ಕೇಂದ್ರ ಬಜೆಟ್ 75 ವರ್ಷದ ಸಂಪ್ರದಾಯಕ್ಕೆ ಬ್ರೇಕ್, ಇದೇ ಮೊದಲ ಬಾರಿ ಪಾರ್ಟ್ Bಗೆ ಒತ್ತು ನೀಡಲಾಗುತ್ತಿದೆ. ನಿರ್ಮಲಾ ಸೀತಾರಾಮನ್ ಈ ಬಾರಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಏನಿದು ಬಜೆಟ್ ಪಾರ್ಟಿ ಬಿ
ಕೇಂದ್ರ ಬಜೆಟ್ 2026 ಫೆಬ್ರವರಿ 1 (ಭಾನುವಾರ) ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ಹಳೇ ಸಂಪ್ರದಾಯ ಮುರಿದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಮಂಡಿಸಿದ ಬಜೆಟ್‌ಗಳಲ್ಲಿ ಇದು ಅತ್ಯಂತ ವಿಶೇಷ ಹಾಗೂ ಭಿನ್ನ ಬಜೆಟ್ ಆಗಲಿದೆ.
26
ಈ ಬಾರಿ ಭಿನ್ನತೆ ಏನು?
ಈ ಹಿಂದಿನ ಎಲ್ಲಾ ಬಜೆಟ್ ಮಂಡನೆಗಿಂತ ಈ ಬಾರಿ ವಿಶೇಷ. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಬದಲು ಪಾರ್ಟಿ ಬಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಕಳೆದ 75 ವರ್ಷಗಳಿಂದ ಎಲ್ಲಾ ಹಣಕಾಸು ಸಚಿವರು ಸಂಪ್ರದಾಯದ ಪ್ರಕಾರ ಪಾರ್ಟ್ ಎ ಪ್ರತಿಯನ್ನು ಓದುತ್ತಿದ್ದರು. ಆದರೆ ಈ ಬಾರಿ ಭಿನ್ನ.
36
ಏನಿದು ಪಾರ್ಟ್ ಎ ಹಾಗೂ ಪಾರ್ಟಿ ಬಿ?
ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಹಾಗೂ ಪಾರ್ಟಿ ಬಿ ಎಂದು ಎರಡು ವಿಭಾಗಗಳಿವೆ. ಪಾರ್ಟ್ ಎ ಭಾಗದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಯೋಜನೆಗಳು, ಅನುದಾನಗಳು, ನೀತಿ ಸೇರಿದಂತೆ ಹಲವು ಘೋಷಣೆಗಳು ಇರುತ್ತದೆ. ಪಾರ್ಟ್ ಬಿ ಬಜೆಟ್ ಪ್ರತಿಯಲ್ಲಿ ತೆರಿಗೆ ಪ್ರಸ್ತಾವನೆ ಸೇರಿದಂತೆ ಕೆಲ ಘೋಷಣೆಗಳಿಗೆ ಸೀಮಿತವಾಗಿರುತ್ತದೆ. ಈ ಬಾರಿ ನಿರ್ಮಾಲಾ ಸೀತಾರಾಮನ್ ಪಾರ್ಟಿ ಬಿ ಮೇಲೆ ಒತ್ತು ನೀಡಲಿದ್ದಾರೆ ಎಂದು ವರದಿಯಾಗಿದೆ.
ಅಂಕಿ ಅಂಶಗಳು ಘೋಷಣೆಗಳ ಬದಲು ಭವಿಷ್ಯದ ನೀತಿ, ಯೋಜನೆ, ತೆರಿಗೆ ಸರಳೀಕರಣ,ತೆರಿಗೆ ಪದ್ಧತಿ ಸುಧಾರಣೆ, ರಫ್ತು ಸೇರಿದಂತೆ ಪ್ರಮುಖ ಮಾಹಿತಿಗಳು ಇರಲಿದೆ. ದೇಶದ ಮುಂದಿರುವ ಆರ್ಥಿಕ ಸವಾಲು, ಮುಂದಿನ 25 ವರ್ಷಗಳ ಆರ್ಥಿಕ ದೃಷ್ಟಿಕೋನ ಹಾಗೂ ಯೋಜನೆ, ಆರ್ಥಿಕ ಶಿಸ್ತು, ಸಮತೋಲನ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಪಾರ್ಟ್ ಬಿ ಗಮನಹರಿಸಲಿದೆ.
56
ಪಾರ್ಟ್ ಬಿ ಸಂಕ್ಷಿಪ್ತ
ಈ ಹಿಂದಿನ ಎಲ್ಲಾ ಬಜೆಟ್‌ಗಳಲ್ಲಿ ಪಾರ್ಟ್ ಎ ಭಾಷಣ ಮಾಡುತ್ತಿದ್ದರು. ಹೀಗಾಗಿ ಸುದೀರ್ಘ ಭಾಷಣವಾಗುತ್ತಿತ್ತು. ಆದರೆ ಪಾರ್ಟಿ ಬಿಯನ್ನು ಸಂಕ್ಷಿಪ್ತವಾಗಿ ಹೇಳಿ ಭಾಷಣ ಮುಗಿಸುತ್ತಿದ್ದರು. ಆದರೆ ಈ ಬಾರಿ ಪಾರ್ಟ್ ಬಿ ಭಾಷಣವನ್ನು ವಿವರವಾಗಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
66
ಮೊದಲ ಬಾರಿಗ ಭಾನುವಾರ ಬಜೆಟ್
ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ. ಸತತ 9ನೇ ಬಾರಿಗೆ ಬಜೆಟ್ ಮಂಡನೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಮೈಲಿಗಲ್ಲು ನಿರ್ಮಿಸುತ್ತಿದ್ದಾರೆ. ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯೂ ಪೇಪರ್‌ಲೆಸ್ ಬಜೆಟ್ ಮಂಡನೆಯಾಗಲಿದೆ.
ಮೊದಲ ಬಾರಿಗ ಭಾನುವಾರ ಬಜೆಟ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.