ಹೊಸ ವರ್ಷದಲ್ಲಿ ಹಲವು ನಿಯಮ ಬದಲಾಗಿದೆ. ಇದೀಗ ಹಲವು ಬ್ಯಾಂಕ್‌ಗಳು ಎಟಿಎಂ ಮೂಲಕ ಹಣ ಪಡೆಯುವ ನೀತಿಯಲ್ಲಿ ಕೆಲ ಬದಲಾವಣೆ ಮಾಡಿದೆ. ಇದೀಗ ಪ್ರತಿ ದಿನ ಇಂತಿಷ್ಟೆ ಹಣ ವಿತ್‌ಡ್ರಾ ಮಾಡಬೇಕು, ಹೆಚ್ಚು ಮಾಡುವಂತಿಲ್ಲ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಎಟಿಎಂ ಮೂಲಕ ಹಣ ಪಡೆಯಲು ಕೆಲ ಮಿತಿಗಳಿವೆ. ಇದೀಗ ಈ ಮಿತಿ ಮತ್ತಷ್ಟು ಬಿಗಿಗೊಂಡಿದೆ. ಇದೀಗ ವಿವಿಧ ಬ್ಯಾಂಕ್‌ಗಳು ದೈನಂದಿನ ಮಿತಿಗಳನ್ನು ನಿಗದಿಪಡಿಸಿವೆ. ಎಲ್ಲಾ ಎಟಿಎಂ ಕಾರ್ಡ್‌ಗಳಿಂದ ಒಂದು ನಿಗದಿತ ಮೊತ್ತವನ್ನು ಮಾತ್ರ ವಿತ್‌ಡ್ರಾ ಮಾಡಬಹುದು. ನಿಮ್ಮ ಕಾರ್ಡ್ ಯಾವುದು ಅನ್ನೋದರ ಮೇಲೆ ಮಿತಿಗಳು ನಿರ್ಧಾರವಾಗಲಿದೆ.
26
ಡೆಬಿಟ್ ಕಾರ್ಡ್ ಮಿತಿಗಳು
ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲೂ ಬೇರೆ ಬೇರೆ ವಿಧಗಳಿವೆ. ಇದರ ಆಧಾರದ ಮೇಲೆ ಎಟಿಎಂ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಪೈಕಿ ಮೆಸ್ಟ್ರೋ ಅಥವಾ ಕ್ಲಾಸಿಕ್ ಡೆಬಿಟ್ ಕಾರ್ಡ್‌ಗಳಿಂದ ದಿನಕ್ಕೆ ಗರಿಷ್ಠ 40,000 ರೂಪಾಯಿಗಳನ್ನು ವಿತ್‌ಡ್ರಾ ಮಾಡಬಹುದು ಎಂದು ವರದಿಯಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು 24 ಗಂಟೆಯಲ್ಲಿ ಎಟಿಎಂ ಮೂಲಕ ಡ್ರಾ ಮಾಡಲು ಸಾಧ್ಯವಿಲ್ಲ.
36
HDFC ಕಾರ್ಡ್ ಮಿತಿಗಳು
ಪ್ಲಾಟಿನಂ ಇಂಟರ್ನ್ಯಾಷನಲ್ ಕಾರ್ಡ್‌ಗಳಿಂದ ಗರಿಷ್ಠ 1 ಲಕ್ಷ ರೂಪಾಯಿಗಳನ್ನು ವಿತ್‌ಡ್ರಾ ಮಾಡಬಹುದು. ಹಲವಾರು HDFC ಕಾರ್ಡ್‌ಗಳಿಂದ ದಿನಕ್ಕೆ 25,000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ.
46
ವಿವಿಧ ಬ್ಯಾಂಕ್‌ಗಳ ಮಿತಿಗಳು
ವ್ಯಾಪಾರ ಉದ್ದೇಶಗಳಿಗಾಗಿ ಬಳಸುವ ಗೋಲ್ಡ್ ಡೆಬಿಟ್ ಕಾರ್ಡ್‌ಗಳಿಂದ 50,000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಟೈಟಾನಿಯಂ ರಾಯಲ್ ಡೆಬಿಟ್ ಕಾರ್ಡ್‌ಗಳಿಂದ ದಿನಕ್ಕೆ 75,000 ರೂಪಾಯಿಗಳನ್ನು ವಿತ್‌ಡ್ರಾ ಮಾಡಬಹುದು. ಯೆಸ್ ಬ್ಯಾಂಕ್‌ಗೆ, PMJDY RuPay ಚಿಪ್ ಡೆಬಿಟ್ ಕಾರ್ಡ್ ಮಿತಿ ದಿನಕ್ಕೆ 10,000 ರೂಪಾಯಿಗಳು, RuPay ಪ್ಲಾಟಿನಂ ಡೊಮೆಸ್ಟಿಕ್ ದಿನಕ್ಕೆ 25,000 ರೂಪಾಯಿಗಳು ಮತ್ತು ಎಮರ್ಜ್ ಡೆಬಿಟ್ ಕಾರ್ಡ್ ದಿನಕ್ಕೆ 3 ಲಕ್ಷ ರೂಪಾಯಿಗಳು.
56
ಕ್ಯಾನರಾ ಬ್ಯಾಂಕ್ ಮಿತಿಗಳು
ಕ್ಯಾನರಾ ಬ್ಯಾಂಕ್‌ಗೆ, ಕ್ಲಾಸಿಕ್ RuPay, ವೀಸಾ ಅಥವಾ ಸ್ಟ್ಯಾಂಡರ್ಡ್ ಮಾಸ್ಟರ್‌ಕಾರ್ಡ್‌ನಿಂದ ಗರಿಷ್ಠ 75,000 ರೂಪಾಯಿಗಳನ್ನು ವಿತ್‌ಡ್ರಾ ಮಾಡಬಹುದು. ಇತರ ಸಾಮಾನ್ಯ ಎಟಿಎಂ ಕಾರ್ಡ್‌ಗಳ ಮೇಲೂ ಮಿತಿ ಹೇರಲಾಗಿದೆ. ಹೀಗಾಗಿ ಎಷ್ಟು ಹಣ ಬೇಕಾದರೂ ಎಟಿಎಂ ಮೂಲಕ ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಹಣ ಬೇಕಾದಲ್ಲಿ ಬ್ಯಾಂಕ್ ಶಾಖೆಗೆ ತೆರಳಿ ಚೆಕ್ ಮೂಲಕ ಪಡೆಯಲು ಸಾಧ್ಯವಿದೆ.
66
RuPay & ಮಾಸ್ಟರ್‌ಕಾರ್ಡ್ ಮಿತಿಗಳು
RuPay ಪ್ಲಾಟಿನಂ ಮತ್ತು ಬಿಸಿನೆಸ್ ಪ್ಲಾಟಿನಂ NCMC ಕಾರ್ಡ್‌ಗಳು ದಿನಕ್ಕೆ 1 ಲಕ್ಷ ರೂಪಾಯಿಗಳ ವಿತ್‌ಡ್ರಾ ಮಿತಿಯನ್ನು ಹೊಂದಿವೆ. ವೀಸಾ ಸಿಗ್ನೇಚರ್ ಮತ್ತು ಮಾಸ್ಟರ್‌ಕಾರ್ಡ್ ಬಿಸಿನೆಸ್ ಡೆಬಿಟ್ ಕಾರ್ಡ್‌ಗಳು ದಿನಕ್ಕೆ 1.5 ಲಕ್ಷ ರೂಪಾಯಿಗಳ ವಿತ್‌ಡ್ರಾ ಮಿತಿಯನ್ನು ಹೊಂದಿವೆ. ನಿಮ್ಮ ಎಟಿಎಂ ಕಾರ್ಡ್ ಯಾವದು ಎಂದು ಪರಿಶೀಲಿಸಿಕೊಳ್ಳಿ. ಇದರ ಜೊತೆಗೆ ನಿಮ್ಮ ದೈನಂದಿನ ಗರಿಷ್ಠ ಮಿತಿ ಕುರಿತು ಅರಿತುಕೊಳ್ಳಿ.