ಐಪಿಎಲ್‌ ಗೆ ಕಿಕ್‌ ಹೆಚ್ಚಿಸಲು, 120 ರಿಂದ 4 ಸಾವಿರ ಬೆಲೆಯ ಟಾಪ್‌ 10 ಬೆಸ್ಟ್ ವಿಸ್ಕಿ ಮತ್ತು ಬಿಯರ್

First Published | Apr 20, 2024, 1:51 PM IST

ನೀವು ಐಪಿಎಲ್‌ ಪ್ರಿಯರಾಗಿದ್ದರೆ, ಅದರಲ್ಲೂ ಆರ್‌ಸಿಬಿ ತಂಡ ಅಭಿಮಾನಿಯಾಗಿದ್ದರೆ ನಾವಿಂದು ಹೇಳಿರುವ ಬ್ರ್ಯಾಂಡ್‌ ನಲ್ಲಿ ಒಂದನ್ನು ಆಯ್ಕೆ ಮಾಡಿ ಸಿಪ್‌ ಮಾಡುತ್ತಾ, ಮ್ಯಾಚ್‌ ಎಂಜಾಯ್ ಮಾಡುತ್ತಾ ಕ್ರಿಕೆಟ್‌ ಕಿಕ್ಕಿನ ಜೊತೆಗೆ ಎಣ್ಣೆ ಕಿಕ್ಕನ್ನೂ ಅನುಭವಿಸಿ. 

ನೀವು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅಭಿಮಾನಿಯಾಗಿ ಧೋನಿಯ ಸಿಕ್ಸರ್‌ನಷ್ಟು ಮೃದುವಾದ ಎಣ್ಣೆ ಬ್ರಾಂಡ್‌ ಹುಡುಕುತ್ತಿದ್ದರೆ ಮಂಕಿ ಶೋಲ್ಡರ್ ವಿಸ್ಕಿ ಬೆಸ್ಟ್ ಆಯ್ಕೆ. ಇದರಲ್ಲಿ ಕೋಕೋ, ವೆನಿಲ್ಲಾ, ಜೇನು, ಬಟರ್‌ಸ್ಕಾಚ್ ಮತ್ತು ಬೆರ್ರಿ  ಫ್ಲೇವರ್‌ ಮಿಶ್ರಿತ ಮಾಲ್ಟ್ ಸ್ಕಾಚ್ ಇದೆ. ಅತ್ಯಂತ ರುಚಿಕರವಾಗಿರಲಿದೆ. ಇದರ ಬೆಲೆ 1 ಲೀಟರ್‌ ಗೆ 4150 ರೂ ಆಗಿದೆ.

ಜೇನುತುಪ್ಪದ  ರುಚಿಯೊಂದಿಗೆ, ಜ್ಯಾಕ್ ಡೇನಿಯಲ್ಸ್ ಟೆನ್ನೆಸ್ಸೀ  ಎಣ್ಣೆ ಪ್ರಿಯರಿಗೆ  ಉತ್ತಮ ಆಯ್ಕೆಯಾಗಿದೆ. ಜೇನಿನ ಮಾಧುರ್ಯವು ವಿಸ್ಕಿಯ ರುಚಿಯನ್ನು ಮೃದುಗೊಳಿಸುತ್ತದೆ. ಇದನ್ನು ಸೇವಿಸುತ್ತಾ ಆರಾಮದಾಯಕವಾಗಿ ಆನಂದದ ದಿನವನ್ನು ಕಳೆಯಬಹುದು.  ಇದರ ಬೆಲೆ 1 ಲೀಟರ್‌ ಗೆ 2950 ರೂ ಆಗಿದೆ.

Tap to resize

ಮರ ಮತ್ತು ಕ್ಯಾರಮೆಲ್ ಪರಿಮಳ ಹೊಂದಿರುವ ಇದು ಮಸಾಲೆಯುಕ್ತ, ಅಡಿಕೆ ಮತ್ತು ವೆನಿಲ್ಲಾ ಗಳಿಂದ ಕೂಡಿದ ಕ್ಲಾಸಿಕ್ ಐರಿಶ್ ವಿಸ್ಕಿ . ಇಂದ್ರಿಯಗಳನ್ನು ಶಾಂತಗೊಳಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ  3190 ರೂ ಆಗಿದೆ. 
 

ನೀವು ಆರ್‌ ಸಿಬಿ ಅಭಿಮಾನಿಯೇ. ಹಾಗಾದ್ರೆ ಕೊಹ್ಲಿ ಮ್ಯಾಚ್‌ ನೋಡ್ತಾ ಈ ಬ್ರಾಂಡ್ ಸವಿಯಿರಿ. ಪೇರಳೆ, ಹನಿಸಕಲ್, ವೆನಿಲ್ಲಾ, ಚಾಕೊಲೇಟ್ ಮಿಠಾಯಿ, ಮತ್ತು ಕಿತ್ತಳೆ ಶೆರ್ಬರ್ಟ್‌ನ ಪ್ಲೇವರ್‌ ಅನ್ನು ಒಳಗೊಂಡಿರುವ ವಿಶಿಷ್ಟವಾದ ಸುವಾಸನೆಯ ಪ್ರೊಫೈಲ್ ಈ ವಿಸ್ಕಿಯನ್ನು ನಿಮ್ಮ ಹೋಮ್ ಬಾರ್‌ನಲ್ಲಿ ಹೊಂದಿರುವಷ್ಟು ಸೊಗಸಾಗಿದೆ. ಇದರ ಬೆಲೆ 4,230 ರೂ. 

ಅನೇಕ ಪ್ರಶಸ್ತಿ ಗೆದ್ದಿರುವ ಭಾರತೀಯ ಸಿಂಗಲ್-ಮಾಲ್ಟ್  ವಿಸ್ಕಿ ಇಂದ್ರಿ-ಟ್ರಿನಿ. ಕ್ರೀಮಿ ಟೆಕ್ಷ್ಜರ್‌, ಡ್ರೈ ಫ್ರೂಟ್‌ ಸುಟ್ಟ ಬೀಜಗಳು, ಸೂಕ್ಷ್ಮ ಮಸಾಲೆಗಳು, ಓಕ್ ಮತ್ತು ಬಿಟರ್‌ಸ್ವೀಟ್ ಚಾಕೊಲೇಟ್ ಗಳಿಂದ ಮಾಡಲ್ಪಟ್ಟಿದೆ. ಇದರ ಬೆಲೆ 3,940 ರೂ. 

ಕಿಂಗ್‌ಫಿಶರ್ ಪ್ರೀಮಿಯಂ ಹೆಚ್ಚಾಗಿ ಸೆಲೆಬ್ರೆಷನ್‌ಗಳಿಗೆ ಮಾರಾಟವಾಗುವ ಬಿಯರ್ ಆಗಿದೆ. ಬಜೆಟ್-ಸ್ನೇಹಿ ಬಿಯರ್ ಕಹಿ ಮತ್ತು ಹೂವಿನ ಸುವಾಸನೆಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ಸೈಡ್ಸ್ ಇದ್ದರೆ ಇದಂತೂ ಸೂಪರ್‌ ರುಚಿ. ಇದರ ಬೆಲೆ 120 (650 ml)

ಕ್ಯಾಲ್ಡೆರಾ  ಕೊಲ್ಕತ್ತಾದಲ್ಲಿ ತಯಾರಾಗುವ ಕ್ರಾಫ್ಟ್ ಬಿಯರ್. ತನ್ನ ರುಚಿಯಿಂದ ರಾಜ್ಯದಾದ್ಯಂತ ಹಲವು ಮನಸ್ಸುಗಳ ಹೃದಯ ಗೆದ್ದಿದೆ. ಇದರ ಬೆಲೆ 165 ರೂ (300 ml).

ಕೊರೊನಾ ಇದು  ಜನಪ್ರಿಯ ಮೆಕ್ಸಿಕನ್ ಬಿಯರ್. ಇದರಲ್ಲಿ ಆಲ್ಕೋಹಾಲ್ ಬೈ ವಾಲ್ಯೂಮ್ (ಎಬಿವಿ) ಶೇಕಡಾ 4.5 ರಷ್ಟಿದೆ. ಜೇನುತುಪ್ಪದ ಪರಿಮಳ ಎಣ್ಣೆ ಪ್ರಿಯರನ್ನು ಸೆಳೆಯುತ್ತದೆ. ಇದ ಜತೆಗೆ 1 ತುಂಡು ನಿಂಬೆ ಇದ್ದರೆ ಅದ್ಭೂತ! ಇದರ ಬೆಲೆ 195 ರೂ (330 ml)

ಇದು ಗರಿಗರಿಯಾದ ಸುವಾಸನೆಯ ಬಿಯರ್  ಹಣ್ಣಿನ ರುಚಿ, ಸೂಕ್ಷ್ಮವಾದ ಮಾಲ್ಟ್ ಮಾಧುರ್ಯದೊಂದಿಗೆ, ಬಡ್ವೈಸರ್ ಅತ್ಯುತ್ತಮ ರುಚಿ ನೀಡುತ್ತದೆ. ಇದರ ಬೆಲೆ 120 ರೂ (500 ml)

ಬಿರಾ 91 ವೈಟ್ ತುಂಬಾ ರುಚಿಕರವಾಗಿದೆ.  4.7 ರಷ್ಟು ABV ಯೊಂದಿಗೆ, ಇದು ಹಣ್ಣು ಮತ್ತು  ಗೋಧಿಯಿಂದ ಮಾಡಲ್ಪಟ್ಟ ಬಿಯರ್ . ನಿಮ್ಮ ಉತ್ತಮ ಒಡನಾಡಿಯಾಗಿ ಎನಿಸುವುದರಲ್ಲಿ ತಪ್ಪಿಲ್ಲ. ಇದರ ಬೆಲೆ 165  (500 ml).

Latest Videos

click me!