ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಕಠಿಣ ಸ್ಪರ್ಧೆ ನೀಡುತ್ತಿದೆ. ತನ್ನ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.
ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಅಗ್ಗದ ರೀಚಾರ್ಜ್ ಪ್ಲಾನ್‌ಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ, ಬಿಎಸ್‌ಎನ್‌ಎಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ ನೀಡುತ್ತದೆ. ಬಿಎಸ್‌ಎನ್‌ಎಲ್ ರೂ. 300ರೊಳಗೆ ಅನಿಯಮಿತ ಕರೆ ಮತ್ತು ಡೇಟಾ ನೀಡುವ ಪ್ಲಾನ್‌ಗಳನ್ನು ತಂದಿದೆ. ಈ ಪ್ಲಾನ್‌ಗಳ ಬಗ್ಗೆ ವಿವರವಾಗಿ ನೋಡೋಣ.
26
ಬಿಎಸ್‌ಎನ್‌ಎಲ್ ರೂ. 215 ರೀಚಾರ್ಜ್ ಪ್ಲಾನ್
ಬಿಎಸ್‌ಎನ್‌ಎಲ್‌ನ 215 ರೂ. ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಅನಿಯಮಿತ ಕರೆ, ದಿನಕ್ಕೆ 2GB ಡೇಟಾ ಮತ್ತು ದಿನಕ್ಕೆ 100 ಉಚಿತ SMS ಸಿಗುತ್ತದೆ. ಜೊತೆಗೆ ಹಾರ್ಡಿ ಗೇಮ್ಸ್, ಜಿಂಗ್ ಮ್ಯೂಸಿಕ್, ಬಿಎಸ್‌ಎನ್‌ಎಲ್ ಟ್ಯೂನ್ಸ್‌ನಂತಹ ಉಚಿತ ಪ್ರಯೋಜನಗಳೂ ಲಭ್ಯ.
36
ಬಿಎಸ್‌ಎನ್‌ಎಲ್ ರೂ. 228 ರೀಚಾರ್ಜ್ ಪ್ಲಾನ್
ಬಿಎಸ್‌ಎನ್‌ಎಲ್‌ನ 228 ರೂ. ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿ ನೀಡುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಹಾಗೂ ದಿನಕ್ಕೆ 100 ಉಚಿತ ಎಸ್‌ಎಂಎಸ್‌ಗಳು ಲಭ್ಯವಿವೆ.
ಬಿಎಸ್‌ಎನ್‌ಎಲ್‌ನ 239 ರೂ. ಪ್ಲಾನ್ 1 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ನಿಮಗೆ ದಿನಕ್ಕೆ 2GB ಡೇಟಾ, 100 ಉಚಿತ ಎಸ್‌ಎಂಎಸ್‌ಗಳು ಮತ್ತು ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ.
56
ಬಿಎಸ್‌ಎನ್‌ಎಲ್ ರೂ. 269 ರೀಚಾರ್ಜ್ ಪ್ಲಾನ್
ಬಿಎಸ್‌ಎನ್‌ಎಲ್‌ನ 269 ರೂ. ಪ್ಲಾನ್ ದಿನಕ್ಕೆ 2GB ಡೇಟಾ ನೀಡುತ್ತದೆ. ಇದು 30 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 100 ಉಚಿತ SMS ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಜೊತೆಗೆ ಎರೋಸ್ ನೌ, ಜಿಂಗ್‌ನಂತಹ ಚಂದಾದಾರಿಕೆಗಳು ಲಭ್ಯ.
66
ಬಿಎಸ್‌ಎನ್‌ಎಲ್ vs ಜಿಯೋ, ಏರ್‌ಟೆಲ್
ಈ ಎಲ್ಲಾ ಪ್ಲಾನ್‌ಗಳು 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನಿಯಮಿತ ಕರೆ ಮತ್ತು ಡೇಟಾ ನೀಡುತ್ತವೆ. ಆದರೆ ಏರ್‌ಟೆಲ್, ವೊಡಾಫೋನ್, ಜಿಯೋ ಪ್ಲಾನ್‌ಗಳು ಇದೇ ರೀತಿಯ ಪ್ರಯೋಜನಗಳಿಗೆ ಹೆಚ್ಚು ದುಬಾರಿಯಾಗಿವೆ. ಈ ಪ್ಲಾನ್‌ಗಳು ಬಿಎಸ್‌ಎನ್‌ಎಲ್‌ಗಿಂತ ದುಬಾರಿಯಾಗಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.