ಹಣ ಗಳಿಸಲು ಟ್ವಿಟರ್‌ನಿಂದ ಸುವರ್ಣಾವಕಾಶ, ಹೊಸ ಫೀಚರ್‌!

First Published May 8, 2021, 4:24 PM IST

ಯಾವುದೇ ವಿಚಾರವಿರಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವ ವೇದಿಕೆಯೇ ಟ್ವಿಟರ್. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಈ ಆಪ್‌ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಹೀಗಿರುವಾಗಲೇ ಸದ್ಯ ಟಟ್ವಿಟರ್‌ ಮತ್ತೊಂದು ಫೀಚರ್ ಪರಿಚಯಿಸಿದದೆ. ಆದರೀಗ ಈ ಫೀಚರ್ ಕೆಲ ಸೀಮಿತ ಜನರಿಗಷ್ಟೇ ಲಭ್ಯವಿದೆ. 

ಲಭ್ಯವಾದ ಮಾಹಿತಿ ಅನ್ವಯ ಈ ಫೀಚರ್ ಟ್ವಿಟರ್‌ ಬಳಕೆದಾರರಿಗೆ ಹಣ ಗಳಿಸಲು ಅವಕಾಶ ನೀಡುತ್ತದೆ ಎನ್ನಲಾಗಿದೆ. ಈ ಮೂಲಕ ನೀವು ನಿಮಗಿಷ್ಟವಾಗುವ ಕಂಟೆಂಟ್‌ ನೀಡುವ ಅಕೌಂಟ್‌ಗಳಿಗೆ ಟಿಪ್‌ ನೀಡಬಹುದಾಗಿದೆ. ಈ ಫೀಚರ್‌ ಸೆಟ್‌ಅಪ್‌ ಮಾಡಿದ ಬಳಿಕ ಟ್ವಿಟರ್‌ ಹ್ಯಾಂಡಲ್‌ನ ಫಾಲೋ ಬಟನ್ ಬದಿಯಲ್ಲಿ ಹಣದ ಐಕಾನ್ ಕಾಣಲಿದೆ.
undefined
ಇದರ ಉದ್ದೇಶವೇನು?: ಟ್ವಿಟರ್‌ ಅನ್ವಯ ಇದು ಪರಸ್ಪರ ಹಣ ಕಳುಹಿಡಸುವ ಹಾಗೂ ಗಳಿಸುವ ಸುಲಭ ಉಪಾಯ ಎನ್ನಲಾಗಿದೆ. ಇದರಲ್ಲಿ ಅಂದರೆ Tip Jar ನಲ್ಲಿ Bandcamp, Pateron, Paypal, Venmo ಹಾಗೂ Cash App ಕೂಡಾ ಸಪೋರ್ಟ್‌ ಇರಲಿದೆ. ಅಂದರೆ ಈ ಫೀಚರ್ ಬಳಸುವ ಮುನ್ನ ಈ ಪ್ಲಾಟ್‌ಫಾರಂನಲ್ಲಿ ನಿಮ್ಮ ಖಾತೆ ಇದೆಯಾ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಹೀಗಿದ್ದರಷ್ಟೇ ಹಣ ಪಡೆಯಲು ಸಾಧ್ಯ.
undefined
ಟ್ವಿಟರ್‌ನಲ್ಲಿ ಗಳಿಸುವ ಹಣದಲ್ಲಿ ಕಂಪನಿ ಪಾಲು ಇರುವುದಿಲ್ಲ: ಈ ಟಿಪ್‌ ಜಾರ್‌ ಮೂಲಕ ಪರಸ್ಪರ ಕಳುಹಿಸಲಾಗುವ ಹಣದಲ್ಲಿ ಕಂಪನಿ ಪಾಲು ಇರುವುದಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.
undefined
ಟಿಪ್‌ ಜಾರ್ ಆರಮಂಭಿಸಿದ್ದೇಕೆ?: ಈ ಪ್ಲಾಟ್‌ಫಾರಂ ಮೂಲಕ ಜನರು ಮಾತನಾಡುತ್ತಾರೆ. ಹೀಗಾಗೇ ಪರಸ್ಪರ ಸಪೋರ್ಟ್‌ ಮಾಡಲು ರೀಟ್ವೀಟ್, ಶೇರ್ ಹಾಗೂ ಲೈಕ್ಸ್‌ ಕೂಡಾ ಹೆಚ್ಚಿಸುವುದು ಕಂಪನಿ ಉದ್ದೇಶ. ಹೀಗಾಗೇ ಟಿಪ್‌ ಜಾರ್ ಪರಿಚಯಿಸಲಾಗಿದೆ. ಟ್ವಿಟರ್‌ ಒಳಗೆ ಹಣ ನೀಡಿ ಸಪೋರ್ಟ್‌ ಮಾಡುವ ಹಾದಿಯಲ್ಲಿ ಇದು ಮೊದಲ ಪ್ರಯತ್ನ ಎಂದಿದೆ ಟ್ವಿಟರ್.
undefined
ಟಿಪ್‌ ಜಾರ್ ಆರಮಂಭಿಸಿದ್ದೇಕೆ?: ಈ ಪ್ಲಾಟ್‌ಫಾರಂ ಮೂಲಕ ಜನರು ಮಾತನಾಡುತ್ತಾರೆ. ಹೀಗಾಗೇ ಪರಸ್ಪರ ಸಪೋರ್ಟ್‌ ಮಾಡಲು ರೀಟ್ವೀಟ್, ಶೇರ್ ಹಾಗೂ ಲೈಕ್ಸ್‌ ಕೂಡಾ ಹೆಚ್ಚಿಸುವುದು ಕಂಪನಿ ಉದ್ದೇಶ. ಹೀಗಾಗೇ ಟಿಪ್‌ ಜಾರ್ ಪರಿಚಯಿಸಲಾಗಿದೆ. ಟ್ವಿಟರ್‌ ಒಳಗೆ ಹಣ ನೀಡಿ ಸಪೋರ್ಟ್‌ ಮಾಡುವ ಹಾದಿಯಲ್ಲಿ ಇದು ಮೊದಲ ಪ್ರಯತ್ನ ಎಂದಿದೆ ಟ್ವಿಟರ್.
undefined
ಸೆಟ್‌ಅಪ್‌ ಮಾಡಲು ಏನು ಮಾಡಬೇಕು?ಟಿಪ್‌ ಜಾರ್‌ ಸೆಟಪ್‌ ಮಾಡಲು ಮೊದಲು ಎಡಿಟ್ ಪ್ರೊಫೈಲ್‌ಗೆ ಹೋಗಬೇಕು. ಇಲ್ಲಿ ಎಲ್ಲಕ್ಕಿಂತ ಕೆಳಗಿನ ಆಯ್ಕೆ ಟಿಪ್‌ ಜಾರ್‌ ಆಗಿರುತ್ತದೆ. ಇದಾದ ಬಳಿಕ ಇದನ್ನು ಆಕ್ಟಿವೇಟ್‌ ಮಾಡಿ, ಪೇಮೆಂಟ್‌ ಹೇಗೆ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಾದ ಬಳಿಕ ಟಿಪ್‌ ಜಾರ್‌ ತಯಾರಾಗುತ್ತದೆ. ಇದು ಆಕ್ಟಿವೇಟ್ ಆದ ಬಳಿಕ ನಿಮ್ಮ ಅಕೌಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
undefined
click me!