ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು, ತಜ್ಞರು ಹೇಳ್ತಾರೆ ಲೋ ಬಜೆಟ್ ಪ್ಲಾನ್

Published : May 31, 2025, 09:41 PM IST

ಚಿನ್ನ ದುಬಾರಿ ಎಂದು ಕಷ್ಟಪಟ್ಟು ಚಿನ್ನದ ಮೇಲೆ ಹೂಡಿಕೆ ಪ್ಲಾನ್ ಮಾಡುತ್ತಿದ್ದೀರಾ? ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು ಅಂತಾರೆ ತಜ್ಞರು. ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಬೆಳ್ಳಿ ಉತ್ತಮವೇ?  

PREV
15
ಬೆಳ್ಳಿ ಮೋಹ ಹೆಚ್ಚುತ್ತಿದೆ

ಚಿನ್ನದ ಹಾಗೆ ಬೆಳ್ಳಿ ಹೂಡಿಕೆ ಕೂಡ ಜನಪ್ರಿಯವಾಗ್ತಿದೆ. ಈಗ ಬೆಳ್ಳಿ ಆಭರಣಗಳು ಕೂಡ ಚಿನ್ನದ ಬಣ್ಣದಲ್ಲಿ ಸಿಗುತ್ತಿರುವುದರಿಂದ ಬೆಳ್ಳಿಗೆ ಬೇಡಿಕೆ ಹೆಚ್ಚಿದೆ. ಮದುವೆಗಳಲ್ಲಿ ಬೆಳ್ಳಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೂಡಿಕೆ ವಿಚಾರ ಬಂದಾಗ ಬಹುತೇಕರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಬೆಲೆ 1 ಲಕ್ಷ ರೂ ಸನಿಹದಲ್ಲಿದೆ. ಪ್ರತಿ ದಿನ ಏರಿಕೆಯಾಗುತ್ತಿದೆ. ಆದರೆ ಚಿನ್ನದ ಮೇಲಿನ ಹೂಡಿಕೆ ದುಬಾರಿ. ಆದರೆ ಕಡಿಮೆ ಮೊತ್ತ ಹೂಡಿಕೆ ಮಾಡಿ ಭರ್ಜರಿ ಲಾಭಗಳಿಸಲು ಚಿನ್ನಕ್ಕಿಂತ ಬೆಳ್ಳಿ ಉತ್ತಮ ಆಯ್ಕೆಯಾಗಿದೆ ಅನ್ನೋದು ತಜ್ಞರ ಅಭಿಪ್ರಾಯ. 

25
ಲಾಭ ತಂದ ಬೆಳ್ಳಿ

ಚಿನ್ನದ ಬಿಸ್ಕತ್ತುಗಳಂತೆ ಬೆಳ್ಳಿ ಬಾರ್‌ಗಳ ಮಾರಾಟವೂ ಹೆಚ್ಚಾಗಿದೆ. ಕಳೆದ ವರ್ಷ ಬೆಳ್ಳಿ ಸರಾಸರಿ 15% ಲಾಭ ತಂದಿದೆ. ಕಳೆದ 10 ವರ್ಷಗಳಲ್ಲಿ ಬೆಳ್ಳಿ 9% ಏರಿಕೆ ಕಂಡಿದೆ. ಚಿನ್ನಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭ ತಂದುಕೊಡಲಿದೆ ಎಂದು ಅಂಕಿ ಅಂಶಗಳು ಹೇಳುತ್ತಿದೆ. 

35
77% ಲಾಭ ತಂದ ಬೆಳ್ಳಿ

2020ರಲ್ಲಿ ಬೆಳ್ಳಿ ಬೆಲೆ ಕೆಜಿಗೆ ₹75,000 ಇದ್ದದ್ದು ಈಗ ₹1.10 ಲಕ್ಷಕ್ಕೆ ಏರಿದೆ. 2022ರಲ್ಲಿ ಬೆಲೆ ಇಳಿಕೆಯಾದರೂ ಈಗ ಮತ್ತೆ ಏರಿಕೆ ಕಂಡಿದೆ. ಬೆಳ್ಳಿ 77% ಲಾಭ ತಂದಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಬೆಳ್ಳಿ ಮೇಲೆ ಹೂಡಿಕೆ ಮಾಡಲು ಚಿನ್ನದಂತೆ ದುಬಾರಿ ಮೊತ್ತ ಬೇಕಿಲ್ಲ. ಕಡಿಮೆ ಮೊತ್ತದಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಬಹುದು. 

45
ಬೆಳ್ಳಿ ಹೂಡಿಕೆ ಬಗ್ಗೆ ತಜ್ಞರ ಅಭಿಪ್ರಾಯ

ತಜ್ಞರ ಪ್ರಕಾರ, ಬೆಳ್ಳಿಯನ್ನು ಆಭರಣ ಅಥವಾ ಬಾರ್ ರೂಪದಲ್ಲಿ ಖರೀದಿಸುವ ಬದಲು ETF ರೂಪದಲ್ಲಿ ಖರೀದಿಸುವುದು ಉತ್ತಮ. ಇದು ಕಡಿಮೆ ವೆಚ್ಚದ ಹೂಡಿಕೆ. ಆದರೆ ಇದರ ಲಾಭ ಹೆಚ್ಚು. ಹೀಗಾಗಿ ಹೂಡಿಕೆ ಮಾಡುವ ಮೊದಲು ಉತ್ತಮ ತಜ್ಞರ ಸಲಹೆ ಪಡೆಯಿರಿ. ಹೂಡಿಕೆ ಅವಧಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. 

55
ಬೆಳ್ಳಿ ಖರೀದಿಗೆ ಸೂಕ್ತ ಸಮಯ

2025ರ ಮೇ 22ರಂದು 24 ಕ್ಯಾರೆಟ್ ಚಿನ್ನದ ಬೆಲೆ ₹9,790/ಗ್ರಾಂ ಮತ್ತು ಬೆಳ್ಳಿ ಬೆಲೆ ₹112/ಗ್ರಾಂ ಇತ್ತು. ಚಿನ್ನ ಮತ್ತು ಬೆಳ್ಳಿ ಬೆಲೆಗಳ ಅನುಪಾತ 70ಕ್ಕಿಂತ ಹೆಚ್ಚಾದಾಗ ಬೆಳ್ಳಿ ಖರೀದಿಸುವುದು ಒಳ್ಳೆಯದು. ಬೆಳ್ಳಿ ಮೇಲಿನ ಹೂಡಿಕೆ ಕೂಡ ಭವಿಷ್ಯದಲ್ಲಿ ಉತ್ತಮ ಲಾಭದಾಯಕವಾಗಲಿದೆ. 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories