಆರಂಭದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುತ್ತಲೇ ಇತ್ತು. ನಿರಂತರ ಬೆಲೆ ಏರಿಕೆಯಿಂದಾಗಿ ಚಿನ್ನ ಹಲವು ಸಾರ್ವಕಾಲಿಕ ದಾಖಲೆಗಳನ್ನು ಬರೆದುಕೊಂಡಿತ್ತು. ಆದ್ರೆ ಇಂದು ಚಿನ್ನಾಭರಣ ಪ್ರಿಯರು ಖುಷಿಪಡುವ ದಿನವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 7,000 ರೂ.ಗಳವರೆಗೆ ಇಳಿಕೆಯಾಗಿದೆ.
27
ಭಾರತದಲ್ಲಿ ನಗರದಿಂದ ನಗರಕ್ಕೆ ಚಿನ್ನದ ಬೆಲೆ ವ್ಯತ್ಯಾಸ ಆಗುತ್ತಿರುತ್ತದೆ. ಭಾರತ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಮಾರುಕಟ್ಟೆಯ ತಜ್ಞರ ಪ್ರಕಾರ, ಹಂತ ಹಂತವಾಗಿ ಬೆಳ್ಳಿಯ ಉಪಲಬ್ದತೆಯಲ್ಲಿ ಕುಸಿತ ಕಾಣಿಸುತ್ತಿದೆ. ನಿರಂತರವಾಗಿ 5 ವರ್ಷದಿಂದ ಬೆಳ್ಳಿಯ ಬೇಡಿಕೆಯನ್ನು ಪೂರ್ಣ ಮಾಡಲಾಗುತ್ತಿಲ್ಲ. ಈ ಹಿನ್ನೆಲೆ ಬೆಳ್ಳಿ ಬೆಲೆಯೂ ಏರಿಕೆ ಕಾಣುತ್ತಿದೆ. ಇಂದಿನ ಬೆಳ್ಳಿ ದರ ಹೀಗಿದೆ.
10 ಗ್ರಾಂ: 1,170 ರೂಪಾಯಿ
100 ಗ್ರಾಂ: 11,700 ರೂಪಾಯಿ
1000 ಗ್ರಾಂ: 1,17,000 ರೂಪಾಯಿ
77
ಎಷ್ಟು ಇಳಿಕೆ?
* 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,600 ರೂ. ಇಳಿಕೆಯಾಗಿದೆ. ಅಂದ್ರೆ 1 ಗ್ರಾಂನಲ್ಲಿ 76 ರೂ. ಕುಸಿತವಾಗಿದೆ.
* 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಇಳಿಕೆಯಾಗಿದೆ. ಅಂದ್ರೆ 1 ಗ್ರಾಂ ಬೆಲೆಯಲ್ಲಿ 70 ರೂ. ಕುಸಿತವಾಗಿದೆ.
* ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ದರಗಳು ಸ್ಥಿರವಾಗಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.