ಪ್ರಪಂಚದ ಅತ್ಯಂತ ಕಡಿಮೆ ಮೌಲ್ಯದ ಕರೆನ್ಸಿಗಳು: ಈ ದೇಶದಲ್ಲಿ ನಿಮಗೆ 1 ರೂಪಾಯಿಗೆ 5 ಲೀಟರ್ ಪೆಟ್ರೋಲ್ ಸಿಗುತ್ತೆ!

First Published | Aug 21, 2024, 1:01 PM IST

2024ರಲ್ಲಿ ಕಡಿಮೆ ಮೌಲ್ಯ ಹೊಂದಿರುವ ಕರೆನ್ಸಿಗಳನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಆ ದೇಶದ ಕರೆನ್ಸಿ ಯಾವುದು ಮತ್ತು ಅವುಗಳ ಮೌಲ್ಯ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಟಾಪ್ 10

10ನೇ ಸ್ಥಾನದಲ್ಲಿ ಉಂಗಾಂಡದ ಶಿಲ್ಲಿಂಗ್ ಕರೆನ್ಸಿ ಇದೆ. ಇದನ್ನು UFGX  ಎಂದು ಕರೆಯಲಾಗುತ್ತದೆ. ಉಂಗಾಂಡದ ಕರೆನ್ಸಿ (Ugandan Shilling) ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. ಈ ದೇಶ ಅನೇಕ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.  44.2 ಯುಜಿಕ್ಸ್ ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ)

ಟಾಪ್ 9

ಟಾಪ್ 9ನೇ ಸ್ಥಾನದಲ್ಲಿ ಕಾಂಬೋಡಿಯನ್ ದೇಶದ ರಿಯಲ್ ಕರೆನ್ಸಿ (Cambodian Riel) (KHR) ಇದಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಕಾಂಬೋಡಿಯನ್ ದೇಶದ 49 ಕೆಹೆಚ್‌ಆರ್, ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ)

Tap to resize

ಟಾಪ್ 8

ಟಾಪ್ 8ನೇ ಸ್ಥಾನದಲ್ಲಿ ಪರಾಗ್ವೆ ಗೌರಾನಿ (Paguayan Guarani) ಇದೆ. ಈ ದೇಶದ ಕರೆನ್ಸಿ ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ.  ಭಾರತದ 1 ರೂಪಾಯಿಗೆ 90 PYG ಗೆ ಸಮವಾಗಿದೆ. ಈ ದೇಶದ ಅರ್ಥ ವ್ಯವಸ್ಥೆ ಯಾವಾಗಲೂ ಅಸ್ಥಿರತೆಯಿಂದಲೇ ಕೂಡಿರುತ್ತದೆ. (ಸಾಂದರ್ಭಿಕ ಚಿತ್ರ)

ಟಾಪ್ 7

ಗಿನಿಯಾ ದೇಶದ ಫ್ರಾಂಕ್ ಕರೆನ್ಸಿ (Guinean Franc) (GNF) ಏಳನೇ ಸ್ಥಾನದಲ್ಲಿದೆ ಯುಎಸ್ ಡಾಲರ್ ಎದುರು ಗಿನಿಯಾ ಕರೆನ್ಸಿ ಅತ್ಯಂತ ಕೆಳಮಟ್ಟದಲ್ಲಿದೆ. ಭಾರತದ 1 ರೂಪಾಯಿಗೆ ಗಿನಿಯಾ ದೇಶದ 102.9 GNFಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ)

ಟಾಪ್ 6

ಉಜ್ಬೇಕಿಸ್ತಾನ್ ದೇಶದ ಕರೆನ್ಸಿ ಆರನೇ ಸ್ಥಾನದಲ್ಲಿದೆ. ಭಾರತದ ಒಂದು ರೂಪಾಯಿಗೆ ಉಜ್ಬೇಕಿಸ್ತಾನ್ Uzbekistani SOM (UZS) ದೇಶದ 150.4 UZS ಸಮವಾಗಿದೆ. ಈ ದೇಶವೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. (ಸಾಂದರ್ಭಿಕ ಚಿತ್ರ)

ಟಾಪ್ 5

ಇಂಡೋನೇಷಿಯಾದ ರುಪೈ ಕೆರೆನ್ಸಿಯ (Indonesian Rupian) (IDR) ಕಡಿಮೆ ಮೌಲ್ಯವನ್ನು ಹೊಂದಿದೆ. ಭಾರತೀಯರು ಹೆಚ್ಚಾಗಿ ಭೇಟಿ ನೀಡುವ ಪ್ರವಾಸಿ ತಾಣ ಇದಾಗಿದೆ. ಇಂಡೋನೇಷಿಯಾದ  193.6 ರುಪೈ ಸೇರಿದ್ರೆ ಭಾರತದ ಒಂದು ರೂಪಾಯಿ ಆಗುತ್ತದೆ. (ಸಾಂದರ್ಭಿಕ ಚಿತ್ರ)

ಟಾಪ್ 4

ನಾಲ್ಕನೇ ಸ್ಥಾನದಲ್ಲಿ ಲಾವೊ ಅಥವಾ ಲಾಟುಯಿಯನ್ ದೇಶದ ಕರೆನ್ಸಿ (Lao OR Laotuian KIP)(LAK) ಇದೆ. ಈ ದೇಶದ  262.7 LAK ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ)

ಟಾಪ್ 3

ಸಿಯೆರಾ ಲಿಯೋನಿಯನ್ ಲಿಯೋನ್ ಕರೆನ್ಸಿ (Sierra Leonean Leone) (SLL) ಮೂರನೇ ಸ್ಥಾನದಲ್ಲಿದೆ. ಈ ದೇಶವೂ ಆರ್ಥಿಕವಾಗಿ ಅತಿ ಹಿಂದುಳಿದೆ. ಈ ದೇಶವು ಹಣದುಬ್ಬರ ಸೆಲೆಯಲ್ಲಿ ಸಿಲುಕಿದೆ. ಭಾರತದ ಒಂದು ರೂಪಾಯಿಗೆ ಇಲ್ಲಿಯ 270 SLLಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ)
 

ಟಾಪ್ 2

ವಿಯೆಟ್ನಾಮೀಸ್ ದೇಶದ ಅತಿ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಈ ದೇಶದ ಡಾಂಗ್ ಕರೆನ್ಸಿ ಮೌಲ್ಯ ತುಂಬಾನೇ ಕಡಿಮೆ ಮೌಲ್ಯ (Vietnameses DONG) (VND) ಹೊಂದಿದೆ. ಭಾರತದ 1 ರೂಪಾಯಿಗೆ 304.7 VND ಆಗಿದೆ. (ಸಾಂದರ್ಭಿಕ ಚಿತ್ರ)
 

ಟಾಪ್ 1


ಕಡಿಮೆ ಮೌಲ್ಯ ಹೊಂದಿರುವ ಕರೆನ್ಸಿಗಳನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಇರಾನ್ ಮೊದಲ ಸ್ಥಾನದಲ್ಲಿದೆ. ಇಲ್ಲಿಯ ಇರಾನಿಯನ್ ರಿಯಾಲ್ (Iranian Rial) (IRR) ಕರೆನ್ಸಿ ಕಡಿಮೆ ಮೌಲ್ಯವನ್ನು ಹೊಂದಿದೆ. ಇಲ್ಲಿಯ 504.4 IRR ಸೇರಿದ್ರೆ ಭಾರತದ 1 ರೂಪಾಯಿಗೆ ಸಮವಾಗುತ್ತದೆ. (ಸಾಂದರ್ಭಿಕ ಚಿತ್ರ)

Latest Videos

click me!