ಶ್ರೀಮಂತರಾಗಬೇಕೆ? ಈ 5 ಅಭ್ಯಾಸಗಳಿದ್ರೆ ಇಂದೇ ಬಿಟ್ಟುಬಿಡಿ!

Published : Apr 05, 2026, 12:35 PM IST

ಬಡವರು, ಮಧ್ಯಮ ವರ್ಗದ ಜನರು ಶ್ರೀಮಂತರಾಗಲು ಹಗಲಿರುಳು ದುಡಿಯುತ್ತಾರೆ ಆದರೆ ಬಡವರಾಗಿಯೇ ಇರುತ್ತಾರೆ. ಇದಕ್ಕೆ ಕಾರಣ ಈ ಐದು ಕೆಟ್ಟ ಅಭ್ಯಾಸಗಳು. ಇವುಗಳನ್ನ ಬಿಟ್ಟರೆ ನೀವೂ ಶ್ರೀಮಂತರಾಗಬಹುದು

PREV
16
ಶ್ರೀಮಂತರಾಗಬೇಕೆ? ಈ 5 ಅಭ್ಯಾಸಗಳಿದ್ರೆ ಇಂದೇ ಬಿಟ್ಟುಬಿಡಿ!

ಸಾಮಾನ್ಯವಾಗಿ ಮಧ್ಯಮ ವರ್ಗದವರು ಆರ್ಥಿಕ ಬಿಕ್ಕಟ್ಟು ಅನ್ನೋದು ಜೀವನದಲ್ಲಿ ದಿಢೀರನೆ ಎದುರಾಗುತ್ತೆ ಎಂದು ನಂಬ್ತಾರೆ. ಆದರೆ ಹೂಡಿಕೆ ತಜ್ಞ ವಾರೆನ್ ಬಫೆಟ್ ಪ್ರಕಾರ, ಆರ್ಥಿಕ ಬಿಕ್ಕಟ್ಟು ದುತ್ತೆಂದು ಬರೋಲ್ಲ. ನಾವು ದಿನನಿತ್ಯ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕ್ರಮೇಣ ಬೆಳೆದು ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ನೋಡೋಕೆ ಸಣ್ಣ ತಪ್ಪುಗಳಂತೆ ಕಾಣುತ್ತವೆ. ಕಾಲಾನಂತರದಲ್ಲಿ ನಮ್ಮ ಆರ್ಥಿಕ ಸ್ಥಿತಿಯನ್ನೇ ಬುಡಮೇಲೂ ಮಾಡಿಹಾಕುತ್ತವೆ. ಆದ್ದರಿಂದ, ಶ್ರೀಮಂತರಾಗಲು ಈ ಕೆಳಗಿನ ಅಭ್ಯಾಸಗಳಿಂದ ದೂರವಿರುವುದು ಒಳಿತು.

26
ಕ್ರೆಡಿಟ್ ಕಾರ್ಡ್ ಎಂಬ ಬಡ್ಡಿಯ ಬಲೆ!

ಈಗಂತೂ ಪ್ರತಿಯೊಬ್ಬರ ಬಳಿ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತೆ. ಅದು ನಮಗೆ ಅಗತ್ಯವಿದೆಯೇ ಇಲ್ವೋ ಅನ್ನೋದು ಮುಖ್ಯವಾಗಿರೊಲ್ಲ. ಬ್ಯಾಂಕಿಂಗ್ ಜಾಹೀರಾತು ನೋಡಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೆ ಮಾಡುವವರೇ ಹೆಚ್ಚು. ಕ್ರೆಡಿಟ್ ಕಾರ್ಡ್ ಬಳಸುವ ಅಬ್ಬರದಲ್ಲಿ ನಾವು ಅದರ ಹಿಂದಿರುವ ಭಾರಿ ಹುನ್ನಾರವನ್ನು ಮರೆಯುತ್ತೇವೆ. ಶೇ. 18ಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸುವುದು ಎಂದರೆ ಕಷ್ಟಪಟ್ಟು ದುಡಿದ ಹಣವನ್ನು ಸುಮ್ಮನೆ ಬ್ಯಾಂಕಿಗೆ ಸುರಿದಂತೆ. ಮೊದಲು ದುಬಾರಿ ಬಡ್ಡಿಯ ಸಾಲಗಳನ್ನು ತೀರಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ. ಈ ಬಡ್ಡಿಯ ವಿಷವರ್ತುಲದಿಂದ ಎಷ್ಟು ಬೇಗ ಹೊರಬರುತ್ತೀರೋ, ಅಷ್ಟು ಬೇಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

36
ಆತುರದ ಹೂಡಿಕೆ ಬೇಡ

ರಾತ್ರೋರಾತ್ರಿ ಶ್ರೀಮಂತರಾಗುವ ಆತುರ ಹೆಚ್ಚಿನವರನ್ನು ನಷ್ಟಕ್ಕೆ ತಳ್ಳುತ್ತದೆ. ಗಿಡ ಮರವಾಗಿ ಬೆಳೆಯಲು ಹೇಗೆ ಸಮಯ ಬೇಕೋ, ಹಾಗೆಯೇ ಹಣ ಬೆಳೆಯಲು ಕೂಡ ತಾಳ್ಮೆ ಅಗತ್ಯ. ಹೆಚ್ಚಿನವರು ಮೊದಲು ಖರ್ಚು ಮಾಡಿ, ಉಳಿದರೆ ಮಾತ್ರ ಉಳಿತಾಯ ಮಾಡುತ್ತಾರೆ. ಆದರೆ ಬಫೆಟ್ ಹೇಳುವ ಸರಿಯಾದ ಕ್ರಮವೆಂದರೆ: ಮೊದಲು ಹೂಡಿಕೆಗೆ ಹಣ ಮೀಸಲಿಡಿ, ಅನಂತರ ಉಳಿದ ಹಣದಲ್ಲಿ ನಿಮ್ಮ ಖರ್ಚುಗಳನ್ನು ನಿಭಾಯಿಸಿ.

46
ಅಗತ್ಯಕ್ಕಿಂತ ಮೀರಿದ ಮನೆ ಎಂಬ ಹೊರೆ

ಕೇವಲ ಸಮಾಜದಲ್ಲಿ ಗೌರವ ಪಡೆಯಲು, ಒಣಪ್ರತಿಷ್ಠೆ ಪ್ರದರ್ಶನಕ್ಕಾಗಿ ದೊಡ್ಡ ಮನೆ, ಕಾರು ಖರೀದಿಸುವುದು ಬುದ್ಧಿವಂತಿಕೆಯಲ್ಲ. ಇದಕ್ಕಾಗಿ ಪಡೆಯುವ ಬ್ಯಾಂಕ್ ಸಾಲ, ಅದರ ದುಬಾರಿ ಬಡ್ಡಿ, ಅಥವಾ ಮಾಸಿಕ ಕಂತುಗಳು(EMI) ನಿಮ್ಮ ಆದಾಯದ ಬಹುಭಾಗವನ್ನು ನುಂಗಿ ಹಾಕುತ್ತವೆ. ಇದರಿಂದ ಉಳಿತಾಯ ಮತ್ತು ಹೂಡಿಕೆಗೆ ಹಣವೇ ಉಳಿಯುವುದಿಲ್ಲ. ಮನೆ ಎನ್ನುವುದು ವಾಸಿಸಲು ನೆಮ್ಮದಿ ನೀಡುವ ಜಾಗವಾಗಿರಬೇಕೇ ಹೊರತು, ಪ್ರದರ್ಶನದ ವಸ್ತುವಾಗಬಾರದು.

56
ಅದೃಷ್ಟದ ಬೆನ್ನತ್ತಿ ಹಣ ಕಳೆದುಕೊಳ್ಳಬೇಡಿ

ಲಕ್ಸುರಿ ಜೀವನಕ್ಕಾಗಿ ಜೂಜಾಟ ಅಥವಾ ಲಾಟರಿಯಂತಹ ಸುಲಭ ದಾರಿಗಳನ್ನು ಆಯ್ದುಕೊಳ್ಳುವುದು ಅಪಾಯಕಾರಿ. ಲಾಟರಿಯಲ್ಲಿ ಹಣ ಸಿಗುತ್ತದೆ ಎಂಬ ಭ್ರಮೆಯಲ್ಲಿ ಮಾಡುವ ಸಣ್ಣ ಹೂಡಿಕೆಗಳು ಕೂಡ ಮುಂದೆ ನಿಮ್ಮನ್ನು ದೊಡ್ಡ ನಷ್ಟಕ್ಕೆ ಸಿಲುಕಿಸಬಹುದು. ಕಷ್ಟಪಟ್ಟು ದುಡಿದ ಹಣವನ್ನು ಅದೃಷ್ಟದ ಮೇಲೆ ಪಣಕ್ಕಿಡುವ ಬದಲು, ಸುರಕ್ಷಿತ ಮಾರ್ಗಗಳಲ್ಲಿ ಹೂಡಿಕೆ ಮಾಡುವುದು ಬಫೆಟ್ ನೀಡುವ ಅಮೂಲ್ಯ ಸಲಹೆ.

66
ಕಾರು ಕೇವಲ ಸಾರಿಗೆಗೆ ಹೊರತು ಪ್ರತಿಷ್ಠೆಗಲ್ಲ

ಅನೇಕರು ಕೇವಲ ಸ್ಟೇಟಸ್‌ಗಾಗಿ ಸಾಲ ಮಾಡಿ ಹೊಸ ಕಾರುಗಳನ್ನು ಖರೀದಿಸುತ್ತಾರೆ. ಕಾರು ರಸ್ತೆಗೆ ಇಳಿಯುತ್ತಿದ್ದಂತೆಯೇ ಅದರ ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತದೆ, ಆದರೆ ನಿಮ್ಮ ಸಾಲದ ಕಂತುಗಳು ಮಾತ್ರ ಹಾಗೆಯೇ ಇರುತ್ತವೆ. ಸ್ವತಃ ವಾರೆನ್ ಬಫೆಟ್ ಅವರೇ ಹಲವು ವರ್ಷಗಳ ಕಾಲ ಹಳೆಯ ಕಾರನ್ನೇ ಬಳಸುತ್ತಿದ್ದರು. ಪ್ರತಿಷ್ಠೆಗಾಗಿ ಹೊಸ ಕಾರು ಖರೀದಿಸುವುದು ಆರ್ಥಿಕವಾಗಿ ನಷ್ಟದ ಹಾದಿಯಾಗಿದೆ. ಹೀಗಾಗಿ ನೀವು ಶ್ರೀಮಂತರಾಗಲು ಬಯಸಿದರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ಹಣ ಉಳಿತಾಯ, ಹೂಡಿಕೆಯ ಕಡೆ ಗಮನಹರಿಸಲು ಪ್ರಾರಂಭಿಸಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories