ಇಂದು ನೀವು ನಿನ್ನೆಯ ದರದಲ್ಲಿಯೇ ಚಿನ್ನವನ್ನು ಖರೀದಿಸಬಹುದಾಗಿದೆ. ಬಟ್ಟೆ ಶಾಪಿಂಗ್‌ಗೆ ಹಾಕುವ ಹಣಕ್ಕೆ ಮತ್ತೊಂದಿಷ್ಟು ದುಡ್ಡು ಸೇರಿಸಿ ಚಿನ್ನವನ್ನು ಖರೀದಿಸಬಹುದು. ಈ ಹಣ ನಿಮಗೆ ಕಡಿಮೆ ಸಮಯಲ್ಲಿಯೇ ಒಳ್ಳೆಯ ರಿಟರ್ನ್ ನೀಡಲಿದೆ.
27
ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಮೂಲಕ ಏರಿಕೆಯ ಓಟಕ್ಕೆ ಬ್ರೇಕ್ ಬಿದ್ದಿತ್ತು. 8 ದಿನಗಳ ಬಳಿಕ ಚಿನ್ನದ ದರ ಕುಸಿತಗೊಂಡಿತ್ತು. ಆದ್ರೆ ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗ್ರಾಹಕರು ಇಂದು ಸಹ ಕಡಿಮೆಯಾದ ದರದಲ್ಲಿಯೇ ಚಿನ್ನವನ್ನು ಖರೀದಿ ಮಾಡುವ ಅವಕಾಶವಿದ್ದು, ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ.
ಮಾರುಕಟ್ಟೆಯ ತಜ್ಞರ ಪ್ರಕಾರ, ಹಂತ ಹಂತವಾಗಿ ಬೆಳ್ಳಿಯ ಉಪಲಬ್ದತೆಯಲ್ಲಿ ಕುಸಿತ ಕಾಣಿಸುತ್ತಿದೆ. ನಿರಂತರವಾಗಿ 5 ವರ್ಷದಿಂದ ಬೆಳ್ಳಿಯ ಬೇಡಿಕೆಯನ್ನು ಪೂರ್ಣ ಮಾಡಲಾಗುತ್ತಿಲ್ಲ. ಈ ಹಿನ್ನೆಲೆ ಬೆಳ್ಳಿ ಬೆಲೆಯೂ ಏರಿಕೆ ಕಾಣುತ್ತಿದೆ. ಇಂದಿನ ಬೆಳ್ಳಿ ದರ ಹೀಗಿದೆ.
10 ಗ್ರಾಂ: 1,170 ರೂಪಾಯಿ
100 ಗ್ರಾಂ: 11,700 ರೂಪಾಯಿ
1000 ಗ್ರಾಂ: 1,17,000 ರೂಪಾಯಿ
77
ಷೇರುದಾರರು ಬೆಲೆ ಏರಿಕೆಯಾಗುವರೆಗೂ ತಮ್ಮಲ್ಲಿಯ ಬೆಳ್ಳಿಯನ್ನು ಮಾರಾಟ ಮಾಡಲ್ಲ. ಹೂಡಿಕೆದಾರರು ಬೆಳ್ಳಿಯನ್ನು ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಬಯಸುತ್ತಾರೆ. ಇದರಿಂದ ಬೆಳ್ಳಿ ಬೇಡಿಕೆ ಪ್ರಮಾಣ ಏರಿಕೆಯಾಗುತ್ತಲಿರುತ್ತದೆ. ಕೇವಲ ಚಿನ್ನ ಮಾತ್ರವಲ್ಲ ಇಂದು ಬೆಳ್ಳಿ ಮೇಲಿನ ಹೂಡಿಕೆ ಲಾಭದಾಯಕವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.