ಮನೆಯಲ್ಲಿ ದೆವ್ವವಿದ್ರೆ, ನಮ್ಮನ್ನು ಕರೆಯಿರಿ, ಇವರೇನು ಓಡಿಸ್ತಾರಾ? ಹೊಸ ಬ್ಯುಸಿನೆಸ್ ಟೆಕ್ನಿಕ್ ಇದು!

First Published Feb 22, 2024, 1:24 PM IST

ನೀವು ಬ್ಯುಸಿನೆಸ್ ಮಾಡಲು ಏನೇನು ಮಾಡ್ತಾರೆ ಅನ್ನೋದನ್ನು ನೋಡಿರಬೇಕು, ಆದರೆ ಈಗ ನಾವು ನಿಮಗೆ ಹೇಳಲು ಹೊರಟಿರುವುದು ಸಂಪೂರ್ಣವಾಗಿ ವಿಭಿನ್ನವಾದ ಬ್ಯುಸಿನೆಸ್ ಐಡಿಯಾ. ದೆವ್ವದ ಹೆಸರಲ್ಲಿ ದುಡ್ಡು ಮಾಡಿರೋದು ಹೇಗೆ ನೋಡಿ. 
 

ನೀವು ಅನೇಕ ಬ್ಯುಸಿನೆಸ್ (business) ಮಾಡಿರೋರನ್ನು ನೋಡಿರಬಹುದು, ಅವರ ವ್ಯವಹಾರ ಪ್ರಜ್ಞೆ ತುಂಬಾ ಅದ್ಭುತವಾಗಿದೆ, ಅವರು ಲಾಭ ಗಳಿಸಲು ಏನೇನೋ ಉಪಾಯ ಮಾಡ್ತಾರೆ. ಇದಕ್ಕೆ ಅನುಭವ ಅಥವಾ ವ್ಯವಹಾರದ ಹಿನ್ನೆಲೆ ಬೇಕೆಂದೇನೂ ಇಲ್ಲ. ಹೇಗೆ ಬ್ಯುಸಿನೆಸ್ ಮಾಡೋದು ಎನ್ನುವ ಆಲೋಚನೆಗಳು ನಿಮ್ಮ ಮನಸ್ಸಿಗೆ ಬಂದರೆ, ಹಣವನ್ನು ಸಂಪಾದಿಸಲು (make money) ನೀವು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುವಿರಿ. ಇಂದು ನಾವು ಅಂತಹ ಇಬ್ಬರು ಹುಡುಗರ ಕಥೆಯನ್ನು ನಿಮಗೆ ಹೇಳುತ್ತೇವೆ.
 

ನೀವು ವ್ಯವಹಾರದ ಹಲವು ಐಡಿಯಾಗಳ (business ideas) ಬಗ್ಗೆ ಕೇಳಿರಬಹುದು ಮತ್ತು ನೋಡಿರಬಹುದು, ಆದರೆ ಈಗ ನಾವು ನಿಮಗೆ ಹೇಳಲು ಹೊರಟಿರುವುದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಕೆಲಸವು ಕಷ್ಟಕರವಾಗಿದೆ, ಜೊತೆಗೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿಯೂ ಇದೆ. ಥೈಲ್ಯಾಂಡ್ನ ಚಿಯಾಂಗ್ಮೈ ಪ್ರಾಂತ್ಯದಲ್ಲಿರುವ ರಾಜಮಂಗಲ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಇಬ್ಬರೂ ಹುಡುಗರು, ತಮ್ಮ ಅಧ್ಯಯನದ ಜೊತೆಗೆ ಬ್ಯುಸಿನೆಸ್ ಕೂಡ ಮಾಡಿದ್ದಾರೆ. ಅದೂ ಸಹ ದೆವ್ವಗಳ (support of ghost) ಬಲದಿಂದ.
 

ಮನೆಯಲ್ಲಿ ದೆವ್ವವಿದ್ದರೆ, ನಮಗೆ ಕರೆ ಮಾಡಿ
21 ವರ್ಷದ ವಿಫೇಯಿ ಶೇಂಗ್ ಮತ್ತು 22  ವರ್ಷದ ಶ್ರೇತಾವುತ್ ಬೂನ್ಪ್ರಾಖಾಂಗ್  ದೆವ್ವಗಳ ಉಪಸ್ಥಿತಿಯ ಪ್ರಮಾಣಪತ್ರಗಳನ್ನು ನೀಡುವ ವ್ಯವಹಾರವನ್ನು ಪ್ರಾರಂಭಿಸಿದರು. ಈ ಹುಡುಗರು ಜೊತೆಯಾಗಿ ಸೇರಿ ಬ್ಯುಸಿನೆಸ್ ಮಾಡ್ತಿದ್ದಾರೆ.  ಈ ಬ್ಯುಸಿನೆಸ್ ಪ್ರಕಾರ ಅವರು ಮನೆಗಳಲ್ಲಿ ವಾಸಿಸಲು ಹೋಗುತ್ತಾರೆ ಮತ್ತು ಅದರಲ್ಲಿ ದೆವ್ವವಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸುತ್ತಾರೆ. 

ತಮ್ಮ ಬ್ಯುಸಿನೆಸ್ ಗಾಗಿ ಅವರು ಜಾಹೀರಾತುಗಳನ್ನು (advertisement) ಸಹ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ನಾವು ದೆವ್ವಗಳ ಆತಂಕ ಇರುವ ಮನೆಗಳು ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಮಲಗುತ್ತೇವೆ, ಇಲ್ಲಿ ಉಳಿದುಕೊಂಡ ನಂತರ, ಆ ಮನೆಯಲ್ಲಿ ದೆವ್ವವಿದೆಯೇ ಅಥವಾ ಇಲ್ಲವೇ ಎಂದು ಸರ್ಟಿಫಿಕೇಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅವರ ಈ ಬ್ಯುಸಿನೆಸ್ ಐಡಿಯಾ ತುಂಬಾನೆ ವೈರಲ್ (viral) ಆಗಿದೆ. ಆದರೆ ಇಲ್ಲಿವರೆಗೆ ಅವರಿಗೆ ಒಬ್ಬರೇ ಒಬ್ಬರು ಗ್ರಾಹಕರು ಸಿಕ್ಕಿಲ್ಲ ಅನ್ನೋದು ಬೇರೆ ವಿಷಯ.
 

ಅವರು ಇತರ ಸೇವೆಗಳನ್ನು ಸಹ ಒದಗಿಸುತ್ತಾರೆ ...
ಇಬ್ಬರೂ ಒಟ್ಟಿಗೆ ಸೇವೆಯನ್ನು (service) ಪ್ರಾರಂಭಿಸಿದ್ದಾರೆ ಆದರೆ ಅದರ ದರವನ್ನು ನಿಗದಿಪಡಿಸಿಲ್ಲ. ಹಣವನ್ನು ಚೌಕಾಸಿ ಮಾಡಬಹುದು. ದೆವ್ವದ ಮನೆಗಳಲ್ಲದೆ, ದೆವ್ವಗಳು ಇರುವ ಸ್ಥಳಗಳು ಮತ್ತು ಸ್ಮಶಾನಗಳಲ್ಲಿ ಮಲಗುವ ಸರ್ವೀಸ್ ಸಹ ಒದಗಿಸುತ್ತಾರಂತೆ ಇವರು.
 

ಇನ್ನು ಶ್ರೇತಾವುತ್ ಮೊದಲು ದೆವ್ವಗಳಿಗೆ ಹೆದರುತ್ತಿದ್ದರಂತೆ, ಆದರೆ ಈ ಕೆಲಸದ ಮೂಲಕ ಅವರು ದೆವ್ವಗಳು ಅಸ್ತಿತ್ವದಲ್ಲಿಲ್ಲ ಎಂದು ಸ್ವತಃ ಮನವರಿಕೆ ಮಾಡಿಕೊಂಡಿದ್ದಾರಂತೆ. ಇದು ಮಾತ್ರವಲ್ಲ, ಈ ಕೆಲಸಕ್ಕೆ ಅಗತ್ಯವಾದ ವಸ್ತುಗಳನ್ನು ಅವರು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ತಾಯತಗಳು ಮತ್ತು ದಾರಗಳನ್ನು ಕಟ್ಟೋದಕ್ಕೂ ಇವರು ಯೋಚನೆ ಮಾಡೋದಿಲ್ವಂತೆ. 
 

click me!