ಮಗ ಸಿದ್ಧಾರ್ಥ್ ಮಲ್ಯ ಜೊತೆಗೆ ಲಿಯಾನಾ ಮಲ್ಯ ಮತ್ತು ತಾನ್ಯಾ ಮಲ್ಯ ಎಂಬ ಇಬ್ಬರು ಪುತ್ರಿಯರ ಜೊತೆಗೆ ಲೈಲಾ ಮಲ್ಯ ಎಂಬ ದತ್ತು ಪುತ್ರಿ ಇದ್ದಾಳೆ. ಆದರೆ ದತ್ತು ಪುತ್ರಿ ಲೈಲಾ ಅನೇಕ ಕಾಂಟ್ರವರ್ಸಿಗಳಲ್ಲಿ ಸಿಲುಕಿಕೊಂಡರು. ವಿಜಯ್ ಮಲ್ಯ ತನ್ನ ಮೊದಲ ಪತ್ನಿ ಸಮೀರ ತಯಾಬ್ಜಿಯಿಂದ ವಿಚ್ಛೇದನ ಪಡೆದ ನಂತರ 1993 ರಲ್ಲಿ ತನ್ನ ಬಾಲ್ಯದ ಕ್ರಶ್ ರೇಖಾಳನ್ನು ಮತ್ತೆ ಭೇಟಿಯಾದರು. ರೇಖಾ ಕೂಡ ತನ್ನ ಪತಿ ಶಾಹಿದ್ ಮಹಮೂದ್‌ನಿಂದ ವಿಚ್ಛೇದನ ಪಡೆದಿದ್ದರು.
ರೇಖಾ ಮತ್ತು ಶಾಹಿದ್‌ಗೆ ಲೈಲಾ ಮಹಮೂದ್ ಮತ್ತು ಕಬೀರ್ ಮಹಮೂದ್ ಎಂಬ ಇಬ್ಬರು ಮಕ್ಕಳಿದ್ದರು. ವಿಜಯ್ ಮಲ್ಯ ರೇಖಾಳನ್ನು ಎರಡನೇ ಮದುವೆಯಾದರು. ಈ ವೇಳೆ ಮಗಳು ಲೈಲಾಳೊಂದಿಗೆ ರೇಖಾ ವಿಜಯ್ ಮಲ್ಯ ಮನೆ ಸೇರಿದರು. ಆಗ ಉದ್ಯಮಿ ವಿಜಯ್ ಮಲ್ಯ ಲೈಲಾ ಮಹಮೂದ್ ನನ್ನು ದತ್ತು ಪಡೆದು, ಲೈಲಾ ಮಲ್ಯ ಎಂದು ಮರುನಾಮಕರಣ ಮಾಡಿದರು.
ಏಪ್ರಿಲ್ 6, 1979 ರಂದು ಯುಎಸ್ಎದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದ ಲೈಲಾ, ಕರ್ನಾಟಕದ ಬೆಂಗಳೂರಿನಲ್ಲಿರುವ ಮಲ್ಯ ಅದಿತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಇಂಟರ್ನ್ಯಾಷನಲ್ ಬ್ಯುಸಿನೆಸ್‌ನಲ್ಲಿ ಪದವಿಗಾಗಿ ಮ್ಯಾಸಚೂಸೆಟ್ಸ್‌ನ ವಾಲ್ತಮ್‌ನ ಬೆಂಟ್ಲಿ ವಿಶ್ವವಿದ್ಯಾಲಯದಲ್ಲಿ ಕಲಿತರು ಮತ್ತು ನ್ಯೂಯಾರ್ಕ್ ನಗರದ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೂಡ ವಿದ್ಯಾಭ್ಯಾಸ ಮಾಡಿದರು.
ಲೈಲಾ ಮಲ್ಯ ಅವರು ವೋಗ್ ಸ್ಟೈಲಿಸ್ಟ್ ಮತ್ತು ಆಭರಣ ವಿನ್ಯಾಸಕಿ ಮತ್ತು ಅವರ ಆಭರಣಗಳ ಸಾಲನ್ನು ಸೋಷಿಯಲ್ ಬಟರ್‌ಫ್ಲೈ ಎಂದು ಕರೆಯಲಾಗುತ್ತದೆ. ತನ್ನ ಉತ್ಪನ್ನಗಳನ್ನು ಬೆಂಗಳೂರಿನ ಕಹಾವಾ ಎಂಬ ಜೀವನಶೈಲಿ ಅಂಗಡಿಗೆ ಹೊರಗುತ್ತಿಗೆ ನೀಡುತ್ತಾಳೆ. ಆಕೆ ಫ್ಯಾಷನ್‌ನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಅನೇಕ ಫ್ಯಾಷನ್ ವೀಕ್ ಶೋಗಳಲ್ಲಿ ಆಗಾಗ ಕಾಣಿಸಿಕೊಂಡಿದ್ದಾಳೆ.
ಲೈಲಾ ಮಲ್ಯ ಅವರು 2011 ರಲ್ಲಿ ಹೂಡಿಕೆ ಬ್ಯಾಂಕರ್ ಸಮರ್ ಸಿಂಗ್ ಎಂಬಾತನನ್ನು ಬಾಲಿಯಲ್ಲಿ 250 ಕ್ಕಿಂತ ಕಡಿಮೆ ಅತಿಥಿಗಳ ತೀರಾ ವೈಯಕ್ತಿಕ ಸಮಾರಂಭದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಲೈಲಾ ಅವರ ಪತಿ ಸಮರ್ ಸಿಂಗ್ ರಾಜಕಾರಣಿ ಪಾರ್ಥ್ ಪವಾರ್ (ಶರದ್ ಪವಾರ್ ಅವರ ಮೊಮ್ಮಗ) ಅವರ ಉತ್ತಮ ಸ್ನೇಹಿತ.
2019 ರಲ್ಲಿ, ಸಮರ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಪಾರ್ಥ್‌ಗೆ ಸಹಾಯ ಮಾಡಿದರು. ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಅಳಿಯನೊಂದಿಗಿನ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಪಾರ್ಥ್ ಅವರನ್ನು ಅನೇಕ ಕಾಂಗ್ರೆಸ್ ನಾಯಕರು ದೂಷಿಸಿದರು.
ಉದ್ಯಮಿ, ಲಲಿತ್ ಮೋದಿ ಅವರ ಐಪಿಎಲ್ ಹಗರಣವು 2010 ರಲ್ಲಿ ಬೆಳಕಿಗೆ ಬಂದ ನಂತರ ಫ್ರಾಂಚೈಸಿಯನ್ನು ಲೈಲಾ ಮೊಹಮ್ಮದ್‌ಗೆ ಬಿಟ್ಟುಕೊಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಕೊಚ್ಚಿ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿತ್ತು. ಆ ನಂತರ 'ಮಿಸ್ಟರಿ ವುಮೆನ್' ಎಂದು ಟ್ಯಾಗ್ ಮಾಡಲಾದ ಲೈಲಾ ಮಲ್ಯ ಹೆಸರು ಕೇಳಿಬಂದು ದೊಡ್ಡ ಮಟ್ಟದ ಸುದ್ದಿಯಾಯ್ತು. ಲಲಿತ್ ಮೋದಿ ಜತೆ ಸಂಬಂಧ ಇರುವ ಬಗ್ಗೆ ಸುದ್ದಿಯಾಗಿತ್ತು.
2010ರಲ್ಲಿ ಐಪಿಎಲ್‌ನ ಮಾಜಿ ಅಧ್ಯಕ್ಷ ಹಾಗೂ ಆಯುಕ್ತ ಲಲಿತ್ ಮೋದಿ ಅವರ ಹೋಟೆಲ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಅಪರಿಚಿತ ಮಹಿಳೆಯೊಬ್ಬರು ಕೆಲವು ದಾಖಲೆಗಳೊಂದಿಗೆ ತೆರಳುತ್ತಿರುವುದು ಕಂಡುಬಂದಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ವಿಜಯ್ ಮಲ್ಯ ಅವರ ಮಲ ಮಗಳು ಲೈಲಾ ಮಲ್ಯ ಎಂದು ಗುರುತಿಸಲಾಯ್ತು. ಲೈಲಾ ಅವರು ಲಲಿತ್ ಮೋದಿ ಅವರ ಆಪ್ತ ಸಹಾಯಕಿ ಎಂದು ಹೇಳಿಕೆಯೊಂದರಲ್ಲಿ ಆಕೆಯ ಸಾಕು ತಂದೆ ವಿಜಯ್ ಮಲ್ಯ ಹೇಳಿದ್ದರು.
ವಿಜಯ್ ಮತ್ತು ಅವರ ಮೊದಲ ಪತ್ನಿ ಸಮೀರಾ ದಂಪತಿಗೆ ಜನಿಸಿದ ಸಿದ್ಧಾರ್ಥ ಮಲ್ಯ ಅವರು ಅಮೇರಿಕನ್ ನಟ , ಮಾಡೆಲ್ ಮತ್ತು ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್‌ನ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ನಿರ್ದೇಶಕರೂ ಆಗಿದ್ದರು.
ಇನ್ನು ಸಿದ್ಧಾರ್ಥ ಮಲ್ಯ ಸಹೋದರಿ ಲಿಯಾನಾ ಮಲ್ಯ ಅಮೇರಿಕನ್ ಪೌರತ್ವವನ್ನು ಹೊಂದಿದ್ದಾರೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸಿಸುತ್ತಿದ್ದಾರೆ. ಇನ್ನೊಬ್ಬಳು ಮಗಳು ತಾನ್ಯಾ ಮಲ್ಯ ಕೂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದು, ಛಾಯಾಗ್ರಹಣ, ಡಿಜಿಟಲ್ ಫೋಟೋಗ್ರಫಿ ಕಲಿಯಲು ಪ್ಯಾರಿಸ್‌ಗೆ ‘ನ್ಯಾಷನಲ್ ಜಿಯಾಗ್ರಫಿಕ್ ಸ್ಟೂಡೆಂಟ್ ಎಕ್ಸ್‌ಪೆಡಿಶನ್’ಗೆ ಸೇರಿದ್ದರು.