ಚಿನ್ನ-ಬೆಳ್ಳಿ ದರದಲ್ಲಿ ಅನಿರೀಕ್ಷಿತ ಕುಸಿತ: ಒಂದು ವಾರದಲ್ಲಿ ಕಡಿಮೆಯಾಗಿದೆಷ್ಟು? ಇವತ್ತು ಇಳಿಕೆ

Published : May 30, 2026, 12:08 PM IST

ಈ ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 24 ಮತ್ತು 22 ಕ್ಯಾರಟ್ ಚಿನ್ನದ ಇಂದಿನ ದರ, ಎಷ್ಟು ಇಳಿಕೆಯಾಗಿದೆ ಹಾಗೂ ಜಾಗತಿಕ ಮಾರುಕಟ್ಟೆಯ ಪ್ರಭಾವದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

PREV
17
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ

ಈ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ದರ ಕ್ರಮವಾಗಿ ಎಷ್ಟು ಇಳಿಕೆಯಾಗಿದೆ ಮತ್ತು ಇಂದಿನ ಬೆಲೆಯ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಇಂಡಿಯಾ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ ಅಂಕಿ ಅಂಶಗಳ ಪ್ರಕಾರ, ಬೆಲೆಗಳಲ್ಲಿ ಇಳಿಕೆಯಾಗಿದೆ.

27
ಒಂದು ವಾರದಲ್ಲಿ ಎಷ್ಟು ಇಳಿಕೆ?

ಈ ವಾರ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿ 1,56,463 ರೂ.ಗಳಿಗೆ ತಲುಪಿದೆ. ಈ ಹಿಂದಿನ ವಾರದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,58,720 ರೂ.ಗಳಷ್ಟಿತ್ತು. ಒಂದು ವಾರದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 1 ಸಾವಿರ ರೂ.ವರೆಗೆ ಇಳಿಕೆಯಾಗಿದೆ.

37
ಬೆಳ್ಳಿ ಬೆಲೆ

ಇನ್ನು ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ ₹2,650 ರಷ್ಟು ಕುಸಿದು ₹2,63,350 ಕ್ಕೆ ತಲುಪಿದೆ. ಈ ಹಿಂದೆ ಪ್ರತಿ ಕೆಜಿಗೆ ₹2,66,000 ರಷ್ಟು ಇತ್ತು. ಈ ವಾರ ಮೇ 27ರಂದು 1 ಕೆಜಿ ಬೆಳ್ಳಿ ಬೆಲೆ ₹2,60,917 ಕನಿಷ್ಠ ಬೆಲೆಯಾಗಿತ್ತು. ಮೇ 25 ರಂದು ಗರಿಷ್ಠ ಬೆಲೆ ಕೆಜಿಗೆ ₹2,71,100 ಆಗಿತ್ತು. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತಗೊಂಡಿದೆ.

47
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 15,704 ರೂಪಾಯಿ

8 ಗ್ರಾಂ: 1,25,632 ರೂಪಾಯಿ

10 ಗ್ರಾಂ: 1,57,040 ರೂಪಾಯಿ

100 ಗ್ರಾಂ: 15,70,400 ರೂಪಾಯಿ

57
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 14,395 ರೂಪಾಯಿ

8 ಗ್ರಾಂ: 1,15,160 ರೂಪಾಯಿ

10 ಗ್ರಾಂ: 1,43,950 ರೂಪಾಯಿ

100 ಗ್ರಾಂ: 14,39,500 ರೂಪಾಯಿ

67
ಎಷ್ಟು ದರ ಇಳಿಕೆ?

ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 5,500 ರೂಪಾಯಿ ಮತ್ತು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಕಡಿಮೆಯಾಗಿ 1,43,950 ರೂಪಾಯಿ ಆಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲಿಂದು ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

77
ಜಾಗತೀಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 4,600 ಡಾಲರ್‌ ಮತ್ತು ಬೆಳ್ಳಿಯ ಬೆಲೆ ಔನ್ಸ್‌ಗೆ 76 ಡಾಲರ್‌ಗೆ ಇಳಿದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಹಣದುಬ್ಬರ ಮತ್ತು ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿರೋದರಿಂದ ಚಿನ್ನ ಮತ್ತು ಬೆಳ್ಳಿ ದರ ಕುಸಿತವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಡಾಲರ್ ಲೆಕ್ಕದಲ್ಲಿ ಚಿನ್ನ 37% ಕ್ಕಿಂತ ಹೆಚ್ಚು ಮತ್ತು ಬೆಳ್ಳಿ 127% ಕ್ಕಿಂತ ಹೆಚ್ಚು ಆದಾಯವನ್ನು ನೀಡಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories