DMart ಬಿಲ್ ನೋಡಿ ಖುಷಿ ಪಡ್ಬೇಡಿ! ಬೆಂಗಳೂರಿನ ಈ ಮಾರ್ಕೆಟ್‌ಗಳಲ್ಲಿ ಹೆಚ್ಚು ಉಳಿತಾಯ!

Published : Oct 16, 2026, 08:20 AM IST

DMart vs. Bengaluru Wholesale Market ದಿನಸಿ ಟು ಫ್ಯಾಷನ್: ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್ ಶಾಪಿಂಗ್ ಮಾಡಲು ಬೆಂಗಳೂರಿನ ಬೆಸ್ಟ್ ಏರಿಯಾಗಳಿವೆ. ಈ ಪ್ರದೇಶದಲ್ಲಿ ನಿಮಗೆ ಬೆಂಗಳೂರಿನ ಈ ಮಾರ್ಕೆಟ್‌ಗಳಲ್ಲಿ ಅದಕ್ಕಿಂತಲೂ ಹೆಚ್ಚು ಉಳಿತಾಯವಾಗುತ್ತದೆ.

PREV
15
ಡಿಮಾರ್ಟ್ ಶಾಪಿಂಗ್‌ನಿಂದ ಉಳಿತಾಯ ಆಗುತ್ತಾ?

ಶಾಪಿಂಗ್ ಅಂದ್ರೆ ಡಿ-ಮಾರ್ಟ್ ಅನ್ನುವಂತಾಗಿದೆ. ಇದು ಮಧ್ಯಮ ವರ್ಗದ ಜನಪ್ರಿಯ ಶಾಪಿಂಗ್ ತಾಣವಾಗಿದೆ. ಡಿಮಾರ್ಟ್‌ನಲ್ಲಿ ಸಿಗುವ ಎಲ್ಲಾ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ ಅನ್ನೋ ನಂಬಿಕೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಡಿಮಾರ್ಟ್ ಹೇಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತೆ ಮತ್ತು ಅಲ್ಲಿಯ ಉತ್ಪನ್ನಗಳ ಪ್ರಮಾಣ ಕೊಂಚ ಹೆಚಿದ್ದರೂ ಬೆಲೆಯಲ್ಲಿನ ವ್ಯತ್ಯಾಸದ ಬಗ್ಗೆ ಜನರು ವಿಡಿಯೋಗಳನ್ನು ಮಾಡುತ್ತಿದ್ದು, ವೈರಲ್ ಆಗುತ್ತಿವೆ.

25
ಡಿಮಾರ್ಟ್‌ನಲ್ಲಿ ಜನರು ಖರೀದಿ ಮಾಡೋದೇನು?

ಡಿಮಾರ್ಟ್‌ನಲ್ಲಿ ಶಾಪಿಂಗ್ ಮಾಡಿದ ಬಳಿಕ ನೀಡಲಾಗುವ ಬಿಲ್‌ನಲ್ಲಿ ಎಷ್ಟು ಹಣ ಉಳಿತಾಯ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಜನರು ಮುಖ್ಯವಾಗಿ ಡಿಮಾರ್ಟ್‌ನಲ್ಲಿ ದಿನಬಳಕೆಯ ವಸ್ತುಗಳನ್ನು ಡಿಮಾರ್ಟ್‌ನಿಂದ ಖರೀದಿಸುತ್ತಾರೆ.

ಉದಾಹರಣೆಗೆ: ದಿನಸಿ ಪದಾರ್ಥಗಳು, ಶ್ಯಾಂಪೂ, ಟೂತ್‌ಪೇಸ್ಟ್, ಸೋಪು, ಡಿಟರ್ಜೆಂಟ್, ಪೂಜಾ ಸಾಮಾಗ್ರಿಗಳು. ಇವುಗಳ ಜೊತೆಯಲ್ಲಿ ಬಟ್ಟೆ, ಶೂ, ಚಪ್ಪಲಿ, ಪ್ಲಾಸ್ಟಿಕ್, ಗಾಜು ಮತ್ತು ಸ್ಟೀಲ್ ಪರಿಕರಗಳು ಸಹ ಇಲ್ಲಿ ಸಿಗುತ್ತವೆ. ಆದ್ರೆ ಇಂದು ನಾವು ನಿಮಗೆ ಡಿಮಾರ್ಟ್‌ಗಿಂತಲೂ ಕಡಿಮೆ ಬೆಲೆಯಲ್ಲಿ ವಸ್ತುಗಳು ಬೆಂಗಳೂರಿನ ಯಾವ ಭಾಗದಲ್ಲಿ ಸಿಗುತ್ತವೆ ಎಂಬುದರ ಬಗ್ಗೆ ಹೇಳುತ್ತಿದ್ದೇವೆ.

35
ದಿನಸಿ ಸಾಮಾಗ್ರಿಗಳು

ಇಂದಿಗೂ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಹಳೆಯ ಪ್ರಾವಿಸನ್ ಸ್ಟೋರ್‌ಗಳಿವೆ. ಈ ಅಂಗಡಿಗಳಲ್ಲಿ ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿಯೇ ಸಾಮಾಗ್ರಿಗಳನ್ನು ತೂಕ ಮಾಡಿಕೊಡಲಾಗುತ್ತದೆ. ಡಿಮಾರ್ಟ್‌ನಲ್ಲಿ ನಾವೇ ತೂಕ ಮಾಡಿಕೊಳ್ಳೋದರಿಂದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಬಿಲ್ ಹೆಚ್ಚಾಗುತ್ತದೆ. ಕೆಲವು ಪ್ರಾವಿಸನ್ ಸ್ಟೋರ್‌ಗಳಲ್ಲಿ ಗ್ರಾಹಕರ ಖರೀದಿ ಮೇಲೆ ಅಂತಿಮವಾಗಿ ಡಿಸ್ಕೌಂಟ್ ನೀಡಲಾಗುತ್ತದೆ.

ಇತ್ತೀಚೆಗೆ ಡಿಮಾರ್ಟ್ ನಂತೆಯೇ ಕಡಿಮೆ ಬೆಲೆಗೆ ದಿನಸಿ ಮಾರಾಟ ಮಾಡುವಂತಹ ಶಾಪಿಂಗ್‌ ಮಾಲ್‌ಗಳು ಬೆಂಗಳೂರಿನಲ್ಲಿಯೇ ತೆಲೆ ಎತ್ತಿವೆ. ಕೆಲವೆಡೆ ಡಿಮಾರ್ಟ್‌ ಮಾದರಿಯಲ್ಲಿಯೇ ದಿನಸಿ ಪದಾರ್ಥಗಳನ್ನು ಗ್ರಾಹಕರಿಗೆ ನೀಡುತ್ತಿವೆ.

45
ಕೆಆರ್ ಮಾರ್ಕೆಟ್, ಎಸ್‌ಪಿ ರೋಡ್

ಇನ್ನು ಬಟ್ಟೆ, ಪಾತ್ರೆ, ಪ್ಲಾಸ್ಟಿಕ್ ವಸ್ತು, ಎಲೆಕ್ಟ್ರಾನಿಕ್ ಉತ್ಪನಗಳನ್ನು ಡಿಮಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿವೆ. ಆದ್ರೆ ಇಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗಲ್ಲ. ಇಂತಹ ವಸ್ತುಗಳಿಗೆ ನಿಮಗೆ ಕೆಆರ್‌ ಮಾರ್ಕೆಟ್ ನಿಮಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ನಿಮಗೆ ಹೋಲ್‌ಸೇಲ್ ದರದಲ್ಲಿಯೇ ಗ್ರಾಹಕರಿಗೆ ವಸ್ತುಗಳು ಲಭ್ಯವಾಗುತ್ತವೆ. ಕೆಆರ್ ಮಾರ್ಕೆಟ್‌ನಲ್ಲಿ ತರಕಾರಿ ಜೊತೆ ದಿನಸಿ ಪದಾರ್ಥಗಳು ಸಿಗುತ್ತವೆ. ಇನ್ನು ಬೆಂಗಳೂರಿನ ಎಸ್‌ಪಿ ರೋಡ್, ಎಲೆಕ್ಟ್ರಾನಿಕ್ ವಸ್ತುಗಳಿಗೆ ಜನಪ್ರಿಯವಾಗಿದೆ.

55
ಜಯನಗರ, ಶಿವಾಜಿನಗರ, ಚಿಕ್ಕಪೇಟೆ, ಮಲ್ಲೇಶ್ವರಂ

ಇನ್ನು ಬಟ್ಟೆ ಖರೀದಿಗೆ ಬೆಂಗಳೂರಿನ ಜಯನಗರ, ಮಲ್ಲೇಶ್ವರಂ, ಶಿವಾಜಿನಗರ ಮತ್ತು ಚಿಕ್ಕಪೇಟೆ ಜನಪ್ರಿಯ ತಾಣಗಳಾಗಿವೆ. ಈ ಏರಿಯಾಗಳನ್ನು ತಿಳಿದವರಿಗೆ ಎಲ್ಲಿ, ಏನು ಕಡಿಮೆ ಬೆಲೆಗೆ ಸಿಗುತ್ತೆ ಎಂಬುದರ ಮಾಹಿತಿ ಇರುತ್ತದೆ. ಬಟ್ಟೆ ಜೊತೆ ಫ್ಯಾಶನ್ ಆಕ್ಸೆಸರಿಸ್‌ಗಳು ಕಡಿಮೆ ಬೆಲೆ ಇಲ್ಲಿ ಸಿಗುತ್ತವೆ. ಈ ಭಾಗದಲ್ಲಿ ನಿಮಗೆ ಹೆಚ್ಚಿನ ಆಯ್ಕೆಗಳಿದ್ದು, ಗ್ರಾಹಕರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಈ ಸ್ಥಳಗಳ ಹೊರತಾಗಿಯೂ ಬೆಂಗಳೂರಿನ ಹಲವು ಭಾಗಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗಲಾರಂಭಿಸಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories