ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಸಿಗ್ತಿದೆ ಟೀ, Raghav Chadhaಗೆ ಕ್ರೆಡಿಟ್, ಪತಿ ಹೊಗಳಿದ ಪರಿಣಿತಿ

Published : Feb 11, 2026, 12:19 PM IST

ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿರುವ ಉಡಾನ್ ಯಾತ್ರಿ ಕೆಫೆ ವೈರಲ್ ಆಗಿದೆ. ಅಲ್ಲಿ ಎಷ್ಟು ಬೆಲೆಗೆ ಟೀ ಸಿಗುತ್ತೆ ಅನ್ನೋದನ್ನು ಚೆಕ್ ಮಾಡಿದ ದಂಪತಿ ವಿಡಿಯೋಕ್ಕೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ರಿಯಾಕ್ಟ್ ಮಾಡಿದ್ದಾರೆ.

PREV
16
ಉಡಾನ್ ಯಾತ್ರಿ ಕೆಫೆ

ಏರ್ಪೋರ್ಟ್ ನಲ್ಲಿ ಆಹಾರ ಖರೀದಿ ಸುಲಭದ ಮಾತಲ್ವೇ ಅಲ್ಲ. ಒಂದು ಟೀ ಕುಡಿಬೇಕು ಅಂದ್ರೆ ಹಿಂದೆ ಮುಂದೆ ನೋಡುವ ಕಾಲ ಒಂದಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ನೀವು ಅತೀ ಕಡಿಮೆ ಬೆಲೆಗೆ ಟೀ, ಸಮಾಸೋ ರುಚಿ ಸವಿಯಬಹುದು. ವಿಮಾನ ನಿಲ್ದಾಣದಲ್ಲಿರುವ ಉಡಾನ್ ಯಾತ್ರಿ ಕೆಫೆಯಲ್ಲಿ ಕಡಿಮೆ ಬೆಲೆಗೆ ಆಹಾರ ಲಭ್ಯವಿದೆ.

26
ಅಧಿವೇಶನದಲ್ಲಿ ವಾದ ಮಂಡಿಸಿದ್ದ ರಾಘವ್ ಚಡ್ಡಾ

ಏರ್ಪೋರ್ಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರ ಸಿಗಲು ಕಾರಣ ಆಮ್ ಆದ್ಮಿ ಪಕ್ಷದ ಸಂಸದ ಹಾಗೂ ನಟಿ ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಾ ಕಾರಣ. 2023 ರ ಚಳಿಗಾಲದ ಅಧಿವೇಶನದಲ್ಲಿ, ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ, ಏರ್ ಪೋರ್ಟ್ ನಲ್ಲಿ ಸಿಗುವ ಆಹಾರ ಮತ್ತು ಪಾನೀಯಗಳ ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಿದ್ದರು. ಇದರ ನಂತರ, ಸರ್ಕಾರ ಅವರ ಬೇಡಿಕೆಯನ್ನು ಸ್ವೀಕರಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಉಡಾನ್ ಯಾತ್ರಿ ಕೆಫೆ ಅನ್ನು ಪ್ರಾರಂಭಿಸಿತ್ತು. ಆ ಕೆಫೆ ಬಗ್ಗೆ ಅನೇಕರಿಗೆ ಇನ್ನೂ ಮಾಹಿತಿ ಇಲ್ಲ. ಈಗ್ಲೂ ಕೆಫೆ ನಡೀತಿದ್ಯಾ? ಕೆಫೆಯಲ್ಲಿ ಕಡಿಮೆ ಬೆಲೆಗೆ ಆಹಾರ ಸಿಗ್ತಿದ್ಯಾ ಅನ್ನೋದನ್ನು ಚೆಕ್ ಮಾಡಲಾಗಿದೆ.

36
ವಿಡಿಯೋ ವೈರಲ್

ಉಡಾನ್ ಯಾತ್ರಿ ಕೆಫೆಯ ವಿಡಿಯೋವನ್ನು ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿ ಪಿಯೂಷ್ ತ್ರಿಪಾಠಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣದಲ್ಲಿದ್ದ ಕೆಫೆಗೆ ಭೇಟಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಮೋಸಾ ತಿನ್ನುತ್ತೀರಾ ಅಂತ ಪತ್ನಿಗೆ ಕೇಳಿದ್ದಾರೆ. ಅದಕ್ಕೆ ಪತ್ನಿ ಒಪ್ಪಿಕೊಂಡಿದ್ದಾರೆ. ಟರ್ಮಿನಲ್ ನಲ್ಲಿದ್ದ ಉಡಾನ್ ಯಾತ್ರಿ ಕೆಫೆಗೆ ಕರೆದುಕೊಂಡು ಹೋಗಿದ್ದಾರೆ. ಕೆಫೆಯಲ್ಲಿ ಅವರು ಎರಡು ಕಪ್ ಟೀ ಹಾಗೂ ಸಮೋಸಾ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ ಇದು ಯಾರಿಂದ ಸಾಧ್ಯವಾಯ್ತು ಅಂತ ತ್ರಿಪಾಠಿ ತಮ್ಮ ಪತ್ನಿಯನ್ನು ಕೇಳ್ತಾರೆ. ಅವರು ರಾಘವ್ ಚಡ್ಡಾ ಹೆಸರು ಹೇಳಿದ್ದಲ್ಲದೆ ಅವರು ಹ್ಯಾಂಡ್ಸಮ್ ಎಂದಿದ್ದಾರೆ.

46
ಬೆಲೆ ಎಷ್ಟು?

ಶೀರ್ಷಿಕೆಯಲ್ಲಿ ಅವರು ಉಡಾನ್ ಯಾತ್ರಿ ಕೆಫೆ ಆಹಾರದ ಬೆಲೆಯನ್ನೂ ತಿಳಿಸಿದ್ದಾರೆ. ವಿಮಾನ ನಿಲ್ದಾಣ ದುಬಾರಿ ಎನ್ನುವ ನಂಬಿಕೆ ಇದೆ. ಆದ್ರೆ ನಿಜವಾಗಿಯೂ ಸಮೋಸಾ 20 ರೂಪಾಯಿಗೆ, ಟೀ 10 ರೂಪಾಯಿಗೆ ಸಿಗ್ತಿದೆ. ಪರೀಕ್ಷೆಯಲ್ಲಿ ಉಡಾನ್ ಯಾತ್ರಿ ಕೆಫೆ ಪಾಸ್ ಆಗಿದೆ ಅಂತ ಹಾಕಲಾಗಿದೆ. ವಿಮಾನ ನಿಲ್ದಾಣದಲ್ಲಿ ಹಿಂದೆ ಒಂದು ಟೀಗೆ 200 ರಿಂದ 300 ರೂಪಾಯಿ ನೀಡ್ಬೇಕಾಗಿತ್ತು. ಸಮೋಸಾ ಬೆಲೆ 350 ರೂಪಾಯಿಯಾಗಿತ್ತು.

56
ಪರಿಣಿತಿ – ರಾಘವ್ ರಿಯಾಕ್ಷನ್

ಸೋಶಿಯಲ್ ಮೀಡಿಯಾದಲ್ಲಿ ತ್ರಿಪಾಠಿ ವಿಡಿಯೋ ವೈರಲ್ ಆಗಿದ್ದು ಅನೇಕರು ಕಮೆಂಟ್ ಮಾಡ್ತಿದ್ದಾರೆ. ನಟಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹಹಾ, ನೀವು ಸಮೋಸಾವನ್ನು ಆನಂದಿಸಿದ್ದೀರಿ ಎಂದು ಭಾವಿಸುತ್ತೇನೆ ಅಂತ ಕಮೆಂಟ್ ಮಾಡಿದ್ದಾರೆ. ರಾಘವ್ ಚಡ್ಡಾ ಅವರನ್ನು ಹ್ಯಾಂಡ್ಸಮ್ ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಪರಿಣಿತಿ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಅಂತ ಬರೆದಿದ್ದಾರೆ.

66
ಸೋಶಿಯಲ್ ಮೀಡಿಯಾ ಬಳಕೆದಾರರ ಕಮೆಂಟ್

ಉಡಾನ್ ಯಾತ್ರಿ ಕೆಫೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಾಧ್ಯವಾಗಿಸಿದ ರಾಘವ್ ಚಡ್ಡಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಸಾರ್ವಜನಿಕರ ಸಮಸ್ಯೆ ಬಗ್ಗೆ ಮಾತನಾಡಿದ್ದು ನೀವೊಬ್ಬರೇ, ನಿಮ್ಮ ಕೆಲ್ಸದಿಂದ ನಮಗೆ ನೆಮ್ಮದಿ ಸಿಕ್ಕಿದೆ ಅಂತ ರಾಘವ್ ಚಡ್ಡಾ ಕೆಲ್ಸವನ್ನು ಹೊಗಳಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories