ಸರ್ಜಿಕಲ್ ಕಾಟನ್ ಉದ್ಯಮ ಆರಂಭಿಸಿ ತಿಂಗಳಿಗೆ 2 ಲಕ್ಷ ಆದಾಯ ಗಳಿಸಿ!

Published : Mar 09, 2025, 06:01 PM ISTUpdated : Mar 09, 2025, 06:16 PM IST

ಬ್ಯೂಸಿನೆಸ್ ಐಡಿಯಾ: ಕೆಲಸ ಮಾಡುವ ಅನೇಕ ಜನರು ಒಂದು ದಿನ ವ್ಯಾಪಾರ ಮಾಡಬೇಕೆಂದು ಯೋಚಿಸುತ್ತಾರೆ. ಕೆಲವು ವರ್ಷಗಳ ಕಾಲ ಕೆಲಸ ಮಾಡಿ ನಂತರ ಉತ್ತಮ ವ್ಯವಹಾರವನ್ನು ಪ್ರಾರಂಭಿಸಿ ಸೆಟಲ್ ಆಗಲು ಬಯಸುತ್ತಾರೆ. ಆದರೆ ನಾವು ಸಂಪಾದಿಸುತ್ತಲೇ ಮತ್ತೊಬ್ಬರಿಗೆ ಉದ್ಯೋಗ ನೀಡುವ ಒಂದು ಉತ್ತಮ ಉದ್ಯಮದ ಬಗ್ಗೆ ಇಂದು ತಿಳಿಯೋಣ..

PREV
14
ಸರ್ಜಿಕಲ್ ಕಾಟನ್ ಉದ್ಯಮ ಆರಂಭಿಸಿ ತಿಂಗಳಿಗೆ 2 ಲಕ್ಷ ಆದಾಯ ಗಳಿಸಿ!

ಮಾನವನ ಬದುಕು ಸಾಗಲು ಆಹಾರ, ಬಟ್ಟೆ ಎಷ್ಟು ಮುಖ್ಯವೋ ವೈದ್ಯಕೀಯವು ಅಷ್ಟೇ ಮುಖ್ಯ. ಅದಕ್ಕಾಗಿಯೇ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಎಂದಿಗೂ ನಷ್ಟವಿಲ್ಲ ಎಂದು ಹಲವರು ಹೇಳುತ್ತಾರೆ. ಎಷ್ಟೇ ಪೈಪೋಟಿ ಇದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಲಾಭ ಗಳಿಸಬಹುದು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಇಂತಹ ಒಂದು ಉತ್ತಮ ಉದ್ಯಮದ ಬಗ್ಗೆ ಈಗ ತಿಳಿಯೋಣ.

24

ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಗಳು, ಶಸ್ತ್ರಚಿಕಿತ್ಸೆಗೆ ಬೇಕಾಗುವ ಯಂತ್ರಗಳ ಜೊತೆಗೆ ಖಂಡಿತಾ ಬೇಕಾಗುವ ಮತ್ತೊಂದು ವಸ್ತು ಕಾಟನ್. ಸರ್ಜಿಕಲ್ ಕಾಟನ್‌ಗೆ ದಿನೇ ದಿನೇ ಡಿಮ್ಯಾಂಡ್ ಹೆಚ್ಚುತ್ತಿದೆ. ಸಣ್ಣ ಸಣ್ಣ ಪಟ್ಟಣಗಳಲ್ಲಿ ಕೂಡ ದೊಡ್ಡ ದೊಡ್ಡ ಆಸ್ಪತ್ರೆಗಳು ಆಗುತ್ತಿವೆ. ಮೆಡಿಕಲ್ ಶಾಪ್ ಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಹೆಚ್ಚುತ್ತಿರುವ ಶಸ್ತ್ರಚಿಕಿತ್ಸೆಗಳಿಗೆ ಅನುಗುಣವಾಗಿ ಸರ್ಜಿಕಲ್ ಕಾಟನ್‌ಗೂ ಡಿಮ್ಯಾಂಡ್ ಹೆಚ್ಚುತ್ತಿದೆ. ಹಾಗಾದರೆ ಇಂತಹ ಸರ್ಜಿಕಲ್ ಕಾಟನ್ ತಯಾರಿಕಾ ಘಟಕವನ್ನು ಪ್ರಾರಂಭಿಸಿದರೆ ಊಹೆಗೂ ಮೀರದ ಲಾಭವನ್ನು ಗಳಿಸಬಹುದು. ಇಷ್ಟಕ್ಕೂ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು.? ಎಷ್ಟು ಖರ್ಚಾಗುತ್ತದೆ.? ಮುಂತಾದ ವಿವರಗಳು ನಿಮಗಾಗಿ..
 

34

ಸರ್ಜಿಕಲ್ ಕಾಟನ್ ತಯಾರಿಕೆಗಾಗಿ ಮೊದಲಿಗೆ ಹೋಲ್‌ಸೇಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹತ್ತಿಯನ್ನು ಖರೀದಿಸಬೇಕಾಗುತ್ತದೆ. ಈ ಕಾಟನ್ ಅನ್ನು ಸ್ಥಳೀಯವಾಗಿರುವ ಕಾಟನ್ ಮಿಲ್ಸ್‌ನಿಂದ ನೇರವಾಗಿ ಖರೀದಿಸಬಹುದು. ನಂತರ ಈ ಕಾಟನ್ ಅನ್ನು ಕೆಲವು ರಾಸಾಯನಿಕಗಳೊಂದಿಗೆ ಶುದ್ಧೀಕರಿಸಬೇಕಾಗುತ್ತದೆ. ಹೀಗೆ ಹತ್ತಿಯನ್ನು ಶುದ್ಧೀಕರಿಸಿದ ನಂತರ ಅದರಿಂದ ಸರ್ಜಿಕಲ್ ಕಾಟನ್ ತಯಾರಿಸುತ್ತಾರೆ. ಇದಕ್ಕಾಗಿ ಕೆಲವು ಮಿಷಿನ್ ಗಳನ್ನು ಖರೀದಿಸಬೇಕಾಗುತ್ತದೆ. ಕೊನೆಯದಾಗಿ ಹತ್ತಿಯನ್ನು ರೌಂಡ್ ಶೇಪ್‌ನಲ್ಲಿ ಪ್ಯಾಕಿಂಗ್ ಮಾಡ್ತಾರೆ. 
 

44

ಎಷ್ಟು ಬಂಡವಾಳ.? ಲಾಭಗಳು ಹೇಗಿರುತ್ತವೆ.? 

ಸರ್ಜಿಕಲ್ ಕಾಟನ್ ತಯಾರಿಕಾ ಘಟಕವನ್ನು ಸ್ಥಾಪಿಸಬೇಕೆಂದರೆ ಬಂಡವಾಳ ದೊಡ್ಡ ಮೊತ್ತದಲ್ಲಿ ಬೇಕಾಗುತ್ತದೆ. ಕೇವಲ ಯಂತ್ರಗಳಿಗಾಗಿ ರೂ. 50 ಲಕ್ಷ ಬೇಕಾಗುತ್ತದೆ. ರಾ ಮೆಟೀರಿಯಲ್ಸ್‌ಗಾಗಿ ಕನಿಷ್ಠ ರೂ. 10 ಲಕ್ಷದವರೆಗೆ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಬಂಡವಾಳಕ್ಕೆ ತಕ್ಕಂತೆ ಆದಾಯ ಇರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸರ್ಜಿಕಲ್ ಕಾಟನ್ ಅನ್ನು ಉತ್ತಮ ಬ್ರಾಂಡಿಂಗ್‌ನೊಂದಿಗೆ ಹೋಲ್‌ಸೇಲ್ ಮಾರಾಟ ಮಾಡಿದರೆ ತಿಂಗಳಿಗೆ ಕನಿಷ್ಠ ರೂ. 2 ಲಕ್ಷ ಆದಾಯ ಪಡೆಯಬಹುದು. అంతేకాకుండా మీతో పాటు మరో నలుగురికి కూడా ఉపాధి కల్పించవచ్చు. ಈಗಾಗಲೇ ಈ ವ್ಯಾಪಾರವನ್ನು ರನ್ ಮಾಡುತ್ತಿರುವವರನ್ನು ನೇರವಾಗಿ ಸಂಪರ್ಕಿಸಿ ಬಿಸಿನೆಸ್ ಪ್ರಾರಂಭಿಸಿದರೆ ಉತ್ತಮ ಲಾಭ ಪಡೆಯಬಹುದು. 

click me!

Recommended Stories