ಅತ್ಯಧಿಕ ಲಾಭ ನೀಡುವ ಭಾರತದ 5 ಬ್ಯುಸಿನೆಸ್; ಇದರಲ್ಲಿ ನಷ್ಟ ಅನ್ನೋದೇ ಇರಲ್ಲ!

Published : May 31, 2025, 01:04 PM IST

Business Idea: ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ 5 ಲಾಭದಾಯಕ ವ್ಯವಹಾರಗಳ ಪರಿಚಯ. 

PREV
17

ನೀವೇನಾದ್ರೂ ಹೊಸ ವ್ಯವಹಾರ ಆರಂಭಿಸಲು ಯೋಚನೆ ಮಾಡುತ್ತಿದ್ದೀರಾ? ಯಾವ ವ್ಯವಹಾರ ಆರಂಭಿಸಿದ್ರೆ ಹೆಚ್ಚು ಲಾಭ ಸಿಗುತ್ತೆ ಅನ್ನೋ ಗೊಂದಲದಲ್ಲಿ ಸಿಲುಕಿದ್ದೀರಾ? ಒಂದು ನಾವು ಹೇಳುತ್ತಿರುವ ಈ 5 ಬ್ಯುಸಿನೆಸ್‌ಗಳಲ್ಲಿ ಲಾಭದ ಪ್ರಮಾಣ ಅತ್ಯಧಿಕವಾಗಿರುತ್ತದೆ.

27

ಈ ಐದು ವ್ಯವಹಾರಗಳು ನಿಮ್ಮೂರು ಅಥವಾ ಸಮೀಪದ ನಗರ ಪ್ರದೇಶದಲ್ಲಿ ಆರಂಭಿಸಬಹುದಾಗಿದೆ. ಈ ವ್ಯವಹಾರ ಆರಂಭವಾದ ಮೊದಲೇ ದಿನವೇ ನಿಮ್ಮ ಮೇಲೆ ಹಣದ ಸುರಿಮಳೆಯಾಗಲ್ಲ. ವ್ಯವಹಾರ ಆರಂಭಿಸಿದ 3 ರಿಂದ 6 ತಿಂಗಳ ನಂತರ ನಿಮಗೆ ಲಾಭ ಸಿಗಲಾರಂಭಿಸುತ್ತದೆ. ಹಾಗಾಗಿ ಮೊದಲೇ ಕನಿಷ್ಠ 6 ತಿಂಗಳ ಬಂಡವಾಳವನ್ನು ಮೀಸಲಿಟ್ಟುಕೊಂಡಿರಬೇಕು. ಆ ಐದು ವ್ಯವಹಾರಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

37

1.ಹೋಟೆಲ್

ನಿಮ್ಮೂರು ಅಥವಾ ನಗರ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವ ಹೋಟೆಲ್ ಆರಂಭಿಸಬಹುದು. ಇಂದು ಜನಸಂದಣಿ ಹೊಂದಿರುವ ಪ್ರದೇಶದಲ್ಲಿ ಹೋಟೆಲ್ ಆರಂಭಿಸಬೇಕು ಎಂಬ ನಿಯಮವೇನಿಲ್ಲ. ಇಂದು ಜನರು ಒಳ್ಳೆಯ ಆಹಾರ ಸಿಗುತ್ತಿದ್ರೆ ಹುಡುಕಿಕೊಂಡು ಬರುತ್ತಾರೆ. ಇದಕ್ಕಾಗಿ ನೀವು ಹೋಟೆಲ್ ಆರಂಭದ ನಂತರ ಪ್ರಚಾರ ನಡೆಸಬೇಕಾಗುತ್ತದೆ. ಮನೆ ಮನೆಗಳಿಗೆ ನೇರವಾಗಿ ಆಹಾರ ತಲುಪಿಸುವ ಮೂಲಕ ಹೆಚ್ಚುವರಿ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದು.

47

2.ಬ್ಯುಟಿ ಪಾರ್ಲರ್

ನೀವು ಬ್ಯುಟಿಷಿಯನ್ ಆಗಿದ್ರೆ 20*20 ಅಡಿ ಜಾಗದಲ್ಲಿ ಪಾರ್ಲರ್ ಓಪನ್ ಮಾಡಬಹುದು. ನೀವು ತರಬೇತಿ ಪಡೆದು ಬ್ಯುಟಿಷಿಯನ್ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಕೆ ಮಾಡುತ್ತಿರೋದನ್ನು ಗ್ರಾಹಕರಿಗೆ ಮನವರಿಕೆ ಮಾಡಿಸಬೇಕು. ಹೀಗಾದಾಗ ಮಾತ್ರ ಗ್ರಾಹಕರು ನೀವು ಕೇಳುವ ಶುಲ್ಕವನ್ನು ಪಾವತಿಸುತ್ತಾರೆ. ಒಮ್ಮೆ ನಿಮ್ಮ ಪಾರ್ಲರ್ ಜನಪ್ರಿಯವಾದ್ರೆ ಪ್ರತಿ ತಿಂಗಳು ಸೀಮಿತ ಆದಾಯ ನಿಮ್ಮದಾಗುತ್ತದೆ.

57

3.ಟ್ರಾವೆಲ್ ಏಜೆನ್ಸಿ

ನೀವಿರುವ ಪ್ರದೇಶಲದಲ್ಲಿ ಖಾಸಗಿ ಟ್ರಾವೆಲ್ ಏಜೆನ್ಸಿ ಆರಂಭಿಸಬಹುದು. ಈ ವ್ಯವಹಾರವೂ ಒಳ್ಳೆಯ ಆದಾಯ ನೀಡುತ್ತದೆ. ಖಾಸಗಿ ಬಸ್‌ಗಳ ಟಿಕೆಟ್ ಬುಕಿಂಗ್, ಸರಕುಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಕೆಲಸ ಇಲ್ಲಿ ಮಾಡಬಹುದು. ಇದರಿಂದ ಲಾಭದ ಪ್ರಮಾಣ ಅಧಿಕವಾಗುತ್ತದೆ.

67

4.ಇಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ಸ್

ಆನ್‌ಲೈನ್‌ಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ಸ್ ಸಿಗುತ್ತಿದ್ರೂ ಬಹುತೇಕರು ಸ್ಟೋರ್‌ಗಳಿಗೆ ಹೋಗಿ ಖರೀದಿಸುತ್ತಾರೆ. ಹಾಗಾಗಿ ಇಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ಸ್ ಸ್ಟೋರ್ ಆರಂಭಿಸಬಹುದು. ನಿಮಗೆ ಇಲ್ಲಿ ಪ್ರತಿಯೊಂದು ಉತ್ಪನ್ನದ ಮಾರಾಟದ ಮೇಲೆ ಲಾಭ ಸಿಗುತ್ತದೆ. ಹೊಸ ಹೊಸ ಮೊಬೈಲ್ ಸೇರಿದಂತೆ ಟ್ರೆಂಡಿಂಗ್‌ನಲ್ಲಿರುವ ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚು ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು.

77

5.ವೆಡ್ಡಿಂಗ್ ಪ್ಲಾನರ್

ನಗರ ಪ್ರದೇಶದಲ್ಲಿ ವೆಡ್ಡಿಂಗ್ ಪ್ಲಾನರ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮದುವೆ ತಯಾರಿ, ಊಟದ ವ್ಯವಸ್ಥೆ ಇನ್ನಿತರ ಸೇವೆಗಳನ್ನು ನೀಡುವ ಮೂಲಕ ಅತ್ಯಧಿಕ ಹಣ ನಿಮ್ಮದಾಗಿಸಿಕೊಳ್ಳಬಹುದು. ವೆಡ್ಡಿಂಗ್ ಪ್ಲಾನರ್‌ ಬ್ಯುಸಿನೆಸ್ ಆರಂಭಿಸಲು ದೊಡ್ಡ ಬಂಡವಾಳದ ಅವಶ್ಯಕತೆ ಇರುತ್ತದೆ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories