ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಸ್ಟ್ರೀಕಿಂಗ್ ಆ್ಯಪ್‌ಗಳು, ಮೈನರ್ ಡಿಮ್ಯಾಟ್ ಖಾತೆಗಳ ಮೂಲಕ ಹೂಡಿಕೆ, ಮತ್ತು ಫ್ರಾಕ್ಷನಲ್ ಓನರ್‌ಶಿಪ್‌ನಂತಹ ಆಧುನಿಕ ವಿಧಾನಗಳನ್ನು ಬಳಸಬಹುದು. ಫ್ಯಾಮ್ ಪೇ, ಯುಪಿಐ ಸರ್ಕಲ್‌ನಂತಹ ಸಾಧನಗಳು ಸುರಕ್ಷಿತವಾಗಿ ಹಣದ ನಿರ್ವಹಣೆಯನ್ನು ಕಲಿಸಲು ಸಹಾಯ ಮಾಡುತ್ತವೆ.
ಟೀನ್ ಮಕ್ಕಳಿಗೆ ಹಣಕಾಸು ಪಾಠ ಹೇಳಿಕೊಡಲು ಈ ಕಾಲದ ಪೋಷಕರು ಬಳಸುತ್ತಿರುವ ಆ್ಯಪ್ ಇದು. ಮಕ್ಕಳು ಮೊಬೈಲ್‌ನಲ್ಲಿ ಈ ಆ್ಯಪ್ ಮೂಲಕ ಖರ್ಚುಗಳನ್ನು ದಾಖಲಿಸಬಹುದು. ‘ಸ್ಟ್ರೀಕ್ - ಟೀನ್ಸ್ ಬ್ಯಾಂಕಿಂಗ್ ಆ್ಯಪ್’ 8 ರಿಂದ 21 ವರ್ಷದ ಟೀನೇಜರ್‌ಗಳಿಗಾಗಿಯೇ ಇರುವ ಒಂದು ಅಪ್ಲಿಕೇಶನ್. ಇದರಲ್ಲಿ ಮಕ್ಕಳು ನಿತ್ಯ ಫೈನಾನ್ಶಿಯಲ್ ಗುರಿಯನ್ನು ನಮೂದಿಸಬೇಕು.
ಉಳಿತಾಯ ದಾಖಲಿಸಬೇಕು. ಪ್ರತಿಯಾಗಿ ಇದರಲ್ಲಿ ರಿವಾರ್ಡ್‌ಗಳು ಪಾಯಿಂಟ್‌ಗಳು ಸಿಗುತ್ತವೆ. ‘ಜಾರ್ ಆ್ಯಪ್’ ಗೇಮಿಂಗ್ ರೀತಿ ಹುಡುಗರಿಗೆ ಉಳಿತಾಯದ ಪಾಠ ಕಲಿಸುತ್ತದೆ. ಇದರಲ್ಲಿ ನಿತ್ಯ 10 ರು., 20 ರು. ಉಳಿತಾಯ ಮಾಡುತ್ತ ಹೋದರೆ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಸಿಗುತ್ತದೆ.
26
2. ಹೂಡಿಕೆಯ ಪಾಠ
18ಕ್ಕಿಂತ ಕಡಿಮೆ ವಯಸ್ಸಿನವರು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ. ಪೋಷಕರ ಮೂಲಕ ಮೈನರ್ ಡಿಮ್ಯಾಟ್ ಅಕೌಂಟ್ ತೆರೆಯಬಹುದು. ಝೆರೋದಾ, ಗ್ರೋನಂಥಾ ಆ್ಯಪ್‌ಗಳಲ್ಲಿ ದೊಡ್ಡವರ ಪ್ಯಾನ್ ಕಾರ್ಡ್ ಬಳಸಿ ಅಕೌಂಟ್ ಓಪನ್ ಮಾಡಬಹುದು. ಮ್ಯೂಚುಯಲ್ ಫಂಡ್‌ಗಳಲ್ಲಿ ತಿಂಗಳಿಗೆ ರು.100 ಅಥವಾ ರು.500 ರಂತೆ ಮೈನರ್ ಫಂಡ್ ಎಸ್‌ಐಪಿ ಆರಂಭಿಸಬಹುದು. ಗೂಗಲ್, ಆ್ಯಪಲ್‌ನಂತಹ ಕಂಪನಿಗಳ ಷೇರುಗಳಲ್ಲಿ ಮೈನರ್ ಖಾತೆಗಳ ಮೂಲಕ ಹೂಡಿಕೆ ಮಾಡುವ ಅವಕಾಶವಿದೆ
36
3. ಫ್ರಾಕ್ಷನಲ್ ಓನರ್‌ಶಿಪ್
ಆನ್‌ಲೈನ್ ಖರೀದಿಗೆ ಮುಗಿಬೀಳುವವರಿಗೆ, ಅವರು ಖರೀದಿ ಮಾಡುವ ಕಂಪನಿಗಳಲ್ಲೇ ಅವರಿಗೆ ಇನ್‌ವೆಸ್ಟ್ ಮಾಡಲು ಪ್ರೋತ್ಸಾಹಿಸಿದರೆ ಎರಡು ಉಪಯೋಗ. ಒಂದು ಹೂಡಿಕೆ ಸಾಧ್ಯವಾಗುತ್ತದೆ, ಎರಡನೆಯದು ಮಕ್ಕಳು ಜಂಕ್‌ಫುಡ್, ಆನ್‌ಲೈನ್ ಶಾಪಿಂಗ್ ಖಯಾಲಿಗೆ ಬ್ರೇಕ್ ಹಾಕಿ ಅದನ್ನೇ ಇನ್‌ವೆಸ್ಟ್‌ಮೆಂಟ್ ಮಾಡಲು ಬಳಸುವ ಸಾಧ್ಯತೆ ಇದೆ. ಸ್ವಿಗ್ಗಿ, ಜೊಮಾಟೋ, ನೈಕಿ ಮೊದಲಾದ ಕಂಪನಿಗಳ ಷೇರುಗಳನ್ನು ಖರೀದಿಸಿ ಅವರನ್ನು ಫ್ರಾಕ್ಷನಲ್ ಓನರ್‌ಶಿಪ್‌ನಡಿ ಅವರನ್ನು ಕಂಪನಿಯ ಮಾಲೀಕರನ್ನಾಗಿ ಮಾಡಬಹುದು.
ಈ ಕಾಲದ ಟೀನ್ ಹುಡುಗರಿಗೆ ವೀಡಿಯೋ ಎಡಿಟಿಂಗ್, ಕೋಡಿಂಗ್, ಗ್ರಾಫಿಕ್ ಡಿಸೈನ್‌ಗಳಂಥಾ ಕೌಶಲ್ಯಗಳಿರುತ್ತವೆ. ಅವುಗಳನ್ನು ಬಳಸಿ ಸಣ್ಣ ಪುಟ್ಟ ಮೊತ್ತವನ್ನು ಹೇಗೆ ಗಳಿಸಬಹುದು ಅಂತ ಕಲಿಸಬಹುದು. ಅದರಿಂದ ಬರುವ ಹಣ ಇನ್‌ವೆಸ್ಟ್‌ಮೆಂಟ್‌ಗಳಿಗೆ ಹೋಗುವಂತೆ ನಿರ್ವಹಣೆ ಮಾಡಬಹುದು.
56
5. ಹಣಕಾಸಿನ ನಿರ್ವಹಣೆ ಕಲಿಸಿ
ಟೀನ್‌ಗಳಿಗೆಂದೇ ಫ್ಯಾಮ್ ಪೇ ಆ್ಯಪ್ ಇದೆ. ಪೋಷಕರ ಆಧಾರ್ ಅಥವಾ ಪ್ಯಾನ್ ಕಾರ್ಡ್ ಬಳಸಿ ಪೇರೆಂಟ್ ಕೆವೈಸಿ ಪೂರ್ಣಗೊಳಿಸಿದರೆ ಇದರಲ್ಲಿ ಯುಪಿಐ ನಿರ್ವಹಣೆಯನ್ನು ಮಾಡಬಹುದು. ಇದಕ್ಕೆ ಬ್ಯಾಂಕ್ ಅಕೌಂಟ್‌ನ ಅಗತ್ಯವೂ ಇಲ್ಲ. ಪೋಷಕರು ಸಣ್ಣಮೊತ್ತವನ್ನು ಮಕ್ಕಳ ಫೋನ್ ನಂಬರ್‌ಗೆ ಹಾಕಿದರೆ ಅವರು ಅದನ್ನು ಸಾಮಾನ್ಯ ಯುಪಿಐನಂತೆ ಬಳಸಬಹುದು. ಜೂಜು, ಬೆಟ್ಟಿಂಗ್ ಅಥವಾ ವಯಸ್ಕರ ವೆಬ್‌ಸೈಟ್‌ಗಳಲ್ಲಿ ಈ ಕಾರ್ಡ್/ ಯುಪಿಐ ಕೆಲಸ ಮಾಡದಂತೆ ಲಾಕ್ ಮಾಡಲಾಗಿರುತ್ತದೆ. ಹೀಗಾಗಿ ಹೆಚ್ಚು ರಿಸ್ಕ್ ಇರುವುದಿಲ್ಲ.
66
ಯುಪಿಐ ಸರ್ಕಲ್
ಇದರ ಜೊತೆಗೆ ಪೋಷಕರು ತಮ್ಮ ಭೀಮ್, ಗೂಗಲ್ ಪೇ ಅಥವಾ ಫೋನ್ ಪೇ ಆಪ್‌ಗಳಲ್ಲಿ ಯುಪಿಐ ಸರ್ಕಲ್ ಅನ್ನು ಆಯ್ಕೆ ಮಾಡಿ ಮಕ್ಕಳನ್ನು ಸೆಕೆಂಡರಿ ಯೂಸರ್ ಆಗಿ ಸೇರಿಸಬಹುದು. ಇದರಲ್ಲಿ ಪೋಷಕರು ಫೋನ್‌ನಲ್ಲಿ ಅನುಮತಿ ನೀಡಿದರೆ ಮಾತ್ರ ಹಣ ಕಟ್ ಆಗುತ್ತದೆ. ಅಥವಾ ಇಷ್ಟು ಹಣವಷ್ಟೇ ಖರ್ಚು ಮಾಡಬಹುದು ಅಂತ ಲಿಮಿಟ್ ಫಿಕ್ಸ್ ಮಾಡಿದರೆ ಮಕ್ಕಳು ಆ ಲಿಮಿಟ್‌ವರೆಗೆ ಪಾವತಿ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.