ಭಾರತದಲ್ಲಿ ಚುನಾವಣೆ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಅವಿನಾಭಾವ ಸಂಬಂಧವಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬೆಲೆ ಏರಿಕೆಗೆ ಬ್ರೇಕ್ ಬೀಳಲಿದ್ದು, ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಬೆಲೆ ಏರಿಕೆ ಮುಂದುವರಿಯಲಿದೆ. ಹಲವು ದಶಕಗಳ ಈ ಸಂಪ್ರದಾಯ ಈಗಲೂ ಮುಂದುವರಿದಿದೆ.
undefined
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮೇ.02ರಂದು ಹೊರಬಿದ್ದಿದೆ. ಸೋಲು-ಗೆಲುವು ನಿರ್ಧಾರಗೊಡ ಬಳಿಕ ಇದೀಗ ಸತತ 3ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಹಾಗೂ ಡೀಸೆಲ್ ಬೆಲೆ 30 ಪೈಸೆ ಏರಿಕೆಯಾಗಿದೆ.
undefined
ಬೆಂಗಳೂರಿನಲ್ಲಿ ಪೆಟ್ರೋಲ್ ದರ 94.01 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ 86.31 ರೂಪಾಯಿ ಪ್ರತಿ ಲೀಟರ್‌ಗೆ ಆಗಿದೆ. ಮೊದಲೇ ದುಬಾರಿಯಾಗಿದ್ದ ಇಂಧನ ಇದೀಗ ಮತ್ತಷ್ಟು ಏರಿಕೆಯಾಗಿದೆ.
undefined
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಅನ್ನೋ ಉತ್ತರ ಸಾಮಾನ್ಯವಾಗಿದೆ. ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಕಾರಣವಾಗಲಿದೆ. ಆದರೆ ಈ ಎಲ್ಲಾ ಅಂಶಗಳು ಭಾರತದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿ, ಫಲಿತಾಂಶ ಹೊರಬೀಳುವವರೆಗೂ ಅನ್ವಯವಾಗುವುದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
undefined
ಈ ಹಿಂದಿನ ಸರ್ಕಾರ ಹಾಗೂ ಪ್ರಸಕ್ತ ಸರ್ಕಾರಗಳು ಚುನಾವಣೆ ಹಾಗೂ ಇಂಧನ ಬೆಲೆ ಏರಿಕೆ ಸಂಪ್ರದಾಯ ಚಾಚೂ ತಪ್ಪದೆ ಪಾಲಿಸಿದೆ. ಸದ್ಯ ಕೊರೋನಾ 2ನೇ ಅಲೆಯಿಂದ ತತ್ತರಿಸಿರುವ ಜನರಿಗೆ ಇದೀಗ ಇಂಧನ ಬೆಲೆ ಏರಿಕೆಯೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
undefined
ಹಲವು ರಾಜ್ಯಗಳು ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ಕಠಿಣ ನಿಯಮಗಳು ಜಾರಿಗೆ ತಂದಿದೆ. ಹೀಗಾಗಿ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗಿರುವ ಕಾರಣ ಬೆಲೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಇಂಧನ ದರ ಏರಿಕೆ ಕೂಡ ಅಗತ್ಯ ವಸ್ತುಗಳ ದರದ ಮೇಲೆ ಪರಿಣಾಮ ಬೀರಲಿದೆ.
undefined