ಅತ್ತ ಜನತಾ ಕರ್ಫ್ಯೂ, ಇತ್ತ ಚಿನ್ನದ ದರದಲ್ಲಿ ಭರ್ಜರಿ ಇಳಿಕೆ!

First Published Apr 28, 2021, 3:49 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 28ರ ಗೋಲ್ಡ್ ರೇಟ್
 

ದೇಶ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಹೀಗಿರುವಾಗ ಈ ಮಹಾಮಾರಿಯನ್ನು ಕಟ್ಟಿ ಹಾಕಲು ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿವೆ.
undefined
ಹೀಗಿದ್ದರೂ ದಾಖಲಾಗುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಅಷ್ಟೇನೂ ಇಳಿಕೆಯಾಗಿಲ್ಲ. ಇದು ಸರ್ಕಾರಕ್ಕೆ ಬಹುದೊಡ್ಡ ಚಿಂತೆಯ ವಿಚಾರವಾಗಿದೆ.
undefined
ಇನ್ನು ಕರ್ನಾಟಕದಲ್ಲಿಯೂ ಏರುತ್ತಿರುವ ಕೊರೋನಾ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿದೆ.
undefined
ಸರ್ಕಾರದ ಕ್ರಮದಿಂದ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
undefined
ಆದರೆ ಈ ಜನತಾ ಕರ್ಫ್ಯೂ ಮಧ್ಯೆಯೂ ಚಿನ್ನದ ದರ ದಾಖಲೆಯ ಇಳಿಕೆ ಕಂಡಿದೆ ಎಂಬುವುದು ಉಲ್ಲೇಖನೀಯ.
undefined
ಹೌದು ಮೊದಲನೇ ಅಲೆ ದಾಳಿ ಇಟ್ಟ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಹೀಗಿರುವಾಗ ಏರಿಕೆ ಹಾದಿ ಹಿಡಿದಿದ್ದ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
undefined
ಇದೇ ರೀತಿ ಎರಡನೇ ಅಲೆ ದಾಳಿ ಇಟ್ಟು ಆರಂಭದಲ್ಲಿ ಚಿನ್ನದ ದರೆ ಕೊಂಚ ಏರಿಕೆ ಕಂಡಿತ್ತಾದರೂ, ಸದ್ಯ ನಾಲ್ಕೈದು ದಿನಗಳಿಂದ ಇಳಿಕೆ ಹಾದಿ ಹಿಡಿದಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 300 ರೂ. ಇಳಿಕೆಯಾಗಿ ದರ 44,150 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 300ರೂ. ಇಳಿಕೆಯಾಗಿ 48,160ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 67,800ರೂ ಆಗಿದೆ.
undefined
ಸದ್ಯ ಮೊದಲ ಅಲೆಗಿಂತಲೂ ಗಂಭೀರ ಸ್ಥಿತಿ ನಿರ್ಮಾಣ ಮಾಡಿರುವ ಎರಡನೇ ಅಲೆ ಜನರ ಜೀವ ಹಿಂಡುತ್ತಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಹದಗೆಡುವ ಸಂಶಯ ವ್ಯಕ್ತವಾಗಿದೆ. ಹೀಗಿರುವಾಗ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂಬುವುದು ತಜ್ಞರ ಅಭಿಪ್ರಾಯ.
undefined
click me!